• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Rajat Patidar: RCB ಆಟಗಾರನ ಬದುಕು ಬದಲಿಸಿತು ಒಂದೇ ಒಂದು ಫೋನ್​ ಕಾಲ್; IPLಗಾಗಿ ಮದುವೆ ಪೋಸ್ಟ್​ಪೋನ್​​

Rajat Patidar: RCB ಆಟಗಾರನ ಬದುಕು ಬದಲಿಸಿತು ಒಂದೇ ಒಂದು ಫೋನ್​ ಕಾಲ್; IPLಗಾಗಿ ಮದುವೆ ಪೋಸ್ಟ್​ಪೋನ್​​

ರಜತ್ ಪಾಟಿದಾರ್

ರಜತ್ ಪಾಟಿದಾರ್

ಆರ್​ಸಿಬಿ ಪರ ಅದ್ಭುತ ಆಟವಾಡಿದ ಪಾಟಿದಾರ್ ಅವರು ಯಾರು? ಅವರ ಹಿನ್ನಲೆ ಏನು? ಐಪಿಎಲ್​ ಗಾಗಿ ಮದುವೆಯನ್ನೇ ಮುಂದೂಡಿದ್ದ ಪಾಟಿದಾರ್ ಅವರ ಹಿಂದಿನ ಸ್ವಾರಸ್ಯಕರವಾದ ಮಾಹಿತಿ ಇಲ್ಲಿದೆ ನೋಡಿ.

  • Share this:

ಐಪಿಎಲ್ 2022ರ (IPL 2022) ಆರ್​ಸಿಬಿ ಮತ್ತು ಲಕ್ನೋ (RCB vs LSG) ನಡುವಿನ ಎಲಿಮಿನೇಟರ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಫಾಫ್ ಡು ಪ್ಲೆಸಿಸ್ ಅವರಂತಹ ಅನುಭವಿಗಳು ವಿಫಲವಾದಾಗ ರಜತ್ ಪಾಟಿದಾರ್ RCB ಗೆ ಗೇಮ್ ಚೇಂಜರ್ ಆಗಿ ಶತಕ ಸಿಡಿಸಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರಧಾರಿಗಳಾದರು ಎಂದರೂ ತಪ್ಪಾಗಲಾರದು. ರಜತ್ ಪಾಟಿದಾರ್ (Rajat Patidar) 49 ಎಸೆತಗಳಲ್ಲಿ ಶತಕ ಪೂರೈಸಿದರು. ಪಾಟಿದಾರ್ 54 ಎಸೆತಗಳಲ್ಲಿ 112 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಪಾಟಿದಾರ್ ಅವರಿಗೆ ದಿನೇಶ್ ಕಾರ್ತಿಕ್ ಕೂಡ ಉತ್ತಮ ಸಾಥ್ ನೀಡಿದರು. ಇಂತಹ ಅದ್ಭುತ ಆಟವಾಡಿದ ಪಾಟಿದಾರ್ ಯಾರು? ಅವರ ಹಿನ್ನಲೆ ಏನು? ಐಪಿಎಲ್​ ಗಾಗಿ ಮದುವೆಯನ್ನೇ ಮುಂದೂಡಿದ್ದ ಪಾಟಿದಾರ್ ಅವರ ಹಿಂದಿನ ಸ್ವಾರಸ್ಯಕರವಾದ ಮಾಹಿತಿ ಇಲ್ಲಿದೆ ನೋಡಿ.


ರಜತ್ ಪಾಟಿದಾರ್ ಯಾರು?:


ಐಪಿಎಲ್ ಹರಾಜಿನಲ್ಲಿ ರಜತ್ ಪಾಟಿದಾರ್ ಮಾರಾಟವಾಗದಿದ್ದರೂ, ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಲವನಿತ್ ಸಿಸೋಡಿಯಾ ಗಾಯಗೊಂಡರು, ನಂತರ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಪಾಟಿದಾರ್ ಅವರಿಗೆ ಕರೆ ಮಾಡಿ ಆರ್​ಸಿಬಿ ತಂಡಕ್ಕೆ ಸೇರಿಕೊಳ್ಳುವಂತೆ ಹೇಳಿದ್ದರು. ಪಾಟಿದಾರ್ ಅವರು ಹರಾಜಿನಲ್ಲಿ ಮಾರಾಟವಾಗದ ಕಾರಣ ಬಾಂಗ್ಲಾದೇಶದ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಅಥವಾ ಯುಕೆಯಲ್ಲಿ ಕ್ಲಬ್ ಕ್ರಿಕೆಟ್ ಆಡಲು ನಿರ್ಧರಿಸಿದ್ದರು. ಆದರೆ ಮೈಕ್ ಹೆಸ್ಸನ್ ಅವರ ಫೋನ್ ಕರೆ ಅವರ ಜೀವನವನ್ನು ಬದಲಾಯಿಸಿತು. ಪಾಟಿದಾರ್ ಅವರನ್ನು ಆರ್‌ಸಿಬಿ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿತ್ತು.


ರಜತ್ ಪಾಟಿದಾರ್ ಮಧ್ಯಪ್ರದೇಶದಿಂದ ಸ್ಥಳೀಯ ಕ್ರಿಕೆಟ್ ಆಡುತ್ತಾರೆ. ಅವರು 31 ಟಿ20 ಪಂದ್ಯಗಳಲ್ಲಿ 7 ಅರ್ಧಶತಕಗಳ ಸಹಾಯದಿಂದ 861 ರನ್ ಗಳಿಸಿದ್ದಾರೆ. ಇದೀಗ ಐಪಿಎಲ್ ಎಲಿಮಿನೇಟರ್‌ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಪಾಟಿದಾರ್ ಆರ್‌ಸಿಬಿಗೆ ಗೇಮ್ ಚೇಂಜರ್ ಪರಿಣಮಿಸಿದರು. ಅವರ ಶತಕದ ನೆರವಿನಿಂದ ಆರ್​ಸಿಬಿ ಕಳೆದ ಪಮದ್ಯವನ್ನು ಗೆದ್ದು ಬೀಗಿತು.


ಇದನ್ನೂ ಓದಿ: IPL 2022 RCB: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ವಿರಾಟ್ ಅಭಿಮಾನಿ, ವಿಡಿಯೋ ವೈರಲ್


ಐಪಿಎಲ್​ ಗಾಗಿ ವಿವಾಹವನ್ನೇ ಮುಂದೂಡಿದ್ದರಂತೆ:


ಹೌದು, ಇಂತಹದೊಂದು ಆಶ್ಛರ್ಯಕರ ಸಂತಿಯೊಂದು ಇದೀಗ ಬೆಳಕಿಗೆ ಬಂದಿದೆ.ಪಾಟಿದಾರ್ ಅವರು ಮೊದಲು ಹರಾಜಿನಲ್ಲಿ ಮಾರಾಟವಾಗದ ಕಾರಣ ಅವರ ಮನೆಯಲ್ಲಿ ಅವರಿಗೆ ಮದುವೆಯನ್ನು ನಿಶ್ಚಯಿಸಿದ್ದರು. ಅಲ್ಲದೇ ಮೇ ತಿಂಗಳಲ್ಲಿ ಯಾವುದೇ ಕ್ರಿಕೆಟ್ ಟೂರ್ನಿಗಳಿರದ ಕಾರಣ ಮೇ ತಿಂಗಳಲ್ಲಿ ವಿವಾಹ ಮಾಡಲು ಮನೆಯವರೆಲ್ಲಾ ನಿರ್ಧರಿಸಿದ್ದರಂತೆ.


ಇನ್ನು, ಈ ಕುರಿತು ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿದ್ದ ರಜತ್ ತಂದೆ, ‘ರಜತ್ ಅವನಿಗೆ ನಾವೆಲ್ಲರೂ ಸೇರಿ ಮದುವೆಯನ್ನು ನಿಸ್ಛಯಿಸಿದ್ದೇವು. ಅಲ್ಲದೇ ಇದೇ ಮೇ 9ರಂದು ರಜತ್ ವೈವಾಹಿಕ ಜೀವನಕಲ್ಕೆ ಕಾಲಿಡಬೇಕಿತ್ತು. ಅಲ್ಲದೇ ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ನಾವು ಮಾಡಿಕೊಂಡಿದ್ದೆವು‘ ಎಂದು ತಿಳಿಸಿದ್ದಾರೆ. ಆದರೆ ನಂತರ ಒಂದೇ ಒಂದು ಪೋನ್ ಕಾಲ್ ನಿಂದ ಪಾಟಿದಾರ್ ತಮ್ಮ ವಿವಾಹವನ್ನೇ ಮುಂದೂಡಿದರು. ಅಲ್ಲದೇ ಐಪಿಎಲ್​ ನಲ್ಲಿ ಆಡಲು ನಿರ್ಧರಿಸಿದರು. ಒಟ್ಟಿನಲ್ಲಿ ರಜತ್ ಪಾಟಿದಾರ್ ಅವರ ಜೀವನ ಯಾವುದೇ ಸಿನಿಮಾದ ಕಥೆಗೂ ಕಡಿಮೆ ಇಲ್ಲ ಎಂದು ಹೇಳಬುದು.


ಇದನ್ನೂ ಓದಿ: IPL 2022: ಈ ಸಲ ಕಪ್ ನಮ್ದೇ ಅಂತಿದ್ದಾರೆ RCB ​ಫ್ಯಾನ್ಸ್! ಕಾರಣ ಏನು ಗೊತ್ತಾ?


ಅನೇಕ ದಾಖಲೆಗಳನ್ನು ಬರೆದ ಪಾಟಿದಾರ್:


ರಜತ್ ಪಾಟಿದಾರ್ ಸಿಡಿಸಿದ ಒಂದೇ ಒಂದು ಶತಕದಿಂದ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಪಾಟಿದಾರ್ ಇದೀಗ ಪಾಲ್ ವಲ್ತಾಟಿ, ಮನೀಶ್ ಪಾಂಡೆ ಮತ್ತು ದೇವದತ್ ಪಡಿಕ್ಕಲ್ ನಂತರ ಐಪಿಎಲ್‌ನಲ್ಲಿ ಶತಕ ಗಳಿಸಿದ ನಾಲ್ಕನೇ ಅನ್‌ಕ್ಯಾಪ್ಡ್ ಆಟಗಾರರಾದರು. ಇದು ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಆಟಗಾರನ ಮೂರನೇ ಗರಿಷ್ಠ ಸ್ಕೋರ್ ಆಗಿದೆ. ಪಾಟಿದಾರ್ ಐಪಿಎಲ್ ಪ್ಲೇ-ಆಫ್‌ನಲ್ಲಿ ಶತಕ ಸಿಡಿಸಿದ ಆರನೇ ಆಟಗಾರ. ಇದಕ್ಕೂ ಮುನ್ನ ಸೆಹ್ವಾಗ್, ವ್ಯಾಟ್ಸನ್, ರಿದ್ಧಿಮಾನ್ ಸಹಾ ಮತ್ತು ಮುರಳಿ ವಿಜಯ್ ಕೂಡ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ್ದರು.

Published by:shrikrishna bhat
First published: