IPL 2022: ಐಪಿಎಲ್​ನಲ್ಲಿ ಬೌಲರ್​ಗಳನ್ನು ದಂಡಿಸಿದ ದಾಂಡಿಗರಿವರು, ಒಂದೇ ಓವರ್​ನಲ್ಲಿ ಹೆಚ್ಚು ಬೌಂಡರಿ ಸಿಡಿಸಿದವರು ಯಾರು ಗೊತ್ತಾ?

ಕೇವಲ ಒಂದು ಓವರ್​ ನಲ್ಲಿ ಅತಿ ಹೆಚ್ಚು ಬೌಂಡರಿ ಹೊಡೆದ ಆಟಗಾರರು ಯಾರೆಂದು ನೋಡೋಣ ಬನ್ನಿ.

 ಕ್ರಿಸ್ ಗೇಲ್

ಕ್ರಿಸ್ ಗೇಲ್

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿ ಈಗಾಗಲೇ ಆರಂಭಗೊಂಡಿದ್ದು 30 ಪಂದ್ಯಗಳು ಅಂತ್ಯಗೊಂಡಿದೆ. ಪ್ರತಿಬಾರಿಯಂತೆ ಈ ಬಾರಿಯೂ ಚುಟುಕು ಕ್ರಿಕೆಟ್​ ನಲ್ಲಿ ಬ್ಯಾಟ್ಸ್​ಮನ್​ ಗಳ ಅಬ್ಬರ ಜೋರಾಗಿಯೇ ಇದೆ. ಈಗಾಗಲೇ 2022ರ ಐಪಿಎಲ್ ನಲ್ಲಿ 2 ಶತಕವು ಇಬ್ಬರು ಆಟಗಾರರಿಂದ ಹೊರಬಂದಿದೆ. ಇದರ ನಡುವೆ ಆರ್​ಸಿಬಿ (RCB) ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ (Dinesh Kartik) ಒಂದೇ ಓವರ್​ ನಲ್ಲಿ 28 ರನ್ ಗಳಿಸುವ ಮೂಲಕ ಈ ಬಾರಿ ಐಪಿಎಲ್​ ನಲ್ಲಿ ಒಂದು ಓವರ್​ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಹಾಗಿದ್ದರೆ ಕೇವಲ ಒಂದು ಓವರ್​ ನಲ್ಲಿ ಅತಿ ಹೆಚ್ಚು ಬೌಂಡರಿ ಹೊಡೆದ ಆಟಗಾರರು ಯಾರೆಂದು ನೋಡೋಣ ಬನ್ನಿ.

ಒಂದು ಓವರ್​ ನಲ್ಲಿ ಹೆಚ್ಚು ಬೌಂಡರಿಗೆ ಬೌಲನ್ನು ಅಟ್ಟಿದವರು:

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಅಂದರೆ ಒಂದೇ ಓವರ್​ ನಲ್ಲಿ ಬೌಲನ್ನು ಬೌಂಡರಿ ಗೆರೆಗೆ ಅಟ್ಟಿದವರ ಪಟ್ಟಿಯಲ್ಲಿ ಬರೋಬ್ಬರಿ 11 ಜನ ಆಟಗಾರಿದ್ದಾರೆ. ಇದರಲ್ಲಿ ಪ್ರಮುಖವಾಗಿ 6 ಬೌಲ್​ ಗಳಲ್ಲಿ 6 ಬೌಲ್​ ಗಳನ್ನು ಸಹ ಬೌಂಡರಿ ಲಯನ್ ದಾಟಿಸಿದ ದಾಖಲೆಯನ್ನು ಇವರುಗಳು ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮತ್ತು ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಇಬ್ಬರೂ ಮೊದಲ ಸ್ಥಾನದಲ್ಲಿ ಗುರುತಿಸಕೊಳ್ಳುತ್ತಾರೆ. ಹಾಗಿದ್ದರೆ ಯಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಂದು ನೋಡುವುದಾದರೆ.

ಈ ಪಟ್ಟಿಯಲ್ಲಿಯೂ ಮೊದಲ ಸ್ಥಾನದಲ್ಲಿರುವ ಯೂನಿವರ್ಸಲ್ ಬಾಸ್:

ಒಂದೇ ಓವರ್​ ನಲ್ಲಿ ಹೆಚ್ಚು ಬಾರಿ ಬೌಲನ್ನು ಬೌಂಡರಿ ಗೆರೆಗೆ ದಾಟಿಸಿದವರ ಪಟ್ಟಿಯಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಇವರು 2011ರಲ್ಲಿ ಕೊಚ್ಚಿ ಟಕ್ಕರ್ಸ್ ಕೇರಳ ವಿರುದ್ಧ ಪಿ.ಪರಮೇಶ್ವರನ್ ಬೌಲಿಂಗ್​ ನಲ್ಲಿ ಒಮದೇ ಓವರ್​ ನಲ್ಲಿ 4 ಫೋರ್ ಮತ್ತು 3 ಬೌಂಡರಿ ಹೊಡೆಯುವ ಮೂಲಕ 7 ಬಾರಿ ಬೌಲನ್ನು ಪೋರ್ ಗೆರೆಯ ಅತ್ತ ಕಳುಹಿಸದ್ದಾರೆ.

ಇದನ್ನೂ ಓದಿ: IPL 2022: RCB - DC ಪಂದ್ಯದ ಬಳಿಕ ಹೇಗಿದೆ ಐಪಿಎಲ್ ಅಂಕಪಟ್ಟಿ, ಯಾರ ಬಳಿಯಿದೆ ಆರೆಂಜ್, ಪರ್ಪಲ್ ಕ್ಯಾಪ್?

ಇನ್ನು, ಇವರಿಗೆ ಸರಿಯಾಗಿ ಸ್ಥಾನವನ್ನು ಹಂಚಿಕೊಂಡಿರುವ ಚೆನ್ನೈ ತಂಡದ ಮಅಜಿ ಆಟಗಾರ ಸುರೇಶ್ ರಯನಾ ಸಹ 2014ರಲ್ಲಿ ಪರ್ವಿಂದ್ರ ಬೌಳಿಂಗ್​ ನಲ್ಲಿ 5 ಪೋರ್​ ಮತ್ತು 2 ಸಿಕ್ಸ್ ಸಿಡಿಸುವ ಮೂಲಕ 7 ಬಾರಿ ಬೌಲನ್ನು ಬೌಂಡರಿ ಗೇರೆಗೆ ಅಟ್ಟಿದ್ದಾರೆ.

ಉಳಿದಂತೆ 2018 ಮತ್ತು 2019ರಲ್ಲಿ ಜೋಸ್ ಬಟ್ಲರ್ 4 ಪೋರ್ & 2 ಪೋರ್ ಸಮೇತ 6 ಬೌಂಡರಿ, ಪ್ಯಾಟ್ ಕಮಿಂನ್ಸ್ 2022ರಲ್ಲಿ 2 ಫೊರ್ 4 ಸಿಕ್ಸ್ ಗಳಿಂದ 6 ಬೌಂಡರಿ, ರವೀಂದ್ರ ಜಡೇಜಾ 2021ರಲ್ಲಿ 5 ಸಿಕ್ಸ್ 1 ಪೋರ್​ ನೆರವಿನಿಂದ 6 ಬೌಂಡರಿ, ದಿನೇಶ್ ಕಾರ್ತಿಕ್ 2022ರಲ್ಲಿ 4 ಪೋರ್ 2 ಸಿಕ್ಸ್ ಸಮೇತ 6 ಪೋರ್ ಗಡಿ ದಾಟಿಸಿದ್ದಾರೆ.

ಇದನ್ನೂ ಓದಿ: Dinesh karthik: 4, 4, 4, 6, 6, 4 ಅಂತಿಮ ಹಂತದಲ್ಲಿ ಅಬ್ಬರಿಸಿದ ಕಾರ್ತಿಕ್, ಮತ್ತೆ ಗೇಮ್ ಚೇಂಜರ್ ಆದ RCB ಫಿನಿಶರ್

ಮಾರ್ಶ್ 2012ರಲ್ಲಿ 3 ಫೊರ್ 3 ಸಿಕ್ಸ್ ನಿಂದ 6 ಬೌಂಡರಿ, ಅಜಿಂಕ್ಯಾ ರಹಾನೆ 6 ಫೊರ್​, 2008ರಲ್ಲಿ ವಿರೇಂದ್ರ ಸೆಹ್ವಾಗ್ 3 ಪೋರ್ 3 ಸಿಕ್ಸ್, ಪ್ರಥ್ವಿ ಶಾ 2021ರಲ್ಲಿ 6 ಪೋರ್, ಶೇನ್ ವಾಟ್ಸನ್ 5 ಪೋರ್ ಮತ್ತು 1 ಸಿಕ್ಸ್ ಮುಖಾಂತರ 6 ಬಾರಿ ಬೌಲನ್ನು ಬೌಂಡರಿ ಗೇರೆಗೆ ಕಳುಹಿಸಿದ್ದಾರೆ. (ಈ ಮೇಲೆ ತಿಳಿಸಿರುವುದು ಒಂದು ಓವರ್​ ನ 6 ಬೌಲ್​ ಗಳಲ್ಲಿ ಹೆಚ್ಚು ಬಾರಿ ಯಾರು ಬೌಲನ್ನು ಬೌಂಡರಿ ಗೇರೆ ಅತ್ತ ದಾಟಿಸಿದ್ದಾರೆ ಎಂದು ಇದರಲ್ಲಿ ಪೋರ್ ಮತ್ತು ಸಿಕ್ಸ್ ಒಳಗೊಂಡಿರುತ್ತದೆ).
Published by:shrikrishna bhat
First published: