ಐಪಿಎಲ್ 2023 ರ ಮಿನಿ ಹರಾಜು (IPL Auction 2023) ಪ್ರಾರಂಭವಾಗಿದೆ. 10 ಫ್ರಾಂಚೈಸಿಗಳು (Franchise) ತಮ್ಮ ತಂಡವನ್ನು ಪೂರ್ಣಗೊಳಿಸಲು ಇಂದು ಹರಾಜಿಗೆ ಎಂಟ್ರಿಕೊಟ್ಟಿವೆ. ಹರಾಜಿನಲ್ಲಿ 405 ಆಟಗಾರರನ್ನು ಹರಾಜು ಹಾಕಲಾಗುತ್ತಿದೆ. ಈ ಹರಾಜಿಗಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಕೂಡ ಭಾಗವಹಿಸಿದ್ದಾರೆ. ಈ ಮಿನಿ ಹರಾಜಿನಲ್ಲಿ ಪ್ರಮುಖವಾಗಿ ಇಂಗ್ಲೆಂಡ್ನ ಆಲ್ರೌಂಡರ್ಗಳಾದ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ ಸೇರಿದಂತೆ ಹಲವು ಆಟಗಾರರಿಗೆ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಸನ್ರೈಸರ್ಸ್ ಹೈದರಾಬಾದ್ ಹೆಚ್ಚು ಹಣವನ್ನು ಹೊಂದಿದ್ದು, ಇದರ ನಂತರ ಪಂಜಾಬ್ ಕಿಂಗ್ಸ್ ಇದೆ.
ಇತಿಹಾಸ ನಿರ್ಮಿಸಿದ ಸ್ಯಾಮ್ ಕರನ್!
ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ತಂಡ ಆಟಗಾರ ಸ್ಯಾಮ್ ಕರನ್ ಹೊಸ ದಾಖಲೆ ಬರೆದಿದ್ದಾರೆ. 18.50 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ. ಐಪಿಎಲ್ ಹರಾಜಿನ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್. ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕ್ಯಾಪಿಟಲ್ಸ್ ಫ್ರಾಂಚೈಸ್ ₹ 18.50 ಕೋಟಿ ನೀಡಿ ಖರೀದಿಸಿದೆ.
ಕ್ರಿಸ್ ಮಾರಿಸ್ ದಾಖಲೆ ಮುರಿದ ಸ್ಯಾಮ್!
ಇದರೊಂದಿಗೆ ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಜೇಬಿಗಿಳಿಸಿಕೊಂಡ ಆಟಗಾರ ಎಂಬ ಶ್ರೇಯ ಸ್ಯಾಮ್ ಅವರದ್ದಾಗಿದೆ. ಈ ಹಿಂದೆ (2021ರಲ್ಲಿ) ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ ಅವರನ್ನು ರಾಜಸ್ತಾನ ರಾಯಲ್ಸ್ ತಂಡ ₹ 16.25 ಕೋಟಿ ನೀಡಿ ಖರೀದಿಸಿತ್ತು. ಅದು ಈ ವರೆಗೆ ದಾಖಲೆಯಾಗಿತ್ತು.
ಕಳೆದ ಸೀಸನ್ನಲ್ಲಿ IPL ಆಡಿರಲಿಲ್ಲ ಸ್ಯಾಮ್!
ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಐಪಿಎಲ್ ನಲ್ಲಿ ದಾಖಲೆ ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಐಪಿಎಲ್ ಹರಾಜಿಗೆ ಬರುತ್ತಿರುವ ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ 17.50 ಕೋಟಿ ರೂ.ಗೆ ಖರೀದಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ