• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • LSG vs CSK: ಟಾಸ್​ ಗೆದ್ದ ಧೋನಿ, ಲಕ್ನೋ ತಂಡಕ್ಕೆ ಬಿಗ್​ ಶಾಕ್​! ತಂಡದಿಂದ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​

LSG vs CSK: ಟಾಸ್​ ಗೆದ್ದ ಧೋನಿ, ಲಕ್ನೋ ತಂಡಕ್ಕೆ ಬಿಗ್​ ಶಾಕ್​! ತಂಡದಿಂದ ಸ್ಟಾರ್​ ಬ್ಯಾಟ್ಸ್​ಮನ್​ ಔಟ್​

CSK vs LSG

CSK vs LSG

LSG vs CSK IPL 2023: ಇಂದಿನ ಪಂದ್ಯವು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಚೆನ್ನೈ ನಾಯಕ ಮಹೇಂದ್ರ ಸಿಂಗ್​ ಧೋನಿ ಮೊದಲು ಬೌಲಿಂಗ್​ ಮಾಡಲು ನಿರ್ಧರಿಸಿದ್ದಾರೆ. 

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPl 2023) ನಲ್ಲಿ ಇಂದು ಡಬಲ್​ ಹೆಡ್ಡರ್​ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (LSG vs CSK) ಸೆಣಸಾಡಲಿದೆ. ಬಳಿಕ ಸಂಜೆಯ 2ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (PBKS vs MI) ತಂಡಗಳು ಸೆಣಸಾಡಲಿದೆ. ಇನ್ನು, ಚೆನ್ನೈ ಮತ್ತು ಲಕ್ನೋ ತಂಡಗಳು ತಲಾ 10 ಅಂಕಗಳನ್ನು ಹೊಂದಿದೆ. ಆದರೆ ನಿವ್ವಳ ರನ್ ರೇಟ್‌ ಆಧಾರದಲ್ಲಿ 3ನೇ ಸ್ಥಾನದಲ್ಲಿ ಚೆನ್ನೈ ಮತ್ತು 4ನೇ ಸ್ಥಾನದಲ್ಲಿ ಚೆನ್ನೈ ಯಿದೆ. ಉಭಯ ತಂಡಗಳು ಈಗಾಗಲೇ ತಮ್ಮ ಕೊನೆಯ ಪಂದ್ಯದಲ್ಲಿ ಸೋಲನ್ನಪ್ಪಿರುವ ಕಾರಣ ಈ ಪಂದ್ಯ ಹೆಚ್ಚು ಮಹತ್ವದ್ದಾಗಿದೆ. ಇಂದಿನ ಪಂದ್ಯವು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಚೆನ್ನೈ ನಾಯಕ ಮಹೇಂದ್ರ ಸಿಂಗ್​ ಧೋನಿ (MS Dhoni) ಮೊದಲು ಬೌಲಿಂಗ್​ ಮಾಡಲು ನಿರ್ಧರಿಸಿದ್ದಾರೆ. 


ಚೆನ್ನೈ ಪಂದ್ಯದಿಂದ ಕೆಎಲ್ ರಾಹುಲ್​ ಔಟ್​:


ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ನಾಯಕ ಕೆಎಲ್ ರಾಹುಲ್ ಪಂದ್ಯಾವಳಿಯಿಂದ ಹೊರಗುಳಿಯುವುದರೊಂದಿಗೆ ಎಲ್‌ಎಸ್‌ಜಿ ಭಾರಿ ಹಿನ್ನಡೆಯಾಗಿದೆ. ತಂಡವು ಕಡಿಮೆ ಸ್ಕೋರ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು ಆದರೆ ಅವರು ಹೊಂದಿರುವ ಪ್ಲಸ್ ಪಾಯಿಂಟ್ ಟೇಬಲ್‌ನಲ್ಲಿ ಅವರ ಸ್ಥಾನ ಭದ್ರಪಡಿಸಿದೆ. ಅವರು ಸಿಎಸ್‌ಕೆಗಿಂತ ಮೇಲಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಮತ್ತು ತವರಿನಲ್ಲಿ CSK ವಿರುದ್ಧ ಗೆಲುವಿನೊಂದಿಗೆ ಮೇಲೇರಲು ಕಾತುರವಾಗಿದೆ. ಕೆಎಲ್​ ರಾಹುಲ್ ಹೊರಗುಳಿಯುತ್ತಿರುವುದರಿಂದ ಅವರ ಬದಲಿಗೆ ಕೃನಲ್​ ಪಾಂಡ್ಯ ಅವರಿಗೆ ನಾಯಕತ್ವವನ್ನು ನೀಡಲಾಗಿದೆ.



ಹವಾಮಾನ ವರದಿ:


ಲಕ್ನೋದ ಎಕಾನಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಸದ್ಯ ಮಳೆಯಿಂದಾಗಿ ಟಾಸ್‌ ಸಹ ವಿಳಂಬವಾಯಿತು. ಆದರೆ ಸದ್ಯ ಮಳೆ ನಿಂತಿದ್ದು, ವಾತಾವರಣವು ಮೋದ ಕವಿದಿದೆ. ಹೀಗಾಗಿ ಪಂದ್ಯದ ನಡುವೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಮಳೆಯಿಂದಾಗಿ ಮೈದಾನ ನಿಧಾನವಾಗಿರುತ್ತದೆ. ಇದರಿಂದಾಗಿ ಇಂದಿನ ಪಂದ್ಯವು ಕಡಿಮೆ ಸ್ಕೋರ್​ ಪಂದ್ಯವಾಗುವ ಸಾಧ್ಯತೆ ಇದೆ.


ಇದನ್ನೂ ಓದಿ: IPL 2023: ಕೋಟಿ ದಂಡ ಬಿದ್ರೂ ಕೊಹ್ಲಿಗಿಲ್ಲ ನಯಾ ಪೈಸೆ ನಷ್ಟ! ಏನಿದು ಬಿಸಿಸಿಐ ಹೊಸ ಲೆಕ್ಕಾಚಾರ?


ಆರ್​ಸಿಬಿ ಜೊತೆ ಲಕ್ನೋ ಆಟಗಾರರ ಕಿರಿಕ್​:


ಇನ್ನು, ಸೋಮವಾರ ನಡೆದ ಆರ್​ಸಿಬಿ ಮತ್ತು ಲಕ್ನೋ ಪಂದ್ಯದ ಕೊನೆಯಲ್ಲಿ ಲಕ್ನೋ ತಂಡದ ಬೌಲರ್​ ನವೀಲ್​-ಉಲ್​-ಹಕ್​ ಮತ್ತು ಕೊಹ್ಲಿ ಹಾಗೂ ಗಂಭಿರ್​ ನಡುವೆ ಮಾತಿನ ಚಕಮಕಿ ನಡೆಯಿತು. ಈ ಇಬ್ಬರು ಆಟಗಾರರ ಮಧ್ಯೆ ನಡೆಯುತ್ತಿರುವ ವಾಗ್ವಾದ ಮತ್ತು ಜಗಳ ನಿನ್ನೆ ಮೊನ್ನೆಯದಲ್ಲ, ಸುಮಾರು 10 ವರ್ಷಗಳು ಹಳೆಯದು. ಹೌದು.. ಗೌತಮ್ ಗಂಭೀರ್ 10 ವರ್ಷಗಳ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾಗ ಆದ ಜಗಳವನ್ನು ಮತ್ತೆ ನಿನ್ನೆಯ ಪಂದ್ಯ ನೆನಪಿಸಿತು ನೋಡಿ.




ಲಕ್ನೋ - ಚೆನ್ನೈ ಪ್ಲೇಯಿಂಗ್​ 11:


ಲಕ್ನೋ ಸೂಪರ್ ಜೈಂಟ್ಸ್‌ನ ಪ್ಲೇಯಿಂಗ್​ 11: ಕೈಲ್ ಮೇಯರ್ಸ್, ಮನನ್ ವೋಹ್ರಾ, ಕರ್ಣ್ ಶರ್ಮಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್ (wk), ಕೃನಾಲ್ ಪಾಂಡ್ಯ (c), ಕೃಷ್ಣಪ್ಪ ಗೌತಮ್, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.


ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್​ 11: ಡೆವೊನ್ ಕಾನ್ವೆ, ರಿತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮತಿಶ ಪತಿರಾನ, ಮಹೇಶ್ ತಿಕಷ್ಣ.

First published: