KKR vs GT: ಟಾಸ್​ ಗೆದ್ದ ಗುಜರಾತ್​ ಟೈಟನ್ಸ್, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

GT vs KKR

GT vs KKR

IPL 2023, GT vs KKR: ಪಂದ್ಯದ ಟಾಸ್​ ಆಗಿದ್ದು, ಟಾಸ್​ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನ 39ನೇ (IPL 2023) ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ (KKR vs GT) ನಡುವಿನ ಪಂದ್ಯ ಆರಂಭವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸತತ ನಾಲ್ಕು ಸೋಲಿನ ನಂತರ ಕೊನೆಯ ಪಂದ್ಯವನ್ನು ಗೆದ್ದುಕೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  ವಿರುದ್ಧ ಗೆಲುವಿನ ಟ್ರ್ಯಾಕ್​ಗೆ ಮರಳಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವಿದೆ. ಕಳೆದ ಎರಡು ಪಂದ್ಯಗಳಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಮತ್ತು ಮುಂಬೈ ತಂಡಗಳು ಗುಜರಾತ್ ವಿರುದ್ಧ ಸೋಲು ಕಂಡಿವೆ. ಈ ಋತುವಿನಲ್ಲಿ ಕೋಲ್ಕತ್ತಾ ತಂಡ ಗುಜರಾತ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು. ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ ಸತತ 5 ಸಿಕ್ಸರ್ ಬಾರಿಸಿದರು. ಪಂದ್ಯದ ಟಾಸ್​ ಆಗಿದ್ದು, ಟಾಸ್​ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.


ಇಂದು ಡಬಲ್​ ಹೆಡ್ಡರ್​ ಪಂದ್ಯ:


ಇಂದು ಮೊದಲ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಸೆಣಸಾಡುತ್ತಿದೆ. ಬಳಿಕ ಸಂಜೆ 7:30ಕ್ಕೆ ನಡೆಯಲಿರುವ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಸೆಣಸಾಡಲಿದೆ. ಹೀಗಾಗಿ ಕ್ರಿಕೆಟ್​ ಪ್ರೀಯರಿಗೆ ಸೂಪರ್​ ವೀಕೆಂಡ್​ಗೆ 2 ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.


ಐಪಿಎಲ್ ಅಂಕಪಟ್ಟಿ:


ಹಾರ್ದಿಕ್ ಪಾಂಡ್ಯ ಸಾರಥ್ಯದ ತಂಡ 7 ಪಂದ್ಯಗಳಲ್ಲಿ 5 ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದರೆ, ನಿತೀಶ್ ರಾಣಾ ಪಡೆ 8 ಪಂದ್ಯಗಳನ್ನು ಆಡಿ 3 ಪಂದ್ಯಗಳನ್ನು ಮಾತ್ರ ಗೆದ್ದು 7 ನೇ ಸ್ಥಾನದಲ್ಲಿದೆ. ಉಳಿಂದತೆ ಮೊದಲ ಸ್ಥಾನದಲ್ಲಿ ರಾಜಸ್ಥಾನ್​ ರಾಯಲ್ಸ್ ತಂಡವಿದೆ. ಕ್ರಮವಾಗಿ ಲಕ್ನೋ ಸೂಪರ್​ ಜೈಂಟ್ಸ್, ಗುಜರಾತ್​ ಟೈಟನ್ಸ್, ಚೆನ್ನೈ ಸೂಪರ್​ ಕಿಂಗ್ಸ್, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್, ಮುಂಬೈ ಇಂಡಿಯನ್ಸ್, ಸನ್​ರೈಸರ್ಸ್​ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ತಂಡವಿದೆ.


ಇದನ್ನೂ ಓದಿ: LSG vs PBKS: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಲಕ್ನೋ ತಂಡ, ಸ್ವಲ್ಪದರಲ್ಲಿಯೇ RCB ದಾಖಲೆ ಸೇಫ್​!


ಗುಜರಾತ್​- ಕೋಲ್ಕತ್ತಾ ಹೆಡ್ ಟು ಹೆಡ್:


ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡು ತಂಡಗಳ ನಡುವಿನ ಪೈಪೋಟಿ ಕುರಿತು ಮಾತನಾಡುತ್ತಾ, ಇದುವರೆಗೆ ಕೇವಲ 2 ಮುಖಾಮುಖಿಯಾಗಿದೆ. ಮೊದಲ ಬಾರಿ ಕೋಲ್ಕತ್ತಾ ತಂಡ ಗುಜರಾತ್ ವಿರುದ್ಧ ಸೋಲು ಕಂಡಿತು. ಬಳಿಕ ಗುಜರಾತ್​ನಲ್ಲಿ ನಡೆದ 2ನೇ ಮುಖಾಮುಖಿಯಲ್ಲಿ ಕೋಲ್ಕತ್ತಾ ತಂಡವು ಸೇಡು ತೀರಿಸಿಕೊಂಡಿತು. 2ನೇ ಬಾರಿ ಗುಜರಾತ್​ ವಿರುದ್ಧ ಕೋಲ್ಕತ್ತಾ ತಂಡವು ರೋಚಕ ಜಯ ದಾಖಲಿಸಿತ್ತು. ಹೀಗಾಗಿ ಉಭಯ ತರಂಡಗಳು ಸಮಬಲದ ಹೋರಾಟ ನೀಡುವ ಸಾಧ್ಯತೆ ಇದೆ.




ಈಡನ್ ಗಾರ್ಡನ್ಸ್ ಪಿಚ್ ವರದಿ:


ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿರುವ ಪಿಚ್ ಟಿ20 ಪಂದ್ಯಗಳಿಗೆ ಉತ್ತಮ ಪಿಚ್​ ಆಗಿದೆ. ಶಾರ್ಟ್ ಬೌಂಡರಿಯು ಸ್ಥಳದಲ್ಲಿ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ. ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 235 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಚೇಸಿಂಗ್ ತಂಡವು ಈಡನ್ ಗಾರ್ಡನ್ಸ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ ಆದರೆ ಮೊದಲು ಬ್ಯಾಟಿಂಗ್ ಮಾಡುವ ತಂಡವು 200 ಪ್ಲಸ್ ಸ್ಕೋರ್ ಮಾಡಲು ಸಾಧ್ಯವಾದರೆ ಗೆಲುವಿನ ನಿರೀಕ್ಷೆಯಿದೆ.


KKR vs GT ಪ್ಲೇಯಿಂಗ್​ 11:


ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ಎನ್ ಜಗದೀಸನ್, ರಹಮಾನುಲ್ಲಾ ಗುರ್ಬಾಜ್ (w), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ಸಿ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.


ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ವೃದ್ಧಿಮಾನ್ ಸಹಾ(ಪ), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ಸಿ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್.

First published: