• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • DC vs KKR: ಟಾಸ್​ ಗೆದ್ದ ವಾರ್ನರ್​ ಬೌಲಿಂಗ್​ ಆಯ್ಕೆ, ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ

DC vs KKR: ಟಾಸ್​ ಗೆದ್ದ ವಾರ್ನರ್​ ಬೌಲಿಂಗ್​ ಆಯ್ಕೆ, ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ

IPL 2023 KKR vs DC

IPL 2023 KKR vs DC

IPL 2023 DC vs KKR: ಮಳೆಯ ಕಾರಣ ಪಂದ್ಯದ ಟಾಸ್​ ವಿಳಂಬವಾಯಿತು. ಸುಮಾರು 1 ಗಂಟೆಗಳ ಕಾಲ ತಡವಾಗಿ ಪಂದ್ಯ ಆರಂಭವಾಗುತ್ತಿದ್ದು,ಟಾಸ್​ ಗೆದ್ದ ಡೆಲ್ಲಿ ನಾಐಕ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

  • Share this:

ಐಪಿಎಲ್ ಡಬಲ್ ಹೆಡರ್‌ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (DC vs KKR) ತಂಡಗಳು ಮುಖಾಮುಖಿಯಾಗಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jaitley Stadium) ಈ ಪಂದ್ಯ ನಡೆಯುತ್ತಿದೆ. ಈ ಸೀಸನ್​ನಲ್ಲಿ ಒಂದೇ ಒಂದು ಗೆಲುವಿಗಾಗಿ ಹಾತೊರೆಯುತ್ತಿರುವ ಡೇವಿಡ್ ವಾರ್ನರ್ ತಂಡ ಸತತ 5 ಪಂದ್ಯಗಳಲ್ಲಿ ಸೋತಿದೆ. ಅವರಿಗೆ ಕೆಕೆಆರ್ ವಿರುದ್ಧದ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ, ಕೋಲ್ಕತ್ತಾ ವಿರುದ್ಧ ದೆಹಲಿಯ ಹಾದಿ ಸುಲಭವಾಗಿಲ್ಲ. ಆದರೆ ಪಂದ್ಯವನ್ನು ಗೆಲ್ಲಬೇಕೆಂಬ ಆಸೆಯಲ್ಲಿದ್ದ ಡೆಲ್ಲಿ ತಂಡಕ್ಕೆ ವರುಣ ಅಡ್ಡಿಪಡಿಸಿದೆ. ಮಳೆಯ ಕಾರಣ ಪಂದ್ಯದ ಟಾಸ್​ ವಿಳಂಬವಾಯಿತು. ಸುಮಾರು 1 ಗಂಟೆಗಳ ಕಾಲ ತಡವಾಗಿ ಪಂದ್ಯ ಆರಂಭವಾಗುತ್ತಿದ್ದು,ಟಾಸ್​ ಗೆದ್ದ ಡೆಲ್ಲಿ ನಾಐಕ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.


ಇನ್ನು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು. ನಿಮ್ಮ ಮೊಬೈಲ್‌ನಲ್ಲಿರುವ Jio ಸಿನಿಮಾ ಅಪ್ಲಿಕೇಶನ್‌ನಲ್ಲಿ ನೀವು ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಉಚಿತವಾಗಿ ವೀಕ್ಷಿಸಬಹುದು.


ಪಂದ್ಯಕ್ಕೆ ಮಳೆ ಅಡ್ಡಿ:


ಮಳೆಯಿಂದಾಗಿ ಡೆಲ್ಲಿ ಮತ್ತು ಕೋಲ್ಕತ್ತಾ ಪಂದ್ಯದ ಟಾಸ್ ತಡವಾಯಿತು. ಅಂಪೈರ್‌ಗಳು ಸ್ವಲ್ಪ ಸಮಯದ ನಂತರ ಪಿಚ್ ಅನ್ನು ಪರಿಶೀಲಿಸಿ ಪಂದ್ಯದ ಆರಂಭದ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಪಂದ್ಯಕ್ಕೆ ಮಳೆಯ ಕಾರಣ 6ಂದೂವರೆ ಗಂಟೆಗೂ ಹೆಚ್ಚಿನ ಕಾಲ ಮುಂದೂಡಲ್ಪಟ್ಟಿದೆ. ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಳೆರಾಯ ಅಡ್ಡಿಪಡಿಸಿದಂತಾಗಿತ್ತು. ಆದರೆ ಇದೀಗ ಪಂದ್ಯ ಆರಂಭವಾಗಲಿದೆ.


ಕೋಲ್ಕತ್ತಾ - ಡೆಲ್ಲಿ ಹೆಡ್​ ಟು ಹೆಡ್​:


ಈವರೆಗೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಒಟ್ಟಾರೆ 31 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೋಲ್ಕತ್ತಾ 16 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ 14 ಪಂದ್ಯಗಳನ್ನು ಗೆದ್ದಿದೆ. ಪಂದ್ಯವು ಅನಿರ್ದಿಷ್ಟವಾಗಿದೆ. ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಡೇವಿಡ್ ವಾರ್ನರ್ ಈ ಋತುವಿನಲ್ಲಿ 228 ರನ್ ಗಳಿಸಿದ್ದಾರೆ. ಆದಾಗ್ಯೂ, ಈ ಸಮಯದಲ್ಲಿ ವಾರ್ನರ್ ಅವರ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ವಾರ್ನರ್ 116.92 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.


ಐಪಿಎಲ್ ಅಂಕಪಟ್ಟಿ:


ಕೋಲ್ಕತ್ತಾ ನೈಟ್ ರೈಡರ್ಸ್ ಇದುವರೆಗೆ ಆಡಿದ 5 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿದೆ ಮತ್ತು 3 ರಲ್ಲಿ ಸೋತಿದೆ. ಈ ಮೂಲಕ 4 ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 5ರಲ್ಲಿಯೂ ಸೋಲನ್ನು ಅನುಭವಿಸಿದೆ. ಹೀಗಾಗಿ ಡೆಲ್ಲಿ ತಂಡ ಐಪಿಎಲ್​ ಅಂಕಪಟ್ಟಿಯಲ್ಲಿ ಕೊನೆಯ ಅಂದರೆ 10ನೇ ಸ್ಥಾನದಲ್ಲಿದೆ. ಅಲ್ಲದೇ ಡೆಲ್ಲಿ ಇಂದಿನ ಪಂದ್ಯ ಗೆದ್ದರೂ ಸಹ 10ನೇ ಸ್ಥಾನದಲ್ಲಿಯೇ ಉಳಿಯಲಿದೆ.


ಕೆಕೆಆರ್​ -ಡಿಸಿ ಪ್ಲೇಯಿಂಗ್​ 11:


ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್​ 11: ಜೇಸನ್ ರಾಯ್, ಲಿಟನ್ ದಾಸ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಮಂದೀಪ್ ಸಿಂಗ್, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಕುಲ್ವಂತ್ ಖೆಜ್ರೋಲಿಯಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.


ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ 11: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಕುಲ್ದೀಪ್ ಯಾದವ್, ಎನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಮುಖೇಶ್ ಕುಮಾರ್.

top videos
    First published: