• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಹಾಲಿ ಚಾಂಪಿಯನ್ಸ್​ ಟೈಟನ್ಸ್​ಗೆ ತವರಿನಲ್ಲೇ ಮುಖಭಂಗ! ಡೆಲ್ಲಿಗೆ ರೋಚಕ ಗೆಲುವು ತಂದುಕೊಟ್ಟ ಇಶಾಂತ್​

IPL 2023: ಹಾಲಿ ಚಾಂಪಿಯನ್ಸ್​ ಟೈಟನ್ಸ್​ಗೆ ತವರಿನಲ್ಲೇ ಮುಖಭಂಗ! ಡೆಲ್ಲಿಗೆ ರೋಚಕ ಗೆಲುವು ತಂದುಕೊಟ್ಟ ಇಶಾಂತ್​

ಗುಜರಾತ್ ವಿರುದ್ಧ ಡೆಲ್ಲಿಗೆ ಜಯ

ಗುಜರಾತ್ ವಿರುದ್ಧ ಡೆಲ್ಲಿಗೆ ಜಯ

ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​ ವಿರುದ್ಧ 131ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್( Gujarat Titans)​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 125ರನ್​ಗಳಿಸಲಷ್ಟೆ ಶಕ್ತವಾಗಿ 5 ರನ್​ಗಳ ಸೋಲು ಕಂಡಿದೆ.

  • News18 Kannada
  • 5-MIN READ
  • Last Updated :
  • Ahmadabad (Ahmedabad) [Ahmedabad], India
  • Share this:

ಅಹ್ಮದಾಬಾದ್‌:  ಐಪಿಎಲ್​ನ 44 ನೇ ಪಂದ್ಯದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ (Delhi Capitals)​ ವಿರುದ್ಧ 131ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್( Gujarat Titans)​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 125ರನ್​ಗಳಿಸಲಷ್ಟೆ ಶಕ್ತವಾಗಿ 5 ರನ್​ಗಳ  ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 130 ರನ್​ಗಳಿಸಿತ್ತು. ಯುವ ಬ್ಯಾಟರ್​ ಅಮನ್ ಹಕೀಮ್ ಖಾಬ್ 51, ಅಕ್ಷರ್ ಪಟೇಲ್ 27 ಹಾಗೂ ರಿಪಲ್ ಪಟೇಲ್ 23 ರನ್​ಗಳಿಸಿದ್ದರು. 131 ರನ್​ಗಳ ಗುರಿ ಬೆನ್ನಟ್ಟಿದ ಅಂಕಪಟ್ಟಿಯಲ್ಲಿನ ಅಗ್ರಸ್ಥಾನಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ (59) ಅವರ ಅರ್ಧಶತಕದ ಹೊರತಾಗಿಯೂ 5 ರನ್​ಗಳ ಸೋಲು ಕಂಡಿತು.


ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷೆಯಂತೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಆಯ್ಕೆಗೆ ತಕ್ಕ ಬ್ಯಾಟಿಂಗ್ ಮಾಡುವಲ್ಲಿ ಎಡವಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಪೀಟರ್​ ಸಾಲ್ಟ್​ ತಾವೆದುರಿಸಿದ ಮೊದಲ ಎಸೆತದಲ್ಲೇ ಶಮಿಗೆ ವಿಕೆಟ್​ ಒಪ್ಪಿಸಿದರು. 2ನೇ ಓವರ್​ನಲ್ಲಿ ನಾಯಕ ಡೇವಿಡ್​ ವಾರ್ನರ್​ ರನ್​ಔಟ್ ಆಗುವ ಮೂಲಕ ಪೆವಿಲಿಯನ್​ಗೆ ಮರಳಿದರು. ನಂತರ ಬಂದ ಪ್ರಿಯಂ ಗರ್ಗ್​ 10, ರಿಲೀ ರೂಸೋ 8, ಮನೀಷ್ ಪಾಂಡೆ 1 ಬಂದಷ್ಟೆ ವೇಗವಾಗಿ ವಾಪಸ್ ಹೋದರು.


ಇದನ್ನೂ ಓದಿ: Virat Kohli vs Gambhir: ಕದನದೋಳ್​ ಕಿಂಗ್​ ಕೊಹ್ಲಿ ಕೆಣಕಿ ಉಳಿದವರಿಲ್ಲ, ಗಂಭೀರ್​ ಕೂಗಾಟಕ್ಕೆ ಇದೇ ಕಾರಣ!


25ಕ್ಕೆ 5 ವಿಕೆಟ್​ ಕಳೆದುಕೊಂಡಿದ್ದ ಡೆಲ್ಲಿ


ಒಂದು ಹಂತದಲ್ಲಿ ಕೇವಲ 23ಕ್ಕೆ 5 ವಿಕೆಟ್​ ಕಳೆದುಕೊಂಡು 100 ತಲುಪುವುದು ಕಷ್ಟ ಎಂಬ ಪರಿಸ್ಥಿತಿಯಲ್ಲಿದ್ದ ಡೆಲ್ಲಿ ತಂಡಕ್ಕೆ ಅಕ್ಷರ್ ಪಟೇಲ್ ಮತ್ತು ಹಕೀಮ್ ಖಾನ್ 50 ರನ್​ಗಳ ಅಮೂಲ್ಯ ಜೊತೆಯಾಟದ ಕಾಣಿಕೆ ನೀಡಿದರು. ಅಕ್ಷರ್ ಪಟೇಲ್ 27 ರನ್​ಗಳಿಸಿ ಮೋಹಿತ್​ ಶರ್ಮಾಗೆ ವಿಕೆಟ್​ ಒಪ್ಪಿಸಿದರು. ನಂತರ ಹಕೀಮ್ ಜೊತೆಯಾದ ರಿಪಲ್ ಪಟೇಲ್ (23) 7ನೇ ವಿಕೆಟ್​ಗೆ 53 ರನ್​ಗಳ ಜೊತೆಯಾಟ ನೀಡಿದರು. ಹಕೀಮ್ ಖಾನ್​ 44 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್​ಗಳ ನೆರವಿನಿಂದ 51 ರನ್​ಗಳಿಸಿದರು.


ಗುಜರಾತ್​ ಪರ ಮೊಹಮ್ಮದ್ ಶಮಿ 4 ಓವರ್​ಗಳಲ್ಲಿ ಕೇವಲ 11 ರನ್​ ನೀಡಿ 4 ವಿಕೆಟ್ ಪಡೆದರು. ಮೋಹಿತ್ ಶರ್ಮಾ 2 ಹಾಗೂ ರಶೀದ್ ಖಾನ್ ಒಂದು ವಿಕೆಟ್ ಪಡೆದರು.




131 ರನ್​ಗಳ ಸಾಧಾರಣ ಗುರಿ ತಲುಪಲು ಟೈಟನ್ಸ್ ವಿಫಲ


131 ರನ್​ಗಳ ಸಾಧಾರಣ ಗುರಿ  ಬೆನ್ನಟ್ಟಿದ ಗುಜರಾತ್​ ತಂಡದ ಪರ ನಾಯಕ ಹಾರ್ದಿಕ್ ಪಾಂಡ್ಯ 53 ಎಸೆತಗಳಲ್ಲಿ ಅಜೇಯ 59 ರನ್​ಗಳಿಸಿದರು. ಇವರಿಗೆ ಸೂಕ್ತ ಬೆಂಬಲ ಸಿಗದ ಕಾರಣ ಗೆಲ್ಲುವ ಪಂದ್ಯವನ್ನು ಟೈಟನ್ಸ್ ಕೈಚೆಲ್ಲಿತು. ತೆವಾಟಿಯಾ 7 ಎಸೆತಗಳಲ್ಲಿ 20 ರನ್​ಗಳಿಸಿದರಾದರೂ ಗೆಲುವು ತಂದುಕೊಡಲು ಅವರ ಆಟ ಸಾಕಾಗಲಿಲ್ಲ. ಇನ್ನು ಕರ್ನಾಟಕದ ಅಭಿನವ್​ ಮನೋಹರ್ 33 ಎಸೆತಗಳಲ್ಲಿ 26 ರನ್​ಗಳಿಸಿದ್ದು ಕೂಡ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿತು.


ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಡೆಲ್ಲಿ ಪರ ಖಲೀಲ್ ಅಹ್ಮದ್ 24ಕ್ಕೆ 2,​ ಇಶಾಂತ್ ಶರ್ಮಾ 23ಕ್ಕೆ 2 ವಿಕೆಟ್ ಪಡೆದರೆ, ಕುಲ್ದೀಪ್​ ಯಾದವ್​ ಕೇವಲ 15 ರನ್​ ನೀಡಿ ಒಂದು ವಿಕೆಟ್ ಪಡೆದರು.


ರೋಚಕವಾಗಿದ್ದ ಕೊನೆಯ 2 ಓವರ್


ಗುಜರಾತ್ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 33 ರನ್​ಗಳ ಅವಶ್ಯಕತೆ ಇತ್ತು.  ನೋಕಿಯಾ ಎಸೆದ  19 ನೇ ಓವರ್​ನಲ್ಲಿ ಮೊದಲ 3 ಎಸೆತಗಳಲ್ಲಿ ಕೇವಲ 3 ರ್​ ಬಿಟ್ಟುಕೊಟ್ಟರು. ಆದರೆ ನಂತರದ ಮೂರು ಎಸೆತಗಳಲ್ಲಿ ತೆವಾಟಿಯಾ 3 ಸಿಕ್ಸರ್​ ಸಿಡಿಸಿದರು.

top videos


    ಹಾಗಾಗಿ ಕೊನೆಯ ಓವರ್​ನಲ್ಲಿ ಟೈಟನ್ಸ್​ಗೆ ಗೆಲ್ಲಲು 12 ರನ್​ಗಳ ಅವಶ್ಯಕತೆಯಿತ್ತು. ಆದರೆ ಅನುಭವಿ ಇಶಾಂತ್ ಶರ್ಮಾ ಹಾರ್ದಿಕ್​ ಮತ್ತು ತೆವಾಟಿಯಾಗೆ ಅದ್ಭುತವಾಗಿ ಬೌಲಿಂಗ್ ಮಾಡಿ ಕೇವಲ 6 ರನ್​ ಮಾತ್ರ ಬಿಟ್ಟುಕೊಟ್ಟು ತಂಡಕ್ಕೆ 5 ರನ್​​ಗಳ ರೋಚಕ ಜಯ ತಂದುಕೊಟ್ಟರು.

    First published: