• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • GT vs RR: ಟಾಸ್​ ಗೆದ್ದ ರಾಜಸ್ಥಾನ್​ ಫೀಲ್ಡಿಂಗ್ ಆಯ್ಕೆ, ಅಗ್ರಸ್ಥಾನದ ಮೇಲೆ ಹಾರ್ದಿಕ್​ ಕಣ್ಣು

GT vs RR: ಟಾಸ್​ ಗೆದ್ದ ರಾಜಸ್ಥಾನ್​ ಫೀಲ್ಡಿಂಗ್ ಆಯ್ಕೆ, ಅಗ್ರಸ್ಥಾನದ ಮೇಲೆ ಹಾರ್ದಿಕ್​ ಕಣ್ಣು

IPl 2023 GT vs RR

IPl 2023 GT vs RR

GT vs RR: ಟಾಸ್​ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಗುಜರಾತ್ ಟೈಟಾನ್ಸ್‌ನ ಆರಂಭಿಕ ಜೋಡಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

  • Share this:

ಐಪಿಎಲ್ 2023 (IPl 2023)ರ 23ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಸೆಣಸಲಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಈ ಸೀಸನ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇಂದಿನ ಪಂದ್ಯ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಬದಲಾವಣೆ ತರಲು ಉಭಯ ತಂಡಗಳು ಎದುರು ನೋಡುತ್ತಿವೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಗುಜರಾತ್ ಟೈಟಾನ್ಸ್‌ನ ಆರಂಭಿಕ ಜೋಡಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ.


ಗುಜರಾತ್ - ರಾಜಸ್ಥಾನ ಹೆಡ್ ಟು ಹೆಡ್:


ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಒಟ್ಟು ಮೂರು ಪಂದ್ಯಗಳು ನಡೆದಿವೆ. ಈ ಸಮಯದಲ್ಲಿ, ಜಿಟಿ ತಂಡವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ. ಕಳೆದ ಋತುವಿನ ಫೈನಲ್ ಪಂದ್ಯ ಕೂಡ ಈ ಎರಡು ತಂಡಗಳ ನಡುವೆ ನಡೆದಿತ್ತು. ಈ ವೇಳೆ ಗುಜರಾತ್ ತಂಡ ರಾಜಸ್ಥಾನವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.ಐಪಿಎಲ್​ 2023 ಅಂಕಪಟ್ಟಿ:


ಐಪಿಎಲ್​ 2023ರ 16ನೇ ಸೀಸನ್​ನಲ್ಲಿ ಗುಜರಾತ್ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಏತನ್ಮಧ್ಯೆ, ತಂಡವು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಕೇವಲ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. GT ಪ್ರಸ್ತುತ ಅಂಕಪಟ್ಟಿಯಲ್ಲಿ ಆರು (+0.342) ಅಂಕಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅದೇ ಸಮಯದಲ್ಲಿ, ರಾಜಸ್ಥಾನ ತಂಡವು ನಡೆಯುತ್ತಿರುವ ಋತುವಿನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದೆ. ಆರ್‌ಆರ್ ಮೂರು ಗೆಲುವು ಮತ್ತು ಒಂದು ಸೋಲನ್ನು ಸಹ ಎದುರಿಸಿದೆ. ತಂಡವು ಆರು (+1.588) ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.


ಇದನ್ನೂ ಓದಿ: RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್


ಹೊಸ ಇತಿಹಾಸ ನಿರ್ಮಿಸಿದ ಮುಂಬೈ-ಕೆಕೆಆರ್ ಪಂದ್ಯ:


ಐಪಿಎಲ್​ ಆರಂಭದ ವರ್ಷ ಅಂದರೆ 2008ರಲ್ಲಿ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ಪರ ಬ್ರೆಂಡಂ​ ಮೆಲಕಮ್​ ಚೊಚ್ಚಲ ಐಪಿಎಲ್​ ಶತಕ ಸಿಡಿಸಿದರು. ಆಬಳಿಕ ಬರೋಬ್ಬರಿ 16 ವರ್ಷಗಳವರಡೆಗೂ ಕೋಲ್ಕತ್ತಾ ಪರ ಯಾವೊಬ್ಬ ಬ್ಯಾಟ್ಸ್​ಮನ್​ ಸಹ ಶತಕ ಸಿಡಿಸಿರಲಿಲ್ಲ. ಇದೀಗ ವೆಂಕಟೇಶ್​ ಅಯ್ಯರ್ 5476 ದಿನಗಳ ಬಳಿಕ ಭರ್ಜರಿ ಶತಕ ಸಿಡಿಸಿದ್ದಾರೆ. ಇದೂ ಒಂದು ತಂಡವು ಶತಕ ಸಿಡಿಸುವಲ್ಲಿ ತೆಗೆದುಕೊಂಡ ಸುದೀರ್ಘ ವರ್ಷಗಳಾಗಿದೆ.
ರಾಜಸ್ಥಾನ್​ - ಗುಜರಾತ್​ ಪ್ಲೇಯಿಂಗ್​ 11:


ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್​ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್ ಮತ್ತು ಆಡಮ್ ಝಂಪಾ.


ಗುಜರಾತ್ ಟೈಟಾನ್ಸ್ ಪ್ಲೇಯಿಂಗ್​ 11: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ ಮತ್ತು ಮೋಹಿತ್ ಶರ್ಮಾ.

top videos
    First published: