ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023ರ ಋತುವಿನ ಆರಂಭದ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ (CSK) ದೊಡ್ಡ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ, CSK ನ ಸ್ಟಾರ್ ಆಲ್-ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಅವರ ಮೊಣಕಾಲಿನ ಗಾಯದಿಂದಾಗಿ ಋತುವಿನ ಆರಂಭದಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಟೋಕ್ಸ್ ಗಾಯದಿಂದ ಬಳಲುತ್ತಿದ್ದರು. ಆದಾಗ್ಯೂ, ಎರಡನೇ ಟೆಸ್ಟ್‌ನ ಮುಕ್ತಾಯದ ನಂತರ, ಇಂಗ್ಲೆಂಡ್‌ನ ರೆಡ್-ಬಾಲ್ ನಾಯಕನು IPL ಮುಗಿದ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯ ಹೊರತಾಗಿಯೂ ತನ್ನ IPL ಪಂದ್ಯಗಳಲ್ಲಿ ಕಣಕ್ಕಿಳಿಯುವುದಾಗಿ ಹೇಲಿದ್ದರು. ಅದರಂತೆ ಸದ್ಯ ಅವರು ಸಿಎಸ್‌ಕೆ ತಂಡವನ್ನು ಸೇರಿಕೊಂಡಿದ್ದಾರೆ.
ಬೌಲಿಂಗ್ ಮಾಡಲ್ಲ ಬೆನ್ ಸ್ಟೋಕ್ಸ್:
ವರದಿ ಪ್ರಕಾರ, ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿರುವ ಬೆನ್ ಸ್ಟೋಕ್ಸ್ ಆರಂಭದಲ್ಲಿ ಬ್ಯಾಟ್ಸ್‌ಮನ್ ಆಗಿ ಆಡಲಿದ್ದಾರೆ. ಮೊಣಕಾಲಿಗೆ ಆಗಾಗ್ಗೆ ಗಾಯದ ತೊಂದರೆಗೊಳಗಾದ ಸ್ಟೋಕ್ಸ್ ನ್ಯೂಜಿಲೆಂಡ್ ಪ್ರವಾಸದಲ್ಲಿ 2ಟೆಸ್ಟ್‌ಗಳಲ್ಲಿ 9 ಓವರ್‌ಗಳನ್ನು ಮಾತ್ರ ಬೌಲ್ ಮಾಡಲು ಸಾಧ್ಯವಾಯಿತು. ಜೂನ್‌ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಆಶಸ್ ಸರಣಿಯನ್ನು ಆಡಬೇಕಿದೆ. ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಸ್ಟೋಕ್ಸ್ ಬೌಲಿಂಗ್ ಮಾಡುವುದಿಲ್ಲ ಎಂದು ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಖಚಿತಪಡಿಸಿದ್ದಾರೆ.
ಮೈಕಲ್ ಹಸ್ಸಿ ಈ ಕುರಿತು ಮಾಹಿತಿ ನೀಡಿದ್ದು, ‘ಅವರು ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡುತ್ತಾರೆ ಎಂದು ನಾನು ನಂಬುತ್ತೇನೆ. ಬೌಲಿಂಗ್‌ಗಾಗಿ ಕಾಯಬೇಕಾಗಿದೆ. ಚೆನ್ನೈ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಫಿಸಿಯೋಗಳು ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮೊದಲ ಕೆಲವು ಪಂದ್ಯಗಳಲ್ಲಿ ಅವರು ಹೆಚ್ಚು ಬೌಲಿಂಗ್ ಮಾಡುವುದಿಲ್ಲ. ನಂತರ ಬೌಲ್ ಮಾಡಬಹುದು‘ ಎಂದು ಹೇಳಿದ್ದಾರೆ.
ಇದನ್ನೂ ಓದಿ:IPL 2023: ಐಪಿಎಲ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಘಾತ! ಅಭ್ಯಾಸದ ವೇಳೆ ಗಾಯಗೊಂಡ ಧೋನಿ?
ಕೋಟಿ ಕೋಟಿಗೆ ಖರೀಸಿದ್ದ ಚೆನ್ನೈ:
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 16 ಕೋಟಿ 25 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಕಳೆದ ವಾರ ಭಾರತಕ್ಕೆ ಬಂದಿರುವ ಅವರು ಮಾರ್ಚ್ 31ರಿಂದ ಈ ಸೀಸನ್‌ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಅಹಮದಾಬಾದ್‌ನ ಪ್ರತಿಷ್ಠಿತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 31) ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಮ್ಮ ಮೊದಲ ಪಂದ್ಯವನ್ನು ಆಡಲಿದೆ.
ಅಬ್ಯಾಸದ ವೇಳೆ ಧೋನಿಗೆ ಗಾಯ:
ಐಪಿಎಲ್ 2023 ಗಾಗಿ ಮಹೇಂದ್ರ ಸಿಂಗ್ ಧೋನಿ ಕಳೆದ ಹಲವು ತಿಂಗಳಿಂದ ತವರು ನೆಲದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಧೋನಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಸಾಕಷ್ಟು ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಪ್ರಸ್ತುತ, ಅಭ್ಯಾಸದ ಸಮಯದಲ್ಲಿ ಧೋನಿ ಅವರ ವೀಡಿಯೊ ಹೊರಬಿದ್ದಿದೆ, ಇದರಲ್ಲಿ ಧೋನಿ ಎಡಗಾಲಿನಿಂದ ಕುಂಟುತ್ತಿರುವಂತೆ ಕಂಡುಬಂದಿದೆ. ಹಾಗಾಗಿ ಓಡುವಾಗಲೂ ಧೋನಿ ಕಷ್ಟಪಡುತ್ತಿದ್ದರು. ಧೋನಿ ಗಾಯದ ಬಗ್ಗೆ ಚೆನ್ನೈ ತಂಡ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಇದು ಐಪಿಎಲ್‌ಗೂ ಮುನ್ನ ಚೆನ್ನೈ ತಂಡಕ್ಕೆ ಆತಂಕ ಹೆಚ್ಚಿಸಿದೆ. ಇದರ ನಡುವೆ ಚೆನ್ನೈ ತಂಡಕ್ಕೆ ಬೆನ್ ಸ್ಟೋಕ್ಸ್ ಆಗಮನವಾಗಿದ್ದು ಸಖತ್ ಸ್ಟ್ರೆಂಥ್ ಹೆಚ್ಚಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಮಹೇಂದ್ರ ಸಿಂಗ್ ಧೋನಿ (ನಾಯಕ), ಡೆವೊನ್ ಕಾನ್ವೇ, ರಿತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹ್ಯಾಂಗರ್‌ಗೆಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಹರ್ಡೇಜಾ, ರವೀಂದ್ರ ಜಹರ್ಡೇಜಾ ದೇಶಪಾಂಡೆ, ಮುಖೇಶ್ ಚೌಧರಿ, ಮತಿಶಾ ಪತಿರಾನ, ಸಿಮರ್‌ಜಿತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತಿಕಷ್ಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ