• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023, GT vs CSK Final: ಚೆನ್ನೈ-ಗುಜರಾತ್​ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿ, ಇಂದು ಮ್ಯಾಚ್​ ನಡೆಯುವುದೇ ಡೌಟ್​?

IPL 2023, GT vs CSK Final: ಚೆನ್ನೈ-ಗುಜರಾತ್​ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿ, ಇಂದು ಮ್ಯಾಚ್​ ನಡೆಯುವುದೇ ಡೌಟ್​?

ಚೆನ್ನೈ vs ಗುಜರಾತ್​

ಚೆನ್ನೈ vs ಗುಜರಾತ್​

IPL 2023 Final: ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ತಂಡದೊಂದಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2023 ಟ್ರೋಫಿಯನ್ನು ವಶಪಡಿಸಿಕೊಳ್ಳಲು ಕಾತುರರಾಗಿದ್ದಾರೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) ಸೂಪರ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ (CSK vs GT) ಅನ್ನು ಎದುರಿಸಲಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ತಂಡದೊಂದಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ 2023 ಟ್ರೋಫಿಯನ್ನು ವಶಪಡಿಸಿಕೊಳ್ಳಲು ಕಾತುರರಾಗಿದ್ದಾರೆ. 4-ಬಾರಿ ಚಾಂಪಿಯನ್ ಚೆನ್ನೈ ಐದನೇ ಬಾರಿಗೆ ಗೆದ್ದು ಮುಂಬೈ ಇಂಡಿಯನ್ಸ್​ ಜೊತೆ ಸರಿಸಮವಾಗಲು ಸಿದ್ಧವಾಗಿದೆ. ಆದರೆ ಗುಜರಾತ್ ಸತತ ಎರಡನೇ ಬಾರಿಗೆ ಐಪಿಎಲ್ ಗೆದ್ದ ಮೂರನೇ ತಂಡವಾಗಲು ರೆಡಿಯಾಗಿದೆ. ಆದರೆ ಈ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.


ಮಳೆಯಿಂದಾಗಿ ಟಾಸ್ ವಿಳಂಬ:


ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್‌ಗೆ ಮಳೆ ಅಡ್ಡಿಪಡಿಸಿದೆ. ಮಳೆಯಿಂದಾಗಿ ಟಾಸ್ ವಿಳಂಬವಾಗಿದೆ. ಸದ್ಯಕ್ಕೆ ಮಳೆಯಾಗುತ್ತಿದ್ದು, ನೆಲದ ಮೇಲಿನ ಹೊದಿಕೆಗಳೂ ಅಂಟಿಕೊಂಡಿವೆ. ಮಳೆ ನಿಂತ ತಕ್ಷಣ ಗ್ರೌಂಡ್ ಒಣಗಿಸುವ ಕಾರ್ಯ ಆರಂಭವಾಗಲಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆಯು ತುಂಬಾ ಉತ್ತಮವಾಗಿರುವುದರಿಂದ ಪಂದ್ಯ ಆರಮಭವಾಗುವ ಸಾಧ್ಯತೆಯೂ ಹೆಚ್ಚಿದೆ. ಅಹಮದಾಬಾದ್‌ನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮತ್ತು ನಿಲ್ಲುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.



ಪಂದ್ಯದ ಕಥೆ ಏನು?:


ಇನ್ನು, ಮಳೆ ನಿಂತ ನಂತರ 9.40ಕ್ಕೆ ಪಂದ್ಯಕ್ಕೆ ಮೈದಾನ ಸಿದ್ಧವಾದರೆ, ಐಪಿಎಲ್ ಫೈನಲ್‌ನಲ್ಲಿ ಒಂದೇ ಒಂದು ಓವರ್ ಕೂಡ ಕಟ್ ಆಗುವುದಿಲ್ಲ. ಗುಜರಾತ್ ಮತ್ತು ಚೆನ್ನೈ ನಡುವಿನ ಈ ಪಂದ್ಯ ಸಂಪೂರ್ಣ 20 ಓವರ್‌ಗಳವರೆಗೆ ನಡೆಯಲಿದೆ. ಒಂದು ವೇಳೆ ಇದು ಸಾಧ್ಯವಾಗದಿದೆ ಪಂದ್ಯ 11:56ಕ್ಕೆ ಆರಂಭವಾದರೆ ಪಂದ್ಯವನ್ನು 5 ಓವರ್​ಗಳಿಗೆ ಸಿಮಿತ ಮಾಡಲಾಗುತ್ತದೆ. ಇನ್ನು, ಪಂದ್ಯ ಸಂಪೂರ್ಣವಾಗಿ ನಡೆಯದಿದ್ದರೆ, ನಾಳೆಗೆ ಮುದೂಡಲಾಗುತ್ತದೆ. ಆದರೆ ನಾಳೆ ಸೂಪರ್​ ಓವರ್​ ಮೂಲಕ ಪಂದ್ಯ ನಡೆಸುವ ಸಾಧ್ಯತೆಯೂ ಹೆಚ್ಚಿದೆ.



ಐಪಿಎಲ್​ 2023 ಕಪ್​ಗಾಗಿ ಭರ್ಜರಿ ಫೈಪೋಟಿ:


ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್‌ನ ಆರಂಭ ಎಲ್ಲಿ ನಡೆದಿತ್ತೋ, ಅಂತ್ಯವೂ ಅದೇ ರೀತಿಯಲ್ಲಿ ನಡೆಯುತ್ತಿದೆ. ಮಾರ್ಚ್ 31 ರಂದು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಯಿತು ಮತ್ತು ಈಗ ಅದೇ ಎರಡು ತಂಡಗಳು ಫೈನಲ್ ಪಂದ್ಯದಲ್ಲೂ ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯದಲ್ಲಿ ಗುಜರಾತ್ ತಂಡವು ಗೆದ್ದರೆ ಸತತ 2ನೇ ಟ್ರೋಫಿ ಗೆದ್ದ ತಂಡವಾಗಲಿದೆ. ಮತ್ತೊಂದೆಡೆ ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ಗೆದ್ದರೆ ಮುಂಬೈನ 5 ಬಾರಿ ಪ್ರಶಸ್ತಿ ಗೆದ್ದ ದಾಖಲೆಯನ್ನು ಸರಿಗಟ್ಟಲಿದೆ.


ಇದನ್ನೂ ಓದಿ: Ambati Rayudu: ಫೈನಲ್​ ಪಂದ್ಯಕ್ಕೂ ಮುನ್ನವೇ ಐಪಿಎಲ್​ಗೆ ನಿವೃತ್ತಿ ಘೋಷಿಸಿದ ಚೆನ್ನೈ ಸ್ಟಾರ್​ ಪ್ಲೇಯರ್​!


ಗುಜರಾತ್​ - ಚೆನ್ನೈ ಸಂಭಾವ್ಯ ಪ್ಲೇಯಿಂಗ್​ 11:


ಗುಜರಾತ್ ಟೈಟಾನ್ಸ್‌ನ ಸಂಭಾವ್ಯ ಪ್ಲೇಯಿಂಗ್​ 11: ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ.


ಚೆನ್ನೈ ಸೂಪರ್ ಕಿಂಗ್ಸ್‌ನ ಸಂಭಾವ್ಯ ಪ್ಲೇಯಿಂಗ್​ 11: ಡೆವೊನ್ ಕಾನ್ವೇ, ರಿತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (c/wk), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ಟೀಕ್ಷಣ, ಮತಿಶ ಪತಿರಾಣ.

First published: