ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಬಗ್ಗೆ ಸದ್ಯ ಸಾಕಷ್ಟು ಚರ್ಚೆಯಾಗುತ್ತಿದೆ. ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಕೆಕೆಆರ್ (KKR) ವಿರುದ್ಧ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅಲ್ಲದೇ ಸಚಿನ್ ಪುತ್ರ ಅರ್ಜುನ್ ಐಪಿಎಲ್ ಆರಂಬದಲ್ಲಿಯೇ ಅಪ್ಪನ ದಾಖಲೆಯನ್ನೂ ಮೀರಿದ್ದಲ್ಲದೇ, ಒಂದು ಕೆಟ್ಟ ದಾಖಲಿಯನ್ನೂ ಮಾಡಿದ್ದಾರೆ. ಆದರೆ ಏತನ್ಮಧ್ಯೆ ಅರ್ಜುನ್‌ನ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅರ್ಜುನ್‌ನ ಈ ಕೃತ್ಯಕ್ಕೆ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವೈರಲ್ ಆದ ವಿಡಿಯೋ ನಿಜವೋ ಅಥವಾ ಸುಳ್ಳೋ ಎನ್ನುವುದರ ಕುರಿತು ಇದೀಗ ಚರ್ಚೆಗಳು ಆರಮಭವಾಗಿದೆ.
ಅರ್ಜುನ್ ತೆಂಡೂಲ್ಕರ್ ವಿಡಿಯೋ ವೈರಲ್:
ಐಪಿಎಲ್ 2023 ರ 35ನೇ ಪಂದ್ಯವು ಏಪ್ರಿಲ್ 25 ರಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ವಿರುದ್ಧ ಹೀನಾಯವಾಗಿ ಸೋತಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 55 ರನ್ ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ ಮಾಡುವಾಗ 1 ವಿಕೆಟ್ ಮತ್ತು 13 ರನ್ ಗಳಿಸಿದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಪಂದ್ಯಗಳ ನಂತರ ಅರ್ಜುನ್ ತೆಂಡೂಲ್ಕರ್ ಅವರ ಒಂದು ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಅರ್ಜುನ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಮೂಗಿನ ಒಳಗೆ ಬೆರಳಿಟ್ಟುಕೊಂಡಿರುವುದು ಕಂಡುಬಂದಿದೆ. ಅರ್ಜುನನ ಈ ಕೃತ್ಯವನ್ನು ನೋಡಿದ ಜನರು ಅವನ ಬಗ್ಗೆ ಅನೇಕ ತಪ್ಪು ಅಭಿಪ್ರಾಯಗಳನ್ನು ಸಹ ಹೊರಹಾಕುತ್ತಿದ್ದಾರೆ. ಆದರೆ ಇದೀಗ ಈ ವಿಡಿಯೋ ಹಿಂದಿನ ಸತ್ಯ ಹೊರಬಿದ್ದಿದೆ.
— Out_of_Context_Cricket (@OffbeatCricket_) April 26, 2023
ಅರ್ಜುನ್ ತೆಂಡೂಲ್ಕರ್ ಅವರ ಈ ವಿಡಿಯೋ ನಕಲಿ ಎಂದು ತಿಳಿದುಬಂದಿದೆ. ಮೂಲ ವೀಡಿಯೋವನ್ನು ತಿದ್ದುವ ಮೂಲಕ ಈ ವೀಡಿಯೊವನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ. ವೈರಲ್ ಆದ ವಿಡಿಯೋವನ್ನು ರಿವರ್ಸ್ ಮಾಡಲಾಗಿದೆ. ಅಂದರೆ, ಮೂಲ ವೀಡಿಯೊ ಅಂತ್ಯದಿಂದ ಪ್ರಾರಂಭವಾಗುತ್ತದೆ. ಅರ್ಜುನ ಮೂಗಿನಿಂದ ಬೆರಳನ್ನು ಬಾಯಿಗೆ ಹಾಕಿಕೊಳ್ಳಲಿಲ್ಲ. ಆದರೆ ಮೂಲ ವೀಡಿಯೊದಲ್ಲಿ, ಅವನು ತನ್ನ ಬೆರಳನ್ನು ಮೊದಲು ಕಡಿದು ಬಳಿಕ ಮೂಗಿನೊಳಗೆ ಇಡುವುದನ್ನು ಕಾಣಬಹುದು. ಟ್ವಿಟ್ಟರ್ ಬಳಕೆದಾರರು ಅರ್ಜುನ್ ಅವರ ಮೂಲ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: IPL 2023: ಇಷ್ಟು ದಿನ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ; ಐಪಿಎಲ್‌ನಲ್ಲಿ ಈಗ ಶುರುವಾಗುತ್ತೆ RCB ರಿಯಲ್ ಜರ್ನಿ
ಐಪಿಎಲ್‌ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ:
ಮುಂಬೈ ಇಂಡಿಯನ್ಸ್ ಆಟಗಾರ ಅರ್ಜುನ್ ತೆಂಡೂಲ್ಕರ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಬೇಡದ ದಾಖಲೆ ನಿರ್ಮಿಸಿದ್ದಾರೆ. ಹೌದು, ಅವರು ಐಪಿಎಲ್ 2023ರ ಅತ್ಯಂತ ದುಬಾರಿ ಓವರ್ ಅನ್ನು ಎಸೆದಿದ್ದರು. 16 ನೇ ಓವರ್ ಎಸೆದ ಅರ್ಜುನ್ ತೆಂಡೂಲ್ಕರ್ ಅವರಿಗೆ ಸ್ಯಾಮ್ ಕುರ್ರಾನ್ ಮತ್ತು ಹರ್‌ಪ್ರೀತ್ ಭಾಟಿಯಾ 31 ರನ್ ಚಚ್ಚಿದರು.
ಈ ಋತುವಿನಲ್ಲಿ ಅತ್ಯಂತ ದುಬಾರಿ ಬೌಲಿಂಗ್ ಮಾಡಿದ ಅರ್ಜುನ್, ಗುಜರಾತ್ ಟೈಟಾನ್ಸ್ ಯಶ್ ದಯಾಲ್ ಅವರನ್ನು ಸರಿಗಟ್ಟಿದ್ದಾರೆ. ಅಂತಿಮ ಓವರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 31 ರನ್‌ಗಳ ಅಗತ್ಯವಿದ್ದಾಗ ಎಡಗೈ ಆಟಗಾರ ದಯಾಲ್ ಅವರು ರಿಂಕು ಸಿಂಗ್‌ಗೆ ಸತತ ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರು. ಐಪಿಎಲ್‌ನಲ್ಲಿ ವಿಕೆಟ್ ಪಡೆಯುವಲ್ಲಿ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್ 2008 ರಿಂದ 2013 ರವರೆಗೆ ಸತತ 6 ಸೀಸನ್‌ಗಳಲ್ಲಿ ಆಡಿದ್ದರು ಆದರೆ ಅವರಿಗೆ ಐಪಿಎಲ್‌ನಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ