• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಹೈದರಾಬಾದ್​ ವಿರುದ್ಧ ಮಿಂಚಿದ 17 ಕೋಟಿ ವೀರ! ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್ ಜಯ

IPL 2023: ಹೈದರಾಬಾದ್​ ವಿರುದ್ಧ ಮಿಂಚಿದ 17 ಕೋಟಿ ವೀರ! ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್ ಜಯ

ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್ ಜಯ

ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್ ಜಯ

Indian Premier League: ಸತತ ಎರಡು ಸೋಲುಗಳ ನಂತರ ಅದ್ಭುತ ಕಮ್​ಬ್ಯಾಕ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ಸತತ ಮೂರನೇ ಜಯ ಸಾಧಿಸಿದೆ. ಸನ್​ರೈಸರ್ಸ್​ ವಿರುದ್ಧ 14 ರನ್​ಗಳ ಜಯದೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿದೆ.

  • News18 Kannada
  • 4-MIN READ
  • Last Updated :
  • Hyderabad, India
  • Share this:

ಹೈದರಾಬಾದ್​: 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 16ನೇ ಆವೃತ್ತಿಯನ್ನ ಸತತ ಎರಡು ಸೋಲುಗಳಿಂದ ಆರಂಭಿಸಿದರೂ, ನಂತರ ಭರ್ಜರಿ ಕಮ್​ಬ್ಯಾಕ್ ಮಾಡಿ ಹ್ಯಾಟ್ರಿಕ್ ಜಯ ಸಾಧಿಸಿದೆ. ಇಂದು ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದ ರೋಹಿತ್ ಪಡೆ 14 ರನ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತ ಮೂರನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿತ ಕಂಡಿದೆ.


ಮುಂಬೈ ನೀಡಿದ್ದ 193 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ತಂಡ 19.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 178 ರನ್​ಗಳಿಸಲಷ್ಟೇ ಶಕ್ತವಾಯಿತು. ಕನ್ನಡಿಗ ಮಯಾಂಕ್ ಅಗರ್ವಾಲ್​ 48, ನಾಯಕ ಮಾರ್ಕ್ರಮ್​ 22, ಹೆನ್ರಿಚ್ ಕ್ಲಾಸೆನ್​ 36, ಮಾರ್ಕೊ ಜಾನ್ಸನ್​ 13 ರನ್​ಗಳಿಸಿದರು. ಉಳಿದ ಬ್ಯಾಟರ್​ಗಳಿಂದ ಉತ್ತಮ ಪ್ರದರ್ಶನ ಬಾರದ ಕಾರಣ ಸೋಲು ಕಾಣಬೇಕಾಯಿತು.


ಮುಂಬೈ ಇಂಡಿಯನ್ಸ್ ಪರ ಜೇಸನ್ ಬೆಹ್ರೆನ್ಡಾರ್ಫ್ 2, ರಿಲೇ ಮೆರಿಡಿತ್ 2, ಪಿಯೂಷ್ ಚಾವ್ಲಾ 2, ಅರ್ಜುನ್ ತೆಂಡೂಲ್ಕರ್ ಮತ್ತು ಗ್ರೀನ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


ಅರ್ಜುನ್ ತೆಂಡೂಲ್ಕರ್​ಗೆ ಮೊದಲ ವಿಕೆಟ್​


2022ರಲ್ಲೇ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ತಂಡ ಸೇರಿಕೊಂಡರೂ ಒಂದೂ ಅವಕಾಶ ಪಡೆಯದ ಜೂನಿಯರ್ ತೆಂಡೂಲ್ಕರ್​, ತನ್ನ 2ನೇ ಪಂದ್ಯದಲ್ಲಿ ವಿಕೆಟ್​ ಪಡೆಯುವಲ್ಲಿ ಸಫಲರಾದರು. ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ವಿಕೆಟ್​ ಗಿಟ್ಟಿಸಿಕೊಂಡರು.


ಉತ್ತರ ಆರಂಭ ಪಡೆದಿದ್ದ ಮುಂಬೈ


ಟಾಸ್​ ಸೋತು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್​ ಮೊದಲ ವಿಕೆಟ್​ 41 ರನ್​ ಸೇರಿಸಿದರು. ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭದ ಭರವಸೆ ನೀಡಿದರಾದರೂ 28 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್ ಕಿಶನ್ 31 ಎಸೆತಗಳಲ್ಲಿ 38 ರನ್​ಗಳಿಸಿದರು. ನಂತರ ಬಂದ ಸೂರ್ಯಕುಮಾರ್​ ಯಆದವ್​ ಕೇವಲ 7 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು..


ಮಿಂಚಿದ ಕ್ಯಾಮೆರಾನ್ ಗ್ರೀನ್


ಸನ್​ರೈಸರ್ಸ್ ಹೈದರಾಬಾದ್​ ಕಠಿಣ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಆಸೀಸ್​ ಆಲ್​ರೌಂಡರ್ ಹಾಗೂ ಐಪಿಎಲ್​ನ 2ನೇ ದುಬಾರಿ ಆಟಗಾರ​ ಕ್ಯಾಮೆರಾನ್ ಗ್ರೀನ್ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ ಅಜೇಯ 64 ರನ್​ಗಳಿಸಿ ತಂಡದ ಮೊತ್ತವನ್ನು ಎಚ್ಚಿಸಿದರು. ಇವರಿಗೆ ಸಾಥ್ ನೀಡಿದ ಯಂಗ್ ಬ್ಯಾಟರ್​ ತಿಲಕ್ ವರ್ಮಾ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 2 ಬೌಂಡರಿ ಸಹಿತ 37 ರನ್​ಗಳಿಸಿ 192 ರನ್​ಗಳ ಬೃಹತ್​ ಮೊತ್ತಕ್ಕೆ ನೆರವಾದರು.


ಪಾಯಿಂಟ್ ಪಟ್ಟಿ ಹೀಗಿದೆ


ಹ್ಯಾಟ್ರಿಕ್  ಜಯ ಸಾಧಿಸಿದ ಮುಂಬೈ ಇಂಡಿಯನ್ಸ್  8ನೇ ಸ್ಥಾನದಿಂದ 6ನೇ ಸ್ಥಾಕ್ಕೆ ಜಿಗಿತ ಕಂಡಿದೆ. ಇತ್ತ ಸತತ ಎರಡು ಜಯ ಸಾಧಿಸಿದ್ದ ಸನ್​ರೈಸರ್ಸ್​ ಹೈದರಾಬಾದ್​ 5 ಪಂದ್ಯಗಳಲ್ಲಿ  4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.  5 ಪಂದ್ಯಗಳಲ್ಲಿ 4 ಗೆಲುವು 1  ಸೋಲು ಕಂಡಿರುವ ರಾಜಸ್ಥಾನ್ ರಾಯಲ್ಸ್ ತಂಡ ಅಗ್ರಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್​ 2,ಚೆನ್ನೈ ಸೂಪರ್ ಕಿಂಗ್ಸ್ 3  ಗುಜರಾತ್ ಟೈಟನ್ಸ್ 4 ಪಂಜಾಬ್ ಕಿಂಗ್ಸ್ 5ನೇ ಸ್ಥಾನದಲ್ಲಿದೆ.


ತಂಡಗಳ ವಿವರ


ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಅರ್ಜುನ್ ತೆಂಡೂಲ್ಕರ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್


ಬೆಂಚ್: ರಿಲೆ ಮೆರೆಡಿತ್, ರಮಣದೀಪ್ ಸಿಂಗ್, ಕುಮಾರ್ ಕಾರ್ತಿಕೇಯ, ಶಮ್ಸ್ ಮುಲಾನಿ, ವಿಷ್ಣು ವಿನೋದ್, ದುವಾನ್ ಜಾನ್ಸೆನ್, ಅರ್ಷದ್ ಖಾನ್, ಸಂದೀಪ್ ವಾರಿಯರ್, ಜೋಫ್ರಾ ಆರ್ಚರ್, ಆಕಾಶ್ ಮಾಧ್ವಲ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್

top videos
    First published: