ಐಪಿಎಲ್ 2022ಗೆ (IPL 2022) ತೆರೆ ಬೀಳಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿದೆ. ನಾಳೆ (ಮೇ.29) ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ (Narendra Modi Stadium) ನಡೆಯಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ (GT) ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಫೈನಲ್ ಫೈಟ್ ನಲ್ಲಿ ಸೆಣಸಾಡಲಿವೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಹಾರ್ದಿಕ್ ಪಾಂಡ್ಯ ಈಗಾಗಲೇ ಆಟಗಾರನಾಗಿ 4 ಬಾರಿ ಐಪಿಎಲ್ ಕಪ್ ನ್ನು ಗೆದ್ದಿದ್ದಾರೆ. ಮುಂಬೈ ಇಂಡಿಯನ್ಸ್ ನಲ್ಲಿ ಆಟಗಾರನಾಗಿ ಟ್ರೋಫಿ ಗೆದ್ದಿರುವ ಅವರು, ಇದೇ ಮೊದಲ ಬಾರಿಗೆ ನಾಯಕನಾಗಿ ಕಪ್ ಗೆಲ್ಲುವ ರೇಸ್ ನಲ್ಲಿದ್ದಾರೆ.
ಇನ್ನು, ಈ ಬಾರಿ ಐಪಿಎಲ್ 2022 ವಿಜೇತ ತಂಡಕ್ಕೆ ನೀಡುವ ಬಹುಮಾನದ ಮೊತ್ತದಲ್ಲಿ ಯಾವ ಬದಲಾವಣೆಗಳಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಆದರೆ ರನ್ನರ್ ಅಫ್ ಮತ್ತು ವಯಕ್ತಿಕವಾಗಿ ನೀಡುವ ಬಹುಮಾನದ ಮೊತ್ತದಲ್ಲಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಹಾಗಿದ್ದಲ್ಲಿ ಈ ಭಾರಿಯ ಬಹುಮಾನ ಮೊತ್ತ ಎಷ್ಟಿರಲಿದೆ ಎಂದು ನೊಡೋಣ ಬನ್ನಿ.
ಐಪಿಎಲ್ 2022ರ ಬಹುಮಾನದ ಮೊತ್ತ:
ಇನ್ನು, ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 20 ಕೋಟಿ ಮತ್ತು ರನ್ನರ್ ಅಫ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ 13 ಕೋಟಿ ಬಹುಮಾನ ಮೊತ್ತ ಸಿಕ್ಕಿತ್ತು. ಅದರಂತೆ ಈ ಬಾರಿಯೂ ಚಾಂಫಿಯನ್ ತಂಡಕ್ಕೆ 20 ಕೋಟಿ ಮತ್ತು ರನ್ನರ್ ಅಫ್ ತಂಡಕ್ಕೆ ಕಳೆದ ಬಾರಿಗಿಂತ 50 ಲಕ್ಷ ರೂ ಹೆಚ್ಚಳ ಸಿಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಅದರಂತೆ ತಮಡಗಳಿಗೆ ನೀಡಲಾಗುವ ಹಾಗೂ ಇತರೇ ಬಹುದಾಂಗಳ ಮೊತ್ತ ಈ ಕೆಳಕಂಡಂತಿದೆ.
ಇದನ್ನೂ ಓದಿ: IPL Final 2022: ನಾಳಿನ IPL ಫೈನಲ್ ಪಂದ್ಯವನ್ನು ಹೀಗೆ ಉಚಿತವಾಗಿ ವೀಕ್ಷಿಸಿ
ಚಾಂಪಿಯನ್ ತಂಡ - 20 ಕೋಟಿ ರೂ
ರನ್ನರ್ ಅಫ್ ತಂಡ - 13 ಕೋಟಿ (50 ಲಕ್ಷ ಹೆಚ್ಚಳ)
3ನ ಸ್ಥಾನದಲ್ಲಿರುವ RCB ತಂಡ - 7 ಕೋಟಿ
4ನೇ ಸ್ಥಾನದಲ್ಲಿರುವ LSG - 6.5 ಕೋಟಿ
ಆರಂಜ್ ಕ್ಯಾಪ್ - 15 ಲಕ್ಷ
ಪರ್ಪಲ್ ಕ್ಯಾಪ್ - 15 ಲಕ್ಷ
ಉದಯೋನ್ಮುಕ ಆಟಗಾರ - 20 ಲಕ್ಷ ಬಹುಮಾನವಾಗಿ ಮೊತ್ತ ಸಿಗಲಿದೆ.
ಆರಂಭದಲ್ಲಿ ಐಪಿಎಲ್ ಬಹುಮಾದ ಮೊತ್ತಗಳು ಎಷ್ಟಿದ್ದವು?:
ಇನ್ನು, ಐಪಿಎಲ್ ಆರಂಭವಾದ 2008ರಲ್ಲಿ ಚಾಂಪೀಯನ್ ತಂಡದಿಂದ ಹಿಡಿದು ಎಲ್ಲಾ ಬಹುಮಾನದ ಮೊತ್ತಗಳು ಈಗಿನ ಮೊತ್ತಕ್ಕಿಂತ ಕಡಿಮೆ ಇದ್ದವು. ಅವುಗಳ ಅಂಕಿಅಂಶ ನೋಡುವುದಾದರೆ, ಚಾಂಫಿಯನ್ ತಂಡಕ್ಕೆ 4.8 ಕೋಟಿ ರೂ, ರನ್ನರ್ ಅಫ್ ತಂಡಕ್ಕೆ 2,.4 ಕೋಟಿ, 3ನೇ ಸ್ಥಾನ ಪಡೆದರಿಗೆ 1.2ಕೋಟಿ ಬಹುಮಾನದ ಮೊತ್ತ ದೊರಕಿತ್ತು.
ಇದನ್ನೂ ಓದಿ: ಧೋನಿ, ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ RCB ಆಟಗಾರ, ವಿಶೇಷ ಸಾಧನೆ ಮಾಡಿದ ಪಾಟಿದಾರ್
ಐಪಿಎಲ್ 2022 ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಹೋಲ್ಡರ್:
ಐಪಿಎಲ್ 2022ರ ಅಂತಿಮ ಹಂತದಲ್ಲಿದೆ. ಇದರ ನಡುವೆ ಈ ಬಾರಿಯ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರ ರೇಸ್ ನಲ್ಲಿ ಯಾರು ಯಾರು ಇದ್ದಾರೆ ಎಂಬುದನ್ನು ನೋಡುವುದಾರೆ, ಆರೆಂಜ್ ಕ್ಯಾಪ್ ರೇಸ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 824 ರನ್ ಗಳಿಸಿ ಈ ಆಭರಿಯ ಆರೆಂಜ್ ಕ್ಯಾಪ್ ವಿನ್ನರ್ ಎಂದೆ ಹೇಳಬಹುದಾಗಿದೆ. ಆದರೆ ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಹಸರಂಗ ಮೊದಲ ಸ್ಥಾನದಲ್ಲಿದ್ದರೂ, ಕೇವಲ ಒಂದೇ ಒಂದು ವಿಕೆಟ್ ಪಡೆದಲ್ಲಿ ಚಹಾಲ್ ಪರ್ಪಲ್ ಕ್ಯಾಪ್ ವಿನ್ನರ್ ಆಗಲಿದ್ದಾರೆ. ರಾಜಸ್ಥಾನ್ ಪರ ಈ ಆಭರಿ ಆರೆಂಜ್ ಮತತ್ಉ ಪರ್ಪಲ್ ಕ್ಯಾಪ್ ವಿಜೇತರಾಗುವ ಸಾಧ್ಯತೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ