• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • CSK vs KKR: ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್, ಪ್ಲೇಆಫ್​ಗೆ ಒಂದೇ ಹೆಜ್ಜೆ ಬಾಕಿ

CSK vs KKR: ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್, ಪ್ಲೇಆಫ್​ಗೆ ಒಂದೇ ಹೆಜ್ಜೆ ಬಾಕಿ

CSK vs KKR

CSK vs KKR

CSK vs KKR: ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​​ ಧೋನಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ್ದಾರೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನ 61ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ (KKR vs CSK) ಅನ್ನು ಎದುರಿಸಲಿದೆ. ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಗೆದ್ದರೆ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರೆ, ಕೋಲ್ಕತ್ತಾದ ಸೋಲಿನಿಂದ ಅದರ ಭರವಸೆ ಸಂಪೂರ್ಣವಾಗಿ ಕೊನೆಗೊಂಡಂತಾಗುತ್ತದೆ. ಈ ಋತುವಿನಲ್ಲಿ ಕೋಲ್ಕತ್ತಾದ ಪ್ರದರ್ಶನವು ಏರಿಳಿತಗಳಿಂದ ಕೂಡಿದೆ. ಸೋಲಿನೊಂದಿಗೆ ಆರಂಭಿಸಿದ ತಂಡ ಎರಡು ಗೆಲುವು ದಾಖಲಿಸಿ ನಂತರ ಸತತ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಎದುರಿಸಿತು. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​​ ಧೋನಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ್ದಾರೆ.


ಐಪಿಎಲ್ 2023 ಅಂಕಪಟ್ಟಿ:


ಸದ್ಯ ಕೋಲ್ಕತ್ತಾ ನೈಟ್​ ರೈಡರ್ಸ್​ 12 ಪಂದ್ಯಗಳಿಂದ 5 ಗೆಲುವಿನಿಂದ 10 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಚೆನ್ನೈ ಅಬ್ಬರ ತೋರಿದೆ. ತನ್ನ 12 ಪಂದ್ಯಗಳಲ್ಲಿ 7 ಮತ್ತು ಒಂದು ಮಳೆಯಿಂದ ಪಂದ್ಯ ರದ್ದಾಯಿತು. ತಂಡವು 15 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಹೇಂದ್ರ ಸಿಂಗ್ ಧೋನಿ ಬಳಗ ಕಳೆದ ಎರಡು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದೆ.



ಮುಂಬೈ ಇಂಡಿಯನ್ಸ್ ಮತ್ತು ನಂತರ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ, ಚೆನ್ನೈ ತಂಡವು ಪ್ಲೇ ಆಫ್‌ಗೆ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಕೋಲ್ಕತ್ತಾ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿತ್ತು. ಈ ಋತುವಿನಲ್ಲಿ ಚೆನ್ನೈ ತಂಡ ಕೋಲ್ಕತ್ತಾ ವಿರುದ್ಧ 49 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.


ಇದನ್ನೂ ಓದಿ: IPL 2023: ಕೊಹ್ಲಿ ಬಿಟ್ರೂ ಫ್ಯಾನ್ಸ್​ ಬಿಡ್ತಿಲ್ಲ, ವಿರಾಟ್ ಅಭಿಮಾನಿಗಳ ಅಬ್ಬರಕ್ಕೆ ಅಫ್ಘಾನ್​ ಬೌಲರ್​ ಸುಸ್ತು!


ಪಿಚ್ ವರದಿ:


ಈ ವಾರದ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್ ಗೆಲುವಿನ ಸಂದರ್ಭದಲ್ಲಿ ಚೆಪಾಕ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡಲು ಪ್ರಾರಂಭಿಸಿದೆ. ಇಂದಿನ ಆಟಕ್ಕೆ ಸ್ಪಿನ್ ಸ್ನೇಹಿ ಆಗಿರಲಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ ಬೆರಳೆಣಿಕೆಯಷ್ಟು ಅರ್ಹ ಸ್ಪಿನ್ನರ್‌ಗಳಿರುವುದರಿಂದ ಬೌಲಿಂಗ್​ಗೆ ಕಷ್ಟಕರವಾಗಬಹುದು.




ಮೊಳಕಾಲು ನೋವಿನಿಂದ ಬಳಲುತ್ತಿರುವ ಎಂಎಸ್​ಡಿ:


ಎಂಎಸ್ ಧೋನಿ ಒಂದು ವೈರಲ್ ವೀಡಿಯೊದಲ್ಲಿ ಕುಂಟುತ್ತಿರುವಂತೆ ಕಂಡುಬಂದಿದೆ. ಇದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದು, ಒಂದು ಪಂದ್ಯವನ್ನಾದರೂ ರೆಸ್ಟ್​ ಮಾಡಿ ಎನ್ನುತ್ತಿದ್ದಾರೆ. ಶಾಟ್ ಆಡಿದ ನಂತರ ಧೋನಿ ಓಡಿಹೋಗಿದ್ದು, ಸರಿಯಾಗಿ ಓಡಲು ಸಾಧ್ಯವಾಗುತ್ತಿಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ. ಧೋನಿ ನಿಧಾನವಾಗಿ ಓಡಲು ಪ್ರಯತ್ನಿಸಿದ್ದಾರೆ. ಮೊಣಕಾಲು ನೋವು ಕಾಣಿಸಿಕೊಂಡಿದ್ದು, ಸಂಪೂರ್ಣ ಫಿಟ್ ಆಗದ ಬಳಿಕವೂ ಅಭ್ಯಾಸ ನಡೆಸುತ್ತಿದ್ದಾರೆ. ಐಪಿಎಲ್ 2023 ಧೋನಿಯ ಕೊನೆಯ ಸೀಸನ್ ಎಂದು ನಂಬಲಾಗಿದೆ, ಆದರೆ ಇಲ್ಲಿಯವರೆಗೆ ಅವರು ಅದರ ಬಗ್ಗೆ ಏನನ್ನೂ ಹೇಳಿಲ್ಲ.


ಕೋಲ್ಕತ್ತಾ - ಚೆನ್ನೈ ಪ್ಲೇಯಿಂಗ್​ 11:


ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್(ಪ), ಜೇಸನ್ ರಾಯ್, ನಿತೀಶ್ ರಾಣಾ(ಸಿ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಶ್ ಶರ್ಮಾ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಪ್ಲೇಯರ್​: ವೆಂಕಟೇಶ್ ಅಯ್ಯರ್, ಅನುಕುಲ್ ರಾಯ್, ಎನ್ ಜಗದೀಸನ್, ಉಮೇಶ್ ಯಾದವ್, ಲಾಕಿ ಫರ್ಗುಸನ್.

top videos


    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (w/c), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
    ಇಂಪ್ಯಾಕ್ಟ್ ಪ್ಲೇಯರ್: ಮಥೀಶ ಪತಿರಾನ, ನಿಶಾಂತ್ ಸಿಂಧು, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್.

    First published: