ಐಪಿಎಲ್ ಪ್ಲೇಆಫ್‌ನಲ್ಲಿ ಆಡುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಆಸೆ ಇನ್ನೂ ಜೀವಂತವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ವಿರುದ್ಧ ತವರಿನ ಕೊನೆಯ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಹಂತಕ್ಕೆ ತಲುಪಲಿದೆ. ಅಲ್ಲಿಯವರೆಗೆ ಉಳಿದ ತಂಡಗಳ ಇತರೆ ಪಂದ್ಯಗಳ ಸೋಲು ಗೆಲುವಿನ ಮೇಲೆ ನಿಂತಿರಬೇಕಿದೆ. ಅದೇನೇ ಇರಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಸೋಲಿಸಿ ಕೆಕೆಆರ್ ತಂಡ ಉತ್ಸಾಹದಲ್ಲಿದೆ. ಅಫ್ಘಾನಿಸ್ತಾನದ ಆಟಗಾರ ರಹಮಾನುಲ್ಲಾ ಗುರ್ಬಾಜ್ (Rahmanullah Gurbaz) ಮೊದಲ ಬಾರಿಗೆ ಕೆಕೆಆರ್ ತಂಡದಲ್ಲಿ ಆಡಿದ ನಂತರ ಕೋಲ್ಕತ್ತಾದ ರಸಗುಲ್ಲಾಗಳನ್ನು ಸವಿದಿದ್ದಾರೆ. ಕೆಕೆಆರ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಗುರ್ಬಾಜ್ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ.
ರಸಗುಲ್ಲಾ ಸವಿದ ಕೋಲ್ಕತ್ತಾ ಆಟಗಾರ:
ಅವರು ಅಫ್ಘಾನಿಸ್ತಾನದ ಕ್ರಿಕೆಟಿಗರಾಗಿದ್ದರೂ, ಅವರು ಭಾರತೀಯ ಸಿನಿಮಾ, ಕ್ರಿಕೆಟ್ ಮತ್ತು ಭಾರತೀಯ ಆಹಾರದ ಬಗ್ಗೆ ಒಲವು ಹೊಂದಿದ್ದಾರೆ. ಕೆಕೆಆರ್ ತಂಡ ಆಡಲು ಹೋದಲ್ಲೆಲ್ಲಾ ಅಲ್ಲಿನ ಸ್ಥಳೀಯ ತಿನಿಸುಗಳನ್ನು ಸವಿದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪಂದ್ಯದ ಬಳಿಕ ಸಹ ಬಿರಿಯಾನಿ ಸವಿದಿದ್ದರು. ಗುರ್ಬಾಜ್ ಗೆ ಕೋಲ್ಕತ್ತಾದ ಆಹಾರ ಸಂಸ್ಕೃತಿಯ ಪರಿಚಯ ಮಾಡಿಕೊಂಡಿದ್ದು, ಅದಕ್ಕಾಗಿಯೇ ಅವರು ಕೋಲ್ಕತ್ತಾದಲ್ಲಿ ರಸಗುಲ್ಲಾಗಳನ್ನು ಸವಿಯುತ್ತಿದ್ದಾರೆ.
View this post on Instagram
ಗುರ್ಬಾಜ್ ಭಾರತೀಯ ಚಿತ್ರರಂಗದ ಬಗ್ಗೆಯೂ ತಿಳಿದಿದ್ದಾರೆ. ಅವರು ಪ್ರತಿ ಹೊಸ ಭಾರತೀಯ ಚಲನಚಿತ್ರವನ್ನು ವೀಕ್ಷಿಸುತ್ತಾರಂತೆ. ಹಾಗಾಗಿ ಭಾರತೀಯ ನಟ-ನಟಿಯರ ನಟನಾ ಶೈಲಿಯ ಬಗ್ಗೆಯೂ ಅವರಿಗೆ ತಿಳಿದಿದೆ. ಅಲ್ಲಿಂದಲೇ ಶಾರುಖ್ ಖಾನ್ ಅವರತ್ತ ಆಕರ್ಷಿತರಾಗಿದ್ದರಂತೆ. ಈ ಕುರಿತು ಮಾತನಾಡಿರುವ ಅವರು, 'ನನಗೆ ಇದೆಲ್ಲವೂ ಕನಸಿನಂತೆ. ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಮತ್ತು ಈಗ ನಾನು ಶಾರುಖ್ ಖಾನ್ ತಂಡದಲ್ಲಿ ಆಡುತ್ತೇನೆ. ಕೆಕೆಆರ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ತಂಡದ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದಿದ್ದಾರೆ.
ಈಡನ್ ಗಾರ್ಡನ್ ನಲ್ಲಿ ನಡೆದ ಐಪಿಎಲ್ ನ ಮೊದಲ ಪಂದ್ಯವನ್ನು ವೀಕ್ಷಿಸಲು ಸ್ವತಃ ಶಾರುಖ್ ಖಾನ್ ಬಂದಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ದೊಡ್ಡ ಗೆಲುವಿನ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಭಿನಂದಿಸಲು ಶಾರುಖ್ ಖಾನ್ ಸ್ವತಃ ಡ್ರೆಸ್ಸಿಂಗ್ ಕೋಣೆಗೆ ಬಂದಿದ್ದರು. ಆ ವೇಳೆ ನಾನು ಅವರನ್ನು ಭೇಟಿಯಾಗಿದ್ದೆ ಎಂದಿದ್ದಾರೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದು ಗುರ್ಬಾಜ್ ಹೇಳಿದ್ದಾರೆ. ಶಾರುಖ್ ಖಾನ್ ವಿಶ್ವದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರು ನನ್ನೊಂದಿಗೆ ಮಾತನಾಡುವ ರೀತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಅವರ ಮಾತಿನಲ್ಲಿನ ಸೌಜನ್ಯ ಮತ್ತು ನಮ್ರತೆ ನನಗೆ ಅನಿರೀಕ್ಷಿತವಾಗಿತ್ತು. ಅವರು ವಿಶ್ವದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಧೋನಿ ನನಗೆ ಸ್ಪೂರ್ತಿ:
ಗುರ್ಬಾಜ್ ಇಂದು ಕೆಕೆಆರ್ ತಂಡದಲ್ಲಿದ್ದರೂ ಕ್ರಿಕೆಟಿಗನಾಗುವುದು ಅವರಿಗೆ ಸುಲಭವಾಗಿರಲಿಲ್ಲ. ಅವರ ಕುಟುಂಬಕ್ಕೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿರಲಿಲ್ಲ. ಗುರ್ಬಾಜ್ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ನೂರ್ಜ್ ಮಂಗಲ್ ಅವರಿಂದ ಸ್ಫೂರ್ತಿ ಪಡೆದಿದ್ದಾರಂತೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಮಹೇಂದ್ರ ಸಿಂಗ್ ಧೋನಿ ಅವರಿಂದ ಸ್ಫೂರ್ತಿ ಪಡೆದಿದ್ದರು. ಗುರ್ಬಾಜ್ ಧೋನಿ ಆಟದಿಂದ ಕಲಿತಿದ್ದಾರೆ. ಗುರ್ಬಾಜ್ ಒಮ್ಮೆ ಫುಟ್ಬಾಲ್ ಆಡಿದರು, ಅಲ್ಲಿ ಅವರು ಗೋಲ್ಕೀಪರ್ ಆಗಿ ಆಡಿದ್ದರು. ಹಾಗಾಗಿ ಅವರು ಕ್ರಿಕೆಟ್ ಆಡಲು ಪ್ರಾರಂಭಿಸಿದ ನಂತರ, ವಿಕೆಟ್ ಕೀಪರ್ ಆಗಲು ತುಂಬಾ ಕಷ್ಟವಾಗಲಿಲ್ಲ ಎಂದು ಅವರ ಕೋಚ್ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ