ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (CSK vs GT) ನಡುವೆ ನಡೆಯಲಿದೆ. 1 ವರ್ಷದ ನಂತರ ಮೈದಾನದಲ್ಲಿ ಎಂಎಸ್ ಧೋನಿ ( MS Dhoni) ನೋಡಲು ಭಾರತೀಯ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ ಧೋನಿಯನ್ನು ಕಂಡ ಅಭಿಮಾನಿಗಳು ಧೋನಿ..ಧೋನಿ.. ಎಂಬ ಘೋಷಣೆಗಳನ್ನು ಕೂಗಿರುವ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಇದು ಧೋನಿಯ ಕೊನೆಯ ಸೀಸನ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಧೋನಿಯನ್ನು ನಾಯಕನನ್ನಾಗಿ ನೋಡಲು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ.
ಮತ್ತೆ ನಾಯಕನಾದ ಧೋನಿ:
ಕಳೆದ ಋತುವಿನ ಆರಂಭಕ್ಕೆ ಒಂದು ದಿನ ಮೊದಲು ಧೋನಿ ನಾಯಕತ್ವ ತ್ಯಜಿಸಿದ್ದರು. ಬಳಿಕ ರವೀಂದ್ರ ಜಡೇಜಾ ತಂಡದ ನಾಯಕತ್ವ ವಹಿಸಿಕೊಂಡರು. ಆದರೆ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಇದಾದ ಬಳಿಕ ಮತ್ತೊಮ್ಮೆ ನಾಯಕತ್ವ ಧೋನಿ ಕೈ ಸೇರಿತು. ಈ ಋತುವಿನಲ್ಲಿ ಧೋನಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಚೆಪಾಕ್‌ನಲ್ಲಿ ಧೋನಿಯನ್ನು ನೋಡಿದ ಅಭಿಮಾನಿಗಳು ಧೋನಿ-ಧೋನಿ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಮೈದಾನದಲ್ಲಿ ಅಲ್ಲ, ಜಿಮ್‌ನೊಳಗೆ ಧೋನಿ ವರ್ಕ್ ಔಟ್ ಮಾಡುವುದನ್ನು ಸಿಎಸ್‌ಕೆ ಅಭಿಮಾನಿಗಳು ನೋಡಿ ಸಂತಸಪಟ್ಟರು.
Thala @msdhoni warming up in Gym and Crowd going crazy already 🔥 pic.twitter.com/ROTQ3PTJ2I
— 🎰 (@StanMSD) March 27, 2023
ಅಭ್ಯಾಸದ ವೇಳೆ ಧೋನಿ ಪ್ರವೇಶದ ವಿಡಿಯೋವನ್ನು ಸಿಎಸ್‌ಕೆ ಹಂಚಿಕೊಂಡಿದೆ. ಇದರಲ್ಲಿ ಧೋನಿ ಪ್ರವೇಶಿಸಿದ ತಕ್ಷಣ ಧೋನಿ-ಧೋನಿ ಎಂಬ ಘೋಷಣೆಗಳು ಎಲ್ಲೆಡೆ ಕೇಳಿಬರುತ್ತಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿತ್ತು. ಅಭ್ಯಾಸದ ಸಮಯದಲ್ಲಿಯೇ ಇಷ್ಟಿರುವಾಗ, ಸಿಎಸ್‌ಕೆ ಪಂದ್ಯದಲ್ಲಿ ಮೈದಾನವು ಶಬ್ದದೊಂದಿಗೆ ಪ್ರತಿಧ್ವನಿಸುತ್ತದೆ ಎಂದು ಪ್ರೇಕ್ಷಕರಿಂದ ಊಹಿಸಬಹುದು.
Nayagan meendum varaar… 💛🥳#WhistlePodu #Anbuden 🦁 pic.twitter.com/3wQb1Zxppe
— Chennai Super Kings (@ChennaiIPL) March 27, 2023
ಇದನ್ನೂ ಓದಿ: MS Dhoni: ಧೋನಿ ವಿದಾಯ ಪಂದ್ಯ ಯಾವಾಗ? ಯಾವ ತಂಡದ ವಿರುದ್ಧ ಕೊನೆ ಬಾರಿ ಕಣಕ್ಕಿಳಿಯಲಿದ್ದಾರೆ ಕ್ಯಾಪ್ಟನ್ ಕೂಲ್?
ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಮಹೇಂದ್ರ ಸಿಂಗ್ ಧೋನಿ (ನಾಯಕ), ಡೆವೊನ್ ಕಾನ್ವೇ, ರಿತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹ್ಯಾಂಗರ್‌ಗೆಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಹರ್ಡೇಜಾ, ರವೀಂದ್ರ ಜಹರ್ಡೇಜಾ ದೇಶಪಾಂಡೆ, ಮುಖೇಶ್ ಚೌಧರಿ, ಮತಿಶಾ ಪತಿರಾನ, ಸಿಮರ್‌ಜಿತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತಿಕಷ್ಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ