• Home
  • »
  • News
  • »
  • sports
  • »
  • IPL 2023: ತಡವಾಗಿ ಆರಂಭವಾಗಲಿದೆ ಐಪಿಎಲ್​ 2023, ಇಲ್ಲಿದೆ ಕಾರಣ

IPL 2023: ತಡವಾಗಿ ಆರಂಭವಾಗಲಿದೆ ಐಪಿಎಲ್​ 2023, ಇಲ್ಲಿದೆ ಕಾರಣ

ಸಾದರ್ಭಿಕ ಚಿತ್ರ

ಸಾದರ್ಭಿಕ ಚಿತ್ರ

IPL 2023: ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಋತುವಿನ ಹರಾಜು ದಿನಾಂಕ ಸಮೀಪಿಸುತ್ತಿದೆ. ಆದಾಗ್ಯೂ, ಈ ಋತುವಿನ ಆರಂಭವನ್ನು ಒಂದು ತಿಂಗಳು ಮುಂದೂಡಲಾಗುವುದು ಎಂಬ ಸುದ್ದಿ ಇದೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 16ನೇ ಋತುವಿನ ಆರಂಭದ ಬಗ್ಗೆ ಜನರಲ್ಲಿ ಸಾಕಷ್ಟು ಉತ್ಸಾಹವಿದೆ. ಅದೇ ಸಮಯದಲ್ಲಿ, ಕೊರೋನಾ (Corona) ಬಳಿಕ 2022ರಲ್ಲಿ ಜನರು IPL ಅನ್ನು ತುಂಬಾ ಆನಂದಿಸಿದರು. ಈ ಪಂದ್ಯಾವಳಿಯು 2022ರ ಗೂಗಲ್ ಹುಡುಕಾಟದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಮುಂದಿನ IPL 16ನೇ ಋತುವಿನ ಪ್ರಾರಂಭವು ವಿಳಂಬವಾಗಬಹುದು. ಐಪಿಎಲ್ ಅನ್ನು ಪ್ರತಿ ಬಾರಿ ಮಾರ್ಚ್‌ನಲ್ಲಿ ಆಯೋಜಿಸಲಾಗುತ್ತಿತ್ತು ಆದರೆ ಈ ಸೀಸನ್ ಅನ್ನು 1 ತಿಂಗಳ ವಿಳಂಬದೊಂದಿಗೆ ಆಯೋಜಿಸಬಹುದು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ವಿಷಯದ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.


ವಿಳಂಬವಾಗಲಿದೆ ಐಪಿಎಲ್ 2023:


ಆದಾಗ್ಯೂ, ಕೊರೋನಾ ವೈರಸ್‌ನಿಂದಾಗಿ ಕಳೆದ 2020 ಮತ್ತು 2021ರ ಋತುವನ್ನು ಸಮಯಕ್ಕೆ ಸರಿಯಾಗಿ ಆಯೋಜಿಸಲಾಗಲಿಲ್ಲ. ಆದರೆ ಈ ಬಾರಿ ವಿಳಂಬಕ್ಕೆ ಕಾರಣ ಬೇರೆ. ವಾಸ್ತವವಾಗಿ, ಮಹಿಳಾ ಐಪಿಎಲ್ ಅನ್ನು 2023ರಲ್ಲಿ ಮಾತ್ರ ಆಯೋಜಿಸಲಾಗುತ್ತದೆ. ಸುದ್ದಿ ಪ್ರಕಾರ ಮಾರ್ಚ್ ಮೊದಲ ವಾರದಲ್ಲಿ ಮಹಿಳಾ ಐಪಿಎಲ್ ಆಯೋಜನೆಯಾಗಲಿದೆ. ಈ ಟೂರ್ನಿಯ ಪ್ರಮುಖ ಪಂದ್ಯಗಳು ಮಾರ್ಚ್ ಅಂತ್ಯದವರೆಗೆ ನಡೆಯಬಹುದು. ಇದರಿಂದಾಗಿ ಪುರುಷರ ಐಪಿಎಲ್ ಆರಂಭ ತಡವಾಗಬಹುದು. ಈ ಬಾರಿ ಏಪ್ರಿಲ್‌ನಲ್ಲಿ ಟೂರ್ನಿ ಆಯೋಜಿಸಬಹುದು. ಐಪಿಎಲ್ 2023 ರ ಹರಾಜು ಡಿಸೆಂಬರ್ 23 ರಂದು ಪ್ರಾರಂಭವಾಗುತ್ತದೆ.


ಮಹಿಳಾ ಐಪಿಎಲ್ ಆರಂಭ:


5 ತಂಡಗಳೊಂದಿಗೆ ಮಹಿಳಾ ಐಪಿಎಲ್ ಆಯೋಜಿಸಲಾಗಿದೆ. ಈ ಟೂರ್ನಿಯು ಮೊದಲ ಬಾರಿಗೆ ಆರಂಭವಾಗುತ್ತಿದ್ದು, ಬಿಸಿಸಿಐ ಹೆಚ್ಚು ಕಾರ್ಯನಿರತವಾಗಿದೆ. ಮೊದಲ ಸೀಸನ್ ಆಗಿರುವುದರಿಂದ ಜೋರಾಗಿ ಆಯೋಜಿಸಲಾಗುತ್ತಿದ್ದು, ದೊಡ್ಡ ಹರಾಜು ಕೂಡ ಆಯೋಜಿಸಬಹುದು. ಈ ಪಂದ್ಯಾವಳಿಯ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.


ಇದನ್ನೂ ಓದಿ: IPL 2023: ಐಪಿಎಲ್​ ಫ್ರಾಂಚೈಸಿಗಳಿಗೆ ಬಿಗ್​ ಶಾಕ್​ ನೀಡಿದ ಬಿಸಿಸಿಐ, ಒಬ್ಬ ಭಾರತೀಯ ಆಟಗಾರನಿಗೆ ಮಾತ್ರ ಸಿಗಲಿದೆ ಚಾನ್ಸ್?


ಐಪಿಎಲ್‌ಗೂ ಮುನ್ನ ಮಹಿಳಾ ಟಿ20 ವಿಶ್ವಕಪ್:


ಐಪಿಎಲ್‌ಗೂ ಮುನ್ನ ಭಾರತೀಯ ಮಹಿಳೆಯರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ಫೆಬ್ರವರಿ 10 ರಂದು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿದೆ. ಇದರ ಅಂತಿಮ ಪಂದ್ಯ ಫೆಬ್ರವರಿ 26 ರಂದು ನಡೆಯಲಿದೆ. ಅದರ ನಂತರ ಎಲ್ಲಾ ಮಹಿಳಾ ಆಟಗಾರರು ಐಪಿಎಲ್ ಮೊದಲ ಸೀಸನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.


RCB ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್:


ಹೌದು, ಈಗಾಗಲೇ ತಿಳಿಸಿದಂತೆ ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಕನ್ನಡಿಗ ರೋಜರ್ ಬಿನ್ನಿ ಇದೀಗ RCB ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಇಷ್ಟು ದಿನಗಳ ಕಾಲ ಕೇವಲ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿತ್ತು. ಮುಂಬರುವ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲಲಿ ಮಾತ್ರವಲ್ಲದೇ ರಾಜ್ಯದ ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಮೈದಾನಗಳಲ್ಲಿಯೂ ನಡೆಸಲು ಚಿಂತನೆ ಮಾಡಲಾಗುತ್ತಿದೆ. ಈ ನಗರಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬೇಕಾದ ಮೈದಾನಗಳು ಹಾಗೂ ಎಲ್ಲಾ ಮೂಲ ಸೌಕರ್ಯಗಳೂ ಇವೆ. ಹೀಗಾಗಿ ಆರ್​ಸಿಬಿ ಪಂದ್ಯಗಳನ್ನು ಇಲ್ಲಿಯೂ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.


ಮುಂದಿನ ಐಪಿಎಲ್ ತವರು ಮೈದಾನದಲ್ಲಿ:


ಕೊರೋನಾ ಕಾರಣ ಕಳೆದ 2 ಸೀಸನ್​ಗಳು ಬೆಂಗಳೂರಿನಲ್ಲಿ ನಡೆಯಲಿಲ್ಲ. ಇದರಿಂದಾಗಿ ಆರ್​ಸಿಬಿ ಅಭಿಮಾನಿಗಳಿಗೆ ತೀರ್ವ ನಿರಾಸೆ ಉಂಟಾಗಿತ್ತು. ಆದರೆ 2023 ಐಪಿಎಲ್​ ಎಲ್ಲಾ ತಂಡಗಳ ತವರಿನಲ್ಲಿಯೂ ನಡೆಯುವ ಕಾರಣ ಆರ್​ಸಿಬಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿದೆ. ಇದಿಂದಾಗಿ 2ವರ್ಷಗಳ ನಂತರ ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ತಂಡವನ್ನು ಚಿಯರ್ಸ್​ ಮಾಡುವ ಅವಕಾಶ ದೊರಕುತ್ತಿದೆ.

Published by:shrikrishna bhat
First published: