ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಸೀಸನ್‌ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗೆ ಪೈಪೋಟಿ ನಡೆಯಿತು. ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ರಶೀದ್ ಖಾನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ಇಂದಿನ ಪಂದ್ಯದಲ್ಲಿ ಆಡಲಿಲ್ಲ. ವಿಜಯ್ ಶಂಕರ್ 21 ಎಸೆತಗಳಲ್ಲಿ ಬಿರುಸಿನ ಅರ್ಧಶತಕ ಗಳಿಸಿದರು ಮತ್ತು ಗುಜರಾತ್ 4 ವಿಕೆಟ್‌ಗೆ 204 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 207 ರನ್ ಗಳಿಸುವ ಮೂಲಕ 3 ವಿಕೆಟ್ಗಳ ರೋಚಕ ಜಯ ದಾಖಲಸಿದೆ.
ರಿಂಕು ಸತತ 5 ಸಿಕ್ಸರ್:
ಗುಜರಾತ್ ನೀಡಿದ 205 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡ ರಹಮಾನುಲ್ಲಾ ಗುರ್ಬಾಜ್ ಮತ್ತು ಎನ್ ಜಗದೀಸನ್ ಆರಂಭಿಕ ಹಿನ್ನಡೆ ಅನುಭವಿಸಿದರು. ನಾಯಕ ನಿತೀಶ್ ರಾಣಾ ವೆಂಕಟೇಶ್ ಅಯ್ಯರ್ ಜೊತೆಗೂಡಿ 100 ರನ್ ಜೊತೆಯಾಟ ನಡೆಸಿ ತಂಡವನ್ನು ಮರಳಿ ಟ್ರ್ಯಾಕ್ಗೆ ತಂದರು. 46 ರನ್‌ಗಳ ಇನಿಂಗ್ಸ್‌ನಲ್ಲಿ ನಾಯಕನ ವಿಕೆಟ್ ಪತನವಾಯಿತು. ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಗಳಿಸಿದರು. 40 ಎಸೆತಗಳಲ್ಲಿ 83 ರನ್ ಗಳಿಸಿದ ನಂತರ ಅಲ್ಜಾರಿ ಜೋಸೆಫ್ ಅವರನ್ನು ಔಟ್ ಮಾಡಿದರು.
𝗥𝗜𝗡𝗞𝗨 𝗦𝗜𝗡𝗚𝗛! 🔥 🔥
𝗬𝗼𝘂 𝗔𝗯𝘀𝗼𝗹𝘂𝘁𝗲 𝗙𝗿𝗲𝗮𝗸! ⚡️ ⚡️
Take A Bow! 🙌 🙌
28 needed off 5 balls & he has taken @KKRiders home & how! 💪 💪
Those reactions say it ALL! ☺️ 🤗
Scorecard ▶️ https://t.co/G8bESXjTyh #TATAIPL | #GTvKKR | @rinkusingh235 pic.twitter.com/Kdq660FdER
— IndianPremierLeague (@IPL) April 9, 2023
ಇದನ್ನೂ ಓದಿ: Shreyas Iyer: ಚಹಾಲ್ ಪತ್ನಿ ಜೊತೆ ಶ್ರೇಯಸ್ ಅಯ್ಯರ್ ಸಖತ್ ಪಾರ್ಟಿ! ಪತಿಯಿಂದ ದೂರವಾಗ್ತಿದ್ದಾರಾ ಧನಶ್ರೀ ವರ್ಮಾ?
ಈ ಬಾರಿಯ ಹ್ಯಾಟ್ರಿಕ್ ವಿಕೆಟ್:
ಕೋಲ್ಕತ್ತಾ ವಿರುದ್ಧ ನಾಯಕತ್ವ ವಹಿಸಿದ್ದ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಪಂದ್ಯದ ಸಂಪೂರ್ಣ ಗತಿಯನ್ನೇ ಬದಲಿಸಿದರು. ಆಂಡ್ರೆ ರಸೆಲ್, ಸುನಿಲ್ ನರೈನ್ ಮತ್ತು ನಂತರ ಶಾರ್ದೂಲ್ ಠಾಕೂರ್ ಅವರನ್ನು ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಎಲ್‌ಬಿಡಬ್ಲ್ಯು ಮೂಲಕ ಶಾರ್ದೂಲ್ ಔಟ್ ಆದರೆ ರಸೆಲ್ ಮತ್ತು ನರೇನ್ ಕ್ಯಾಚಿತ್ತು ಔಟಾದರು. ಈ ಮೂಲಕ ರಶೀದ್ ಖಾನ್ ಐಪಿಎಲ್ 2023ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಉಳಿದಂತೆ ಜೋಸೆಫ್ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು. ಆದರೂ ಅಂತಿಮವಾಗಿ ಬೌಲಿಂಗ್ ಮಾಡಿದ ಯಶ್ ದಯಾಲ್ ಬರೋಬ್ಬರಿ 5 ಸಿಕ್ಸ್ ನೀಡುವ ಮೂಲಕ ಪಂದ್ಯವನ್ನು ಕೈಚಲ್ಲಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ