ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರ ಮೇಲೆ ಹಣದ ಮಳೆ ಸುರಿದಿದೆ. ಅದರಲ್ಲಿಯೂ ಇಂಗ್ಲಿಷ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಸಹ ಕೋಟಿ ಕೋಟಿ ಗಳಿಸಿದ್ದಾರೆ. ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) 16.25 ಕೋಟಿಗೆ ಖರೀದಿ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಎಂಎಸ್ ಧೋನಿ (MS Dhoni) ತಂಡ ಲೀಗ್ನಲ್ಲಿ 4 ಬಾರಿ ಟ್ರೋಫಿ ಗೆದ್ದಿರುವ ಐಪಿಎಲ್ನ ಅತ್ಯಂತ ನೆಚ್ಚಿನ ತಂಡ. ಅದರ ಅಭಿಮಾನಿಗಳು ಹರಾಜಿಗಾಗಿ ಕಾತರದಿಂದ ಕಾಯುತ್ತಿದ್ದರು ಎಂದರೂ ತಪ್ಪಾಗಲಾರದು. ಅದರಂತೆ ಈ ಬಾರಿ ಹರಾಜಿನ ಬಳಿಕ ಸಂಪೂರ್ಣ ತಂಡವನ್ನು ನೋಡಿದ ಅಭಿಮಾನಿಗಳು ಈ ಬಾರಿ ಸಿಎಸ್ ಕೆ ಮಾತ್ರ ಫೈನಲ್ ಆಡುವುದು ಖಚಿತ ಎನ್ನುತ್ತಿದ್ದಾರೆ. 2022ರ ಸೀಸನ್ CSK ಗೆ ತುಂಬಾ ಕೆಟ್ಟದಾಗಿತ್ತು. ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ . ಆದರೆ ಈ ಬಾರಿ ಮಾತ್ರ ಈ ಕಾರಣಗಳಿಂದ ಫೈನಲ್ ತಲುಪುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.
ಪುಣೆ ತಂಡದ ಮೂವರು ಇದೀಗ ಚೆನ್ನೈನಲ್ಲಿ:
2016 ರ ಐಪಿಎಲ್ ಋತುವಿನಲ್ಲಿ 2 ಹೊಸ ತಂಡಗಳನ್ನು ಸೇರಿಸಲಾಗಿತ್ತು. ಗುಜರಾತ್ ಲಯನ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್. ಧೋನಿ ಪುಣೆಯ ನಾಯಕತ್ವವನ್ನು ಹೊಂದಿದ್ದರು. ಅಜಿಂಕ್ಯ ರಹಾನೆ ಈ ತಂಡದ ಆರಂಭಿಕರಾಗಿ ಮತ್ತು ಬೆನ್ ಸ್ಟೋಕ್ಸ್ ಮಧ್ಯಮ ಕ್ರಮಾಂಕವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತಿದ್ದರು. 2017ರಲ್ಲಿ ಪುಣೆ ತಂಡ ಐಪಿಎಲ್ನಲ್ಲಿ ಫೈನಲ್ ತಲುಪಿ ಕೇವಲ 1 ರನ್ನಿಂದ ಪ್ರಶಸ್ತಿ ವಂಚಿತವಾಗಿತ್ತು. ಚೆನ್ನೈ ತಂಡವನ್ನು ಮುಂಬೈ ಇಂಡಿಯನ್ಸ್ ಸೋಲಿಸಿ ಚಾಂಪಿಯನ್ ಆಗಿತ್ತು.
ಮತ್ತೆ ಬೆನ್ ಸ್ಟೋಕ್ಸ್-ಧೋನಿ:
ಐಪಿಎಲ್ 2023ರ ಮಿನಿ ಹರಾಜಿನ ಮೂಲಕ, ಧೋನಿ ಮತ್ತೊಮ್ಮೆ ಬೆನ್ ಸ್ಟೋಕ್ಸ್ ಮತ್ತು ಅಜಿಂಕ್ಯ ರಹಾನೆಯನ್ನು ತಮ್ಮ ಅಂಗಳಕ್ಕೆ ಕರೆತಂದಿದ್ದಾರೆ. ಈ ಮೂವರನ್ನು ನೋಡಿದ ಕ್ರಿಕೆಟ್ ಪಂಡಿತರು ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಫೈನಲ್ ತಲುಪುವುದು ಖಚಿತ ಎಂದು ಹೇಳುತ್ತಿದ್ದಾರೆ. ಬಹುಶಃ ತಂಡವು ಐಪಿಎಲ್ 2023ರ ಪ್ರಶಸ್ತಿಯನ್ನು ಸಹ ಗೆಲ್ಲುತ್ತದೆ, ಏಕೆಂದರೆ ಧೋನಿಗೆ ಇದು ಕೊನೆಯ ಐಪಿಎಲ್ ಆಗಿರುವ ಸಾಧ್ಯತೆ ಇರುವುದರಿಂದ ಧೋನಿಗೆ ಟ್ರಿಬ್ಯೂಟ್ ನೀಡಲು ತಂಡ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: CSK Dhoni: ಚೆನ್ನೈ ಕ್ಯಾಪ್ಟನ್ ಆಗ್ತಾರಾ ಬೆನ್ ಸ್ಟೋಕ್ಸ್? CSK ನಾಯಕತ್ವದ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್
ಐಪಿಎಲ್ 2023 ಹರಾಜಿನಲ್ಲಿ ಖರೀದಿಸಿದ ಪ್ಲೇಯರ್ಸ್:
ಹರಾಜಿನಲ್ಲಿ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ರನ್ನು 16.25 ಕೋಟಿ ರೂಪಾಯಿಗೆ CSK ಖರೀದಿಸಿತು. ಅದೇ ಸಮಯದಲ್ಲಿ, ತಂಡವು ಅಜಿಂಕ್ಯ ರಹಾನೆಯನ್ನು ಅವರ ಮೂಲ ಬೆಲೆಗೆ (50 ಲಕ್ಷ ರೂ.) ಪಡೆದುಕೊಂಡಿತು. ಇವರಲ್ಲದೆ ಕೈಲ್ ಜೇಮ್ಸನ್ (1 ಕೋಟಿ), ನಿಶಾಂತ್ ಸಿಂಧು (60 ಲಕ್ಷ), ಶೇಖ್ ರಶೀದ್ (20 ಲಕ್ಷ), ಭಗತ್ ವರ್ಮಾ (20 ಲಕ್ಷ) ಮತ್ತು ಅಜಯ್ ಮಂಡಲ್ (20 ಲಕ್ಷ) ಅವರನ್ನು ಹರಾಜಿನಲ್ಲಿ ಚೆನ್ನೈ ಖರೀದಿಸಿದೆ.
ಐಪಿಎಲ್ 2023ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಮಹೇಂದ್ರ ಸಿಂಗ್ ಧೋನಿ (c), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಪತಿರ್ನಾ ಜಡೇಜಾ, ಮುಖೇಶ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಭಗತ್ ವರ್ಮಾ, ಅಜಯ್ ಮಂಡಲ್, ಕೈಲ್ ಜೇಮಿಸನ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ