• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ನಾಯಕನ ಆಯ್ಕೆ, ಅಕ್ಷರ್ ಪಟೇಲ್‌ಗೆ ಹೊಸ ಜವಾಬ್ದಾರಿ

IPL 2023: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ನಾಯಕನ ಆಯ್ಕೆ, ಅಕ್ಷರ್ ಪಟೇಲ್‌ಗೆ ಹೊಸ ಜವಾಬ್ದಾರಿ

ಡೇವಿಡ್​ ವಾರ್ನರ್​

ಡೇವಿಡ್​ ವಾರ್ನರ್​

IPL 2023: ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2023ಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್‌ನನ್ನು ನಾಯಕನನ್ನಾಗಿ ಘೋಷಿಸಿದೆ. ರಿಷಬ್ ಪಂತ್ ಅಪಘಾತವಾದ ಕಾರಣ ಅವರು ಈ ಬಾರಿ ಐಪಿಎಲ್​ ಆಡದ ಕಾರಣ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡಿದೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಪಘಾತದ ನಂತರ ರಿಷಭ್ ಪಂತ್ (Rishabh Pan) ಇನ್ನೂ ಕೆಲವು ತಿಂಗಳು ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಆದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್  (Delhi Capitals) ತಂಡವು ಪಂತ್ ಬದಲಿಗೆ ಡೇವಿಡ್ ವಾರ್ನರ್​ಗೆ (David Warner) ನಾಯಕತ್ವವನ್ನು ಹಸ್ತಾಂತರಿಸಿದೆ. ವಾರ್ನರ್ ಈ ಹಿಂದೆ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಈಗ ಅವರ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಗೆಲ್ಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2016ರಲ್ಲಿ ಆರ್‌ಸಿಬಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.


ಡೆಲ್ಲಿ ತಂಡಕ್ಕೆ ವಾರ್ನರ್​ ನಾಯಕ:


ವಾರ್ನರ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಡೆಲ್ಲಿ ನಾಯಕತ್ವವನ್ನು ವಾರ್ನರ್ ನಿರ್ವಹಿಸಲಿದ್ದು, ಉಪನಾಯಕತ್ವವನ್ನು ಭಾರತದ ಆಲ್ ರೌಂಡರ್ ಅಕ್ಷರ್ ಪಟೇಲ್ ವಹಿಸಲಿದ್ದಾರೆ. ಕಳೆದ ವರ್ಷ ಅಕ್ಷರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದರು.ಡೆಲ್ಲಿ ಕ್ಯಾಪಿಟಲ್ಸ್‌ನ ನಿಯಮಿತ ನಾಯಕ ರಿಷಭ್ ಪಂತ್ ಡಿಸೆಂಬರ್‌ನಲ್ಲಿ ಅಪಘಾತಕ್ಕೀಡಾಗಿದ್ದರು. ಇದಾದ ಬಳಿಕ ಇನ್ನು ಕೆಲವು ತಿಂಗಳು ಬ್ಯಾಟ್​ ಹಿಡಿಯುವುದು ಅನುಮಾನವಾಗಿದೆ. ಅದಕ್ಕಾಗಿಯೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಐಪಿಎಲ್‌ನಲ್ಲಿ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: IPL 2023: RCB ಪಂದ್ಯದ ಟಿಕೆಟ್​ ಬುಕಿಂಗ್​ ಓಪನ್​, ಖಾಲಿಯಾಗುವ ಮೊದಲು ಹೀಗೆ ಬುಕ್​ ಮಾಡ್ಕೊಳಿ


ನಾನು ಧನ್ಯವಾದ ಹೇಳಲು ಬಯಸುತ್ತೇನೆ:


ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಡೇವಿಡ್ ವಾರ್ನರ್, ‘ರಿಷಭ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅದ್ಭುತ ನಾಯಕರಾಗಿದ್ದಾರೆ ಮತ್ತು ನಾವೆಲ್ಲರೂ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಈ ಜವಾಬ್ದಾರಿಯೊಂದಿಗೆ ನನ್ನ ಮೇಲೆ ನಂಬಿಕೆ ಇಟ್ಟಿರುವ ತಂಡದ ಆಡಳಿತಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವಾಗಲೂ ಈ ಫ್ರಾಂಚೈಸ್‌ನೊಂದಿಗೆ ಇದ್ದೇನೆ. ಪ್ರತಿಭಾವಂತ ಆಟಗಾರರ ಗುಂಪನ್ನು ಮುನ್ನಡೆಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ರಿಷಭ್ ಪಂತ್ ಗಾಯಗೊಂಡ ನಂತರ ಡೇವಿಡ್ ವಾರ್ನರ್ ನಾಯಕರಾಗುವುದು ಬಹುತೇಕ ಖಚಿತವಾಗಿತ್ತು. ರಿಷಭ್ ಪಂತ್ 2021 ರಿಂದ ಈ ತಂಡವನ್ನು ಮುನ್ನಡೆಸುತ್ತಿದ್ದರು. ಅವರು ಡಿಸೆಂಬರ್‌ನಲ್ಲಿ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಮುಂಬೈನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿತ್ತು.
ಮುಂಬೈನಲ್ಲಿ ಶುಕ್ರವಾರ ಆರಂಭವಾಗಲಿರುವ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಸೇರ್ಪಡೆಗೊಂಡಿದ್ದಾರೆ. ಅವರು ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು 2009 ರಿಂದ 13 ಋತುಗಳ 162 ಪಂದ್ಯಗಳಲ್ಲಿ 5881 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಸರಾಸರಿ 42.01 ಮತ್ತು ಸ್ಟ್ರೈಕ್ ರೇಟ್ 140.69 ಆಗಿದೆ. ಅವರು ನಾಲ್ಕು ಶತಕ ಮತ್ತು 55 ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ.


IPL 2023 ಸೀಸನ್ ಮಾರ್ಚ್ 31 ರಂದು ಆರಂಭವಾಗಲಿದೆ. ಮೊದಲ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಮೇ 28 ರಂದು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು