• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RR vs CSK: ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್, ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಚೆನ್ನೈ?

RR vs CSK: ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್, ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಚೆನ್ನೈ?

IPL 2023 CSK vs RR

IPL 2023 CSK vs RR

CSK vs RR: ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ್ದಾರೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPl 2023) 37ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs RR) ತಂಡಗಳು ಸೆಣಸಾಡುತ್ತಿವೆ. ಮಹೇಂದ್ರ ಸಿಂಗ್ ಧೋನಿ (MS Dhoni) ಬಳಗ ಈ ಋತುವಿನಲ್ಲಿ ಒಮ್ಮೆ ಸಂಜು ಸ್ಯಾಮ್ಸನ್ ನಾಯಕತ್ವದ ತಂಡದ ಎದುರು ಸೋತಿತ್ತು. ಈ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹೀಗಾಗಿ ಚೆನ್ನೈ ತಂಡ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳು ಧೋನಿ ಪಡೆ ಸಿದ್ಧವಾಗಿದ್ದು, ಗೆಲುವಿನ ಓಟವನ್ನು ಮುಂದವರೆಸುತ್ತದೆಯೇ ಎಂದು ಕಾದುನೋಡಬೇಕಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ್ದಾರೆ.


RR vs CSK ಹೆಡ್ ಟು ಹೆಡ್ ರೆಕಾರ್ಡ್:


ಚೊಚ್ಚಲ ಐಪಿಎಲ್‌ನ ಫೈನಲ್ ಸೇರಿದಂತೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 27 ಪಂದ್ಯಗಳಲ್ಲಿ ಸ್ಪರ್ಧಿಸಿವೆ. ಇಲ್ಲಿಯವರೆಗೆ, CSK ತಂಡ ರಾಜಸ್ಥಾನ್​ ವಿರುದ್ಧ 15 ರಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ ಮತ್ತು ರಾಜಸ್ಥಾನ್​ ರಾಯಲ್ಸ್ ತಂಡವು 12 ಪಂದ್ಯಗಳಲ್ಲಿ ಗೆದ್ದಿದೆ. ಈ ಸೀಸನ್​ನ ಕೊನೆಯ ಮುಖಾಮುಖಿಯಲ್ಲಿ ರಾಜಸ್ಥಾನ್​ ತಂಡ ಗೆದ್ದಿತ್ತು.


ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಪಿಚ್ ವರದಿ:


ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 157 ರನ್​ ಆಗಿದೆ. ಚೇಸಿಂಗ್ ತಂಡಗಳು ಉತ್ತಮ ಗೆಲುವಿನ ದಾಖಲೆಯನ್ನು ಹೊಂದಿದೆ. ಈ ಋತುವಿನಲ್ಲಿ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಕೇವಲ ಒಂದು ಪಂದ್ಯವನ್ನು ನಡೆಸಲಾಗಿದೆ. ಲಕ್ನೋ ಸೂಪರ್​ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿದ ನಂತರ 154 ರನ್​ ಗಳಿಸಿತ್ತು. ಪ್ರತ್ಯುತ್ತರವಾಗಿ ರಾಜಸ್ಥಾನ್​ ತಂಡವು 144 ರನ್​ ಗಳಸಿತ್ತು.




ಚೆನ್ನೈ ಮತ್ತು ರಾಜಸ್ಥಾನ್​ ಅಂಕಪಟ್ಟಿ:


ಈ ಋತುವಿನಲ್ಲಿ ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಆಟ ಪ್ರದರ್ಶಿಸಿದೆ. 5 ಗೆಲುವು ದಾಖಲಿಸಿರುವ ಧೋನಿ ಪಡೆ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಂಜು ಸ್ಯಾಮ್ಸನ್ ಅವರ ರಾಜಸ್ಥಾನ್ ರಾಯಲ್ಸ್ 8 ಅಂಕಗಳನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಚೆನ್ನೈ ತಂಡದ ಫಾರ್ಮ್ ಅಬ್ಬರದಿಂದ ಸಾಗುತ್ತಿದ್ದು, ಕಳೆದ ಮೂರು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ. ಉತ್ತಮ ಆರಂಭದ ನಂತರ ಸತತ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲನ್ನು ಎದುರಿಸಬೇಕಾಯಿತು.


ಇದನ್ನೂ ಓದಿ: Virat Kohli: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ, ಈ ರೆಕಾರ್ಡ್​ ಬ್ರೇಕ್​ ಮಾಡೋದು ಅಷ್ಟು ಈಸಿ ಅಲ್ವಂತೆ!


ಉಳಿದ ತಂಡಗಳ ಸ್ಥಾನ ನೋಡುವುದಾದರೆ, ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಇದೆ. ಉಳಿದಂತೆ ಕ್ರಮವಾಗಿ ಗುಜರಾತ್ ಟೈಟನ್ಸ್, ರಾಜಸ್ಥಾನ್​ ರಾಯಲ್ಸ್, ಲಕ್ನೋ ಸೂಪರ್​ ಜೈಂಟ್ಸ್, ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್​ ಕಿಂಗ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು 9ನೇ ಸ್ಥಾನದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಕೊನೆಯಲ್ಲಿ ಡೆಲ್ಲಿ ಕ್ಯಾಪಟಿಲ್ಸ್ ತಂಡವಿದೆ.


ಚೆನ್ನೈ - ರಾಜಸ್ಥಾನ್​ ಪ್ಲೇಯಿಂಗ್​ 11:


ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್​ 11: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಮಥೀಶ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್.


ರಾಜಸ್ಥಾನ್​ ರಾಯಲ್ಸ್ ಪ್ಲೇಯಿಂಗ್​ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

top videos
    First published: