• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • GT vs CSK, IPL 2023: ಶತಕದ ಹೊಸ್ತಿಲಲ್ಲಿ ಎಡವಿದ ಗಾಯಕ್ವಡ್​, ಹಾರ್ದಿಕ್​ ಪಡೆಗೆ ಬಿಗ್​ ಟಾರ್ಗೆಟ್​

GT vs CSK, IPL 2023: ಶತಕದ ಹೊಸ್ತಿಲಲ್ಲಿ ಎಡವಿದ ಗಾಯಕ್ವಡ್​, ಹಾರ್ದಿಕ್​ ಪಡೆಗೆ ಬಿಗ್​ ಟಾರ್ಗೆಟ್​

CSK vs GT

CSK vs GT

GT vs CSK, IPL 2023: ಐಪಿಎಲ್​ 2023ರ ಮೊದಲ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

 • News18 Kannada
 • 3-MIN READ
 • Last Updated :
 • New Delhi, India
 • Share this:

ಐಪಿಎಲ್​ 2023ರ ಮೊದಲ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಇದಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರ ಹಾಡುಗಳೊಂದಿಗೆ ಐಪಿಎಲ್ 16 ಉದ್ಘಾಟನೆಗೊಂಡಿತ್ತು. ಇನ್ನು, ಗುಜರಾತ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದಾರೆ. ಅಂತಿಮವಾಗಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 178 ರನ್ ಗಳಿಸುವ ಮೂಲಕ ಗುಜರಾತ್​ ತಂಡಕ್ಕೆ 179  ರನ್​ಗಳ ಟಾರ್ಗೆಟ್​ ನೀಡಿದೆ.


ಶತಕ ಮಿಸ್​ ಮಾಡಿಕೊಂಡ ಗಾಯಕ್ವಾಡ:


ಇನ್ನು, ಟಾಸ್​ ಸೋತು  ಚೆನ್ನೈ ಪರ ಮಿಂಚಿದ ಆರಂಭಿಕ ಆಟಗಾರ ರುತುರಾಜ್​ ಗಾಯಕ್ವಾಡ ಸ್ವಲ್ಪದರಲ್ಲಿಯೇ ಶತಕ ವಂಚಿತರಾದರು. ಅವರು, 50 ಎಸೆತದಲ್ಲಿ 9 ಸಿಕ್ಸ್ ಮತ್ತು 4 ಫೊರ್​ ಮೂಲಕ 92 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಉಳಿದಂತೆ ಡೆವೊನ್ ಕಾನ್ವೆ 1 ರನ್, ಬೆನ್ ಸ್ಟೋಕ್ಸ್ 7 ರನ್, ಅಂಬಟಿ ರಾಯುಡು 12 ರನ್, ಮೊಯಿನ್ ಅಲಿ 23 ರನ್, ಶಿವಂ ದುಬೆ 19 ರನ್, ರವೀಂದ್ರ ಜಡೇಜಾ 1 ರನ್, ಎಂಎಸ್​ ಧೋನಿ ಅಂತಿಮವಾಗಿ ಆಕರ್ಷಕ ಸಿಕ್ಸ್ ಸಿಡಿಸುವ ಮೂಲಕ 7 ಬಾಲ್​ಗೆ 14 ರನ್​ ಗಳಿಸಿದರು. ಮಿಚೆಲ್ ಸ್ಯಾಂಟ್ನರ್ 1 ರನ್ ಗಳಿಸಿದರು.ಗುಜರಾತ್​ ಸಂಘಟಿತ ಬೌಲಿಂಗ್​ ದಾಳಿ:


ಟಾಸ್​ ಗೆದ್ದು ಮೊದಲು ಬೌಲಿಂಗ್​ ಮಾಡಿದ ಗುಜರಾತ್​ ತಂಡ ಆರಂಭದಲ್ಲಿ ಬೌಲಿಂಗ್​ನಲ್ಲಿ ಎಡವಿದರೂ ಅಂತಿಮವಾಗಿ ಕೊನೆಯ ಓವರ್​ಗಳಲ್ಲಿ ಉತ್ತಮವಾಗಿ ಬೌಲಿಂಗ್​ ಮಾಡಿದರು. ಟೈಟನ್ಸ್​ ಪರ ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಅಲ್ಜಾರಿ ಜೋಸೆಫ್ ತಲಾ 2 ವಿಕೆಟ್​ ಪಡೆದು ಮಿಂಚಿದರು. ಜೋಶುವಾ ಲಿಟಲ್ ಸಹ 1 ವಿಕೆಟ್​ ಪಡೆಯುವ ಮೂಲಕ ಚೆನ್ನೈ ಬ್ಯಾಟ್ಸ್​ ಮನ್​​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.


ಇದನ್ನೂ ಓದಿ: IPL 2023: ಈ ಬಾರಿ ಐಪಿಎಲ್​ ಆಡಲ್ವಾ ರೋಹಿತ್​ ಶರ್ಮಾ? ಎಲ್ಲ ತಂಡದ ನಾಯಕರೂ ಕಾಣಿಸಿಕೊಂಡ್ರು, ಹಿಟ್​ಮ್ಯಾನ್​ ಮಾತ್ರ ಮಾಯ!


ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ದೊಡ್ಡ ಸಾಧನೆ ಮಾಡಿದ್ದಾರೆ. ಮೊಹಮ್ಮದ್ ಶಮಿ ತಮ್ಮ ನಾಲ್ಕನೇ ಐಪಿಎಲ್ ತಂಡದೊಂದಿಗೆ ಆಡುವಾಗ ಐಪಿಎಲ್​ ಲೀಗ್‌ನಲ್ಲಿ 100 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು. ಮೊಹಮ್ಮದ್ ಶಮಿ ಅವರು ಸಿಎಸ್‌ಕೆ ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು.
ಚೆನ್ನೈ-ಗುಜರಾತ್​ ಪ್ಲೇಯಿಂಗ್​ 11:


ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ 11: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್ ಧೋನಿ (w/c), ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ರಾಜವರ್ಧನ್ ಹಂಗರ್ಗೇಕರ್.

top videos


  ಗುಜರಾತ್​ ಟೈಟನ್ಸ್ ಪ್ಲೇಯಿಂಗ್​ 11: ವೃದ್ಧಿಮಾನ್​ ಸಹಾ, ಶುಭ್​ಮನ್ ಗಿಲ್​, ಕೇನ್​ ವಿಲಿಯಮ್ಸನ್​, ಹಾರ್ದಿಕ್​ ಪಾಂಡ್ಯ, ವಿಜಯ್​ ಶಂಕರ್​, ರಾಹುಲ್​ ತೆವಾಟಿಯಾ, ರಶೀದ್ ಖಾನ್​, ಮೊಹಮ್ಮದ್ ಶಮಿ, ಜೋಶುವಾ ಲಿಟಲ್​, ಯಶ್​​ ದಯಾಲ್​, ಅಲ್ಜಾರಿ ಜೋಸೆಫ್​.

  First published: