ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ (CSK vs PBKS) ತಂಡಗಳಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಣಸಾಡುತ್ತಿವೆ. ಎಂಎಸ್ ಧೋನಿ (MS Dhoni) ಅವರ ಸಿಎಸ್‌ಕೆ ತಂಡವು ಈ ಋತುವಿನಲ್ಲಿ ಭರ್ಜರಿ ಫೈಪೋಟಿ ನೀಡುತ್ತಿದೆ. ಪ್ರಸ್ತುತ ಎಂಟು ಪಂದ್ಯಗಳನ್ನು ಆಡಿದ ನಂತರ ಪಾಯಿಂಟ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಲ್ಲದೇ ಕಳೆದ ಲಕ್ನೋ ಪಂದ್ಯದಲ್ಲಿ ಪಂಜಾಬ್ ಹೀನಾಯ ಸೋಲನ್ನು ಕಂಡಿದೆ. ಹೀಗಾಗಿ ಪಂಜಾಬ್ ಕಂಬ್ಯಾಕ್ ಮಾಡಲು ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚೆನ್ನೈ ಮತ್ತು ಪಂಜಾಬ್ ನಡುವಿನ ಇಂದಿನ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್ವೆರ್ಕ್ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು. ಮೊಬೈಲ್ ಅಥವಾ ಡಿಜಿಟಲ್ ಲೈಟ್ ಸ್ಟ್ರೀಮಿಂಗ್ನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ.
ಹೆಡ್ ಟು ಹೆಡ್ ದಾಖಲೆಗಳು:
ಈವರಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ನಲ್ಲಿ 27 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಚೆನ್ನೈ ತಂಡ 15 ಬಾರಿ ಗೆದ್ದಿದ್ದರೆ ಪಂಜಾಬ್ ತಂಡ 12 ಬಾರಿ ಗೆದ್ದಿದೆ. ಅಂಕಿಅಂಶ ಹಾಗೂ ಪ್ರಸ್ಥುತ ತಂಡಗಳ ಬಲಾಬಲ ನೋಡುವುದಾದರೆ ಧೋನಿ ನಾಯಕತ್ವದ ಚೆನ್ನೈ ಹೆಚ್ಚು ಬಲಿಷ್ಠವಾಗಿದೆ.
ಆಟಗಾರರು ಬಿಸಿಲಿನಿಂದ ವಿಶ್ರಾಂತಿ ಪಡೆಯಬಹುದು:
ಟಾಸ್ ಬಳಿಕ ಮಾತನಾಡಿದ ಧೋನಿ, ನಾವು ಮೊದಲು ಬ್ಯಾಟ್ ಮಾಡುತ್ತೇವೆ. ದಿನದ ಆಟವನ್ನು ಆಡುವಾಗ, ಶಾಖವು ಬಿಸಿಲು ಸಹ ಒಂದು ಅಂಶವಾಗಿರುತ್ತದೆ. ಇದರಿಂದ ವೇಗದ ಬೌಲರ್‌ಗಳು ಸ್ವಲ್ಪ ವಿಶ್ರಾಂತಿ ಪಡೆಯಬಹುದು. ಹೀಗಾಗಿ ಆಟಗಾರರು ಸೂರ್ಯನ ಶಾಖಕ್ಕೆ ಸಾಕಷ್ಟು ಒಡ್ಡಿಕೊಳ್ಳಬಾರದು. ಐಪಿಎಲ್ ದೀರ್ಘವಾದ ಪಂದ್ಯಾವಳಿಯಾಗಿದೆ. ಹೀಗಾಗಿ ಆಟಗಾರರಿಗೆ ಇನ್ನೂ ಅನೇಕ ಪಂದ್ಯಗಳಿರುವುದರಿಂದ ವಿಶ್ರಾಂತಿಯನ್ನು ಈ ರೀತಿಯಾದರೂ ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2023: ಲಕ್ನೋ ಪಂದ್ಯಕ್ಕೂ ಮುನ್ನ RCB ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್, ತಂಡ ಸೇರಿಕೊಂಡ ಆಸೀಸ್ ಸ್ಟಾರ್ ವೇಗಿ
ಹವಾಮಾನ ಅಪ್‌ಡೇಟ್:
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಚೆನ್ನೈನಲ್ಲಿ 90 ಪ್ರತಿಶತದಷ್ಟು ಮೋಡ ಕವಿದ ವಾತಾವರಣವಿರುತ್ತದೆ. ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಆದಾಗ್ಯೂ, ಎರಡನೇ ಇನಿಂಗ್ಸ್‌ನಲ್ಲಿ ಸ್ವಲ್ಪಮಟ್ಟಿನ ಮಳೆ ಹನಿಗಳು ಬೀಳಬಹುದು. ಏಕೆಂದರೆ ಮಳೆಯಾಗುವ ಸಾಧ್ಯತೆ 51 ಶೇಕಡಾ ಇರಬಹುದು.
ಐಪಿಎಲ್ ಅಂಕಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್ ಇಂದು ಗೆಲ್ಲುವ ಮೂಲಕ ಅಗ್ರಸ್ಥಾನಕ್ಕೇರಲು ಹವಣಿಸುತ್ತಿದೆ. ಸಿಎಸ್‌ಕೆ 10 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಉಳಿದಂತೆ, ಗುಜರಾತ್ ಟೈಟನ್ಸ್ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಉಳಿಂದತೆ ಕ್ರಮವಾಗಿ, ರಾಜಸ್ಥಾನ್ ರಾಯಲ್ಸ್ 2ನೇ ಸ್ಥಾನದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ 3ನೇ ಸ್ಥಾನ, ಚೆನ್ನೈ ಸೂಪರ್ ಕಿಂಗ್ಸ್ 4ನೇ ಸ್ಥಾನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು 5ನೇ ಸ್ಥಾನ್ದಲ್ಲಿದೆ. ಇನ್ನು, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ.
ಚೆನ್ನೈ - ಪಂಜಾಬ್ ಪ್ಲೇಯಿಂಗ್ 11:
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (w/c), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಅಥರ್ವ ಟೇಡೆ, ಶಿಖರ್ ಧವನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಸಿಕಂದರ್ ರಜಾ, ಸ್ಯಾಮ್ ಕುರಾನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್ ಮತ್ತು ಅರ್ಷದೀಪ್ ಸಿಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ