• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಮ್ಯಾಚ್ ನಡೆಯುವಾಗ ಸ್ಟೇಡಿಯಂ ಒಳಗೆ ಪೋಸ್ಟರ್ ಹಿಡಿದು ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಮಿಸ್ ಮಾಡದೇ ಓದಿ

IPL 2023: ಮ್ಯಾಚ್ ನಡೆಯುವಾಗ ಸ್ಟೇಡಿಯಂ ಒಳಗೆ ಪೋಸ್ಟರ್ ಹಿಡಿದು ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಮಿಸ್ ಮಾಡದೇ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL 2023: ಐಪಿಎಲ್​ ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಐಪಿಎಲ್ ಫ್ರಾಂಚೈಸಿಗಳು 'ನಿಷೇಧಿತ ವಸ್ತುಗಳ' ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಕೆಲ ಪಂದ್ಯದ ವೇಳೆ ಪೋಸ್ಟರ್‌ಗಳನ್ನು ಪ್ರದರ್ಶಿಸಲು ನಿಷೇಧಿಸಲಾಗಿದೆ.

  • Share this:

ವಿಶ್ವವಿಖ್ಯಾತ ಟಿ20 ಕ್ರಿಕೆಟ್ ಲೀಗ್ ಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ ನ (IPL 2023) 16ನೇ ಸೀಸನ್ ಆರಂಭವಾಗಿದೆ. ರೋಚಕ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಮತ್ತು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ಹುರಿದುಂಬಿಸಲು ಪ್ರೇಕ್ಷಕರು ಕ್ರೀಡಾಂಗಣಗಳಿಗೆ ಬರುತ್ತಿದ್ದಾರೆ. ಆದರೆ ಈಗ ಐಪಿಎಲ್ ಪಂದ್ಯದ ವೇಳೆ ಪ್ರೇಕ್ಷಕರು ಏನಾದರೂ ವಿವಾದಾತ್ಮಕ ವಿಷಯಗಳ ಪೋಸ್ಟರ್‌ಗಳನ್ನು (Poster) ಪ್ರದರ್ಶಿಸಿದರೆ ಮುಂದೆ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬೇಕಾಗಬಹುದು. ಹೌದು, ಈಗಾಗಲೇ ಐಪಿಎಲ್​ ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಐಪಿಎಲ್ ಫ್ರಾಂಚೈಸಿಗಳು ನಿಷೇಧಿತ ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.


ಪೋಸ್ಟರ್​ ತರುವ ಮುನ್ನ ಎಚ್ಚರ:


ಪಂದ್ಯದ ವೇಳೆ ಪೋಸ್ಟರ್‌ಗಳನ್ನು ಪ್ರದರ್ಶಿಸುವ ಪ್ರೇಕ್ಷಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಕ್ರೀಡಾಂಗಣದಲ್ಲಿ ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ವಿವಾದಾತ್ಮಕ ಪೋಸ್ಟರ್‌ಗಳನ್ನು ಪ್ರದರ್ಶಿಸುವುದನ್ನು ಫ್ರಾಂಚೈಸಿಗಳು ನಿಷೇಧಿಸಿವೆ. ಇದರ ಅಡಿಯಲ್ಲಿ, ಪ್ರೇಕ್ಷಕರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಗೆ ಸಂಬಂಧಿಸಿದ ಯಾವುದೇ ರೀತಿಯ ಬ್ಯಾನರ್ ಅನ್ನು ಕ್ರೀಡಾಂಗಣದೊಳಗೆ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇಲ್ಲ ಎಂದು ತಿಳಿಸಿದೆ.


ದೆಹಲಿ, ಮೊಹಾಲಿ, ಹೈದರಾಬಾದ್ ಮತ್ತು ಅಹಮದಾಬಾದ್ ನಾಲ್ಕು ನಗರಗಳಲ್ಲಿ ನಡೆಯಲಿರುವ ಪಂದ್ಯಗಳಿಗೆ ಈ ನಿಯಮ ಇರಲಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ವರದಿ ಪ್ರಕಾರ, ಐಪಿಎಲ್ ಫ್ರಾಂಚೈಸಿಗಳು ತವರು ಮೈದಾನದಲ್ಲಿ ಪಂದ್ಯಗಳಿಗೆ ಟಿಕೆಟ್ ಮಾರಾಟದ ಬಗ್ಗೆ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್​ ಶಾಕ್​, ಮತ್ತೆ ಜಾರಿಯಾಗುತ್ತಾ ಕೋವಿಡ್​​ ಟಫ್​ ರೂಲ್ಸ್?


ಹಾಗಾಗಿ ಐಪಿಎಲ್ ಪಂದ್ಯಗಳಿಂದ ಸಾಮಾಜಿಕ ಭಾವನೆಗಳಿಗೆ ಧಕ್ಕೆಯಾಗಬಾರದು. ಪಂದ್ಯ ಯಾವುದೇ ರೀತಿಯಲ್ಲಿ ರಾಜಕೀಯ ತಿರುವು ಪಡೆದುಕೊಳ್ಳದಂತೆ ತಡೆಯಲು ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದೂ ತಿಳಿದುಬಂದಿದೆ. ಈ ಹಿಂದೆ ಕತಾರ್‌ನಲ್ಲಿ ನಡೆದ ಫುಟ್‌ಬಾಲ್ ವಿಶ್ವಕಪ್‌ಗೆ ಫಿಫಾ ಇದೇ ರೀತಿಯ ನಿಯಮಗಳನ್ನು ಪರಿಚಯಿಸಿತ್ತು. FIFA ವಿಶ್ವಕಪ್‌ನಲ್ಲಿ ರಾಜಕೀಯ, ಧಾರ್ಮಿಕ, ವೈಯಕ್ತಿಕ ಅಥವಾ ಯಾವುದೇ ರೀತಿಯ ಘೋಷಣೆಗಳನ್ನು ನಿಷೇಧಿಸಲಾಗಿತ್ತು. ಇದೀಗ ಐಪಿಎಲ್​ನಲ್ಲಿಯೂ ಈ ನಿಯಮ ಜಾರಿಗೆ ಬಂದಂತಾಗಿದೆ.




ಮೋದಿ ಮೈದಾನದಲ್ಲಿಯೂ ಈ ವಸ್ತುಗಳಿಗಿತ್ತು ನಿಷೇಧ:


ಹೌದು, ಐಪಿಎಲ್​ ಆರಂಭಿಕ ಪಂದ್ಯ ಚೆನ್ನೈ ಮತ್ತು ಗುಜರಾತ್​ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದ ವೇಳೆ ಕ್ರಿಕೆಟ್​ ನೋಡಲು ಬರುವ ಪ್ರೇಕ್ಷಕರು ಕೆಲ ವಸ್ತುಗಳನ್ನು ತರುವುದಕ್ಕೆ ನಿಷೇಧ ಹೇರಲಾಗಿತ್ತು. ಪ್ರೇಕ್ಷಕರು ಪಂದ್ಯವನ್ನು ನೋಡಲು ಬರುವಾಗ ಈ 13 ವಸ್ತುಗಳನ್ನು ಮೈದಾನಕ್ಕೆ ತರುವಂತಿರಲಿಲ್ಲ. ಭದ್ರತಾ ದೃಷ್ಟಿಯಿಂದ ಗುಜರಾತ್​ ಮೈದಾನದ ಅಧಿಕಾರಿಗಳು ಕೆಲ ವಸ್ತುಗಳನ್ನು ತರಲು ನಿಷೇಧಿಸಲಾಗಿದೆ ಎಂದು ತಿಳಿಸಿದ್ದರು.

top videos


    ಅದರ ಪ್ರಕಾರ, ಕ್ರಿಕೆಟ್​ ಪಂದ್ಯ ನೋಡಲು ಹೋಗುವ ಪ್ರೇಕ್ಷಕರು, ನಾಣ್ಯ, ಕ್ಯಾಮರಾ, ಹೆಲ್ಮೇಟ್​, ಆಹಾರ ಪದಾರ್ಥಗಳು, ಗನ್​ (ಶಸ್ತ್ರಾಸ್ತ್ರಗಳು), ನೀರಿನ ಬಾಟಲಿ, ಛತ್ರಿ, ಬ್ಯಾಗ್​, ಚಾಕು (ಚೂಪಾದ ಯಾವುದೇ ರೀತಿಯ ವಸ್ತುಗಳು), ದೊಣ್ಣೆ (ಮರದ ಕಟ್ಟಿಗೆ), ಸಲ್ಫಿ ಸ್ಟಿಕ್​, ಪವರ್​ ಬ್ಯಾಂಕ್​ ಮತ್ತು ಸಿಗರೇಟ್​ ಲೈಟರ್​ ಗಳನ್ನು ನಿಷೇದಿಸಲಾಗಿತ್ತು.

    First published: