• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023, GT vs CSK: ಹಾರ್ದಿಕ್​ ಮುಂದೆ ಡಲ್​ ಹೊಡೆದಿದ್ದ ಧೋನಿ​, ಈ ಸಿರೀಸ್​ನಲ್ಲಿ ರಿವೇಂಜ್​ ತಿರಿಸಿಕೊಳ್ತಾರಾ ಕ್ಯಾಪ್ಟನ್​ ಕೂಲ್?

IPL 2023, GT vs CSK: ಹಾರ್ದಿಕ್​ ಮುಂದೆ ಡಲ್​ ಹೊಡೆದಿದ್ದ ಧೋನಿ​, ಈ ಸಿರೀಸ್​ನಲ್ಲಿ ರಿವೇಂಜ್​ ತಿರಿಸಿಕೊಳ್ತಾರಾ ಕ್ಯಾಪ್ಟನ್​ ಕೂಲ್?

CSK vs GT

CSK vs GT

IPL 2023: ಐಪಿಎಲ್ 2023ರ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಇಂದು ಸಂಜೆ 7.30ಕ್ಕೆ ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

ಐಪಿಎಲ್ 2023ರ (IPL 2023) ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಇಂದು ಸಂಜೆ 7.30ಕ್ಕೆ ಐಪಿಎಲ್ ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vd GT) ನಡುವೆ ನಡೆಯಲಿದೆ. ಇದೀಗ ಎರಡೂ ತಂಡಗಳು ಮುಖಾಮುಖಿಯಾಗಲು ಭರ್ಜರಿ ಸಿದ್ಧವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಎರಡು ತಂಡಗಳ ನಡುವಿನ ದಾಖಲೆಯ ಹೆಡ್ ಟು ಹೆಡ್ (Head To Head) ಹೇಗಿದೆ? ಯಾರು ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳನ್ನು ನೋಡೋಣ ಬನ್ನಿ.


ಚೆನ್ನೈ-ಗುಜರಾತ್​ ಹೆಡ್​ ಟು ಹೆಡ್​:


ಇದುವರೆಗೆ ಐಪಿಎಲ್‌ನಲ್ಲಿ ಈ ಎರಡು ತಂಡಗಳು ಎರಡು ಬಾರಿ ಮಾತ್ರ ಮುಖಾಮುಖಿಯಾಗಿದ್ದವು. ಕಳೆದ ವರ್ಷವಷ್ಟೇ ಗುಜರಾತ್ ಟೈಟಾನ್ಸ್ ಪದಾರ್ಪಣೆ ಮಾಡಿತ್ತು. ಗುಜರಾತ್ ತನ್ನ ಚೊಚ್ಚಲ ಪಂದ್ಯದಲ್ಲೇ ಚಾಂಪಿಯನ್ ಆಯಿತು. ಗುಜರಾತ್ ಇದುವರೆಗೆ 2 ಬಾರಿ ಸಿಎಸ್‌ಕೆಯನ್ನು ಎದುರಿಸಿದ ನಂತರ ಎರಡೂ ಬಾರಿಯೂ ಗೆದ್ದಿದೆ. ಈ ಎರಡೂ ತಂಡಗಳು ಕಳೆದ ವರ್ಷ ಏಪ್ರಿಲ್‌ನಲ್ಲಿ ಒಮ್ಮೆ ಮತ್ತು ಮೇ ತಿಂಗಳಲ್ಲಿ ಒಮ್ಮೆ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಜಯ ಸಾಧಿಸಿತ್ತು.


ಗುಜರಾತ್ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ 3 ವಿಕೆಟ್‌ಗಳಿಂದ ಜಯಗಳಿಸಿತ್ತು. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಅವರು 51 ಎಸೆತಗಳಲ್ಲಿ 94 ರನ್ ಗಳಿಸಿದರು. ಆದರೆ, ಇಂದಿನ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಮೇ ತಿಂಗಳಲ್ಲಿ ಉಭಯ ತಂಡಗಳ ನಡುವೆ ಎರಡನೇ ಪಂದ್ಯ ನಡೆದಿದ್ದು, ಇದರಲ್ಲಿ ಗುಜರಾತ್ 7 ವಿಕೆಟ್‌ಗಳಿಂದ ಗೆದ್ದಿತ್ತು. ಎರಡನೇ ಪಂದ್ಯ ಕಡಿಮೆ ಸ್ಕೋರಿಂಗ್ ಪಂದ್ಯವಾಗಿದ್ದು, ಚೆನ್ನೈ ತಂಡ ಗಳಿಸಿದ್ದು 133 ರನ್ ಮಾತ್ರ. ಚೇಸಿಂಗ್ ವೇಳೆ ಗುಜರಾತ್ ತಂಡ ಕೂಡ ಅಲ್ಪ ಗುರಿ ಬೆನ್ನಟ್ಟಲು ಹರಸಾಹಸ ಪಟ್ಟಿತ್ತು.


ಇದನ್ನೂ ಓದಿ: IPL 2023: ಈ ಬಾರಿ ಐಪಿಎಲ್​ ಆಡಲ್ವಾ ರೋಹಿತ್​ ಶರ್ಮಾ? ಎಲ್ಲ ತಂಡದ ನಾಯಕರೂ ಕಾಣಿಸಿಕೊಂಡ್ರು, ಹಿಟ್​ಮ್ಯಾನ್​ ಮಾತ್ರ ಮಾಯ!


ಅವರು 19.1 ಓವರ್‌ಗಳಲ್ಲಿ ಗೆದ್ದರು. ಈ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಅರ್ಧಶತಕ ಬಾರಿಸುವ ಮೂಲಕ ಗುಜರಾತ್ ಗೆ ಜಯ ತಂದುಕೊಟ್ಟರು. ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ 14 ಪಂದ್ಯ ಆಡಿದ್ದು, 10ರಲ್ಲಿ ಗೆಲುವು ಸಾಧಿಸಿತ್ತು. CSK 14ರಲ್ಲಿ 4 ಪಂದ್ಯ ಗೆದ್ದಿತ್ತು.


ಹವಾಮಾನ ವರದಿ-ಪಿಚ್ ವರದಿ:


ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಚೆಂಡು ಚೆನ್ನಾಗಿ ಬ್ಯಾಟ್‌ಗೆ ಬರುತ್ತದೆ. ಬ್ಯಾಟರ್‌ಗಳು ತಮ್ಮ ಇನ್ನಿಂಗ್ಸ್‌ನ ಆರಂಭದಿಂದಲೇ ತಮ್ಮ ಸಾಮರ್ಥ್ಯ ತೋರಿಸಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದ ನಾಯಕ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ಅಹಮದಾಬಾದ್​ನಲ್ಲಿ ತಾಪಮಾನವು 22 ಮತ್ತು 33 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.




ಚೆನ್ನೈ-ಗುಜರಾತ್​ ಸಂಭಾವ್ಯ ಪ್ಲೇಯಿಂಗ್​ 11:


ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್​ 11: ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಮೊಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ದೀಪಕ್ ಚಾಹರ್, ಡ್ವೇನ್ ಪ್ರಿಟೋರಿಯಸ್, ಸಿಮ್ರಾನ್ ಜೀತ್

top videos


    ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್​ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಸಹಾ, ಕೇನ್ ವಿಲಿಯಮ್ಸನ್, ವೇಡ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಯಶ್ ದಯಾಳ್, ಜೋಸೆಫ್, ಶಮಿ.

    First published: