Karun Nair: ಈ ಆಟಗಾರ ರನ್ ಗಳಿಸಿದಾಗಲೆಲ್ಲಾ, ಬೇರೆ ಯಾರಾದರೂ ಅವರಿಗಿಂತ ಹೆಚ್ಚು ರನ್ ಗಳಿಸಿರುತ್ತಾರಂತೆ! ಯಾರದು ಗೊತ್ತೇ?

ಕರುಣ್ ನಾಯರ್ (Karun Nair) ಅವರು ಟೆಸ್ಟ್ (Test) ತಂಡದಲ್ಲಿ ಅವರ ಸ್ಥಾನವನ್ನು ನಿರೀಕ್ಷೆಯ ಮಟ್ಟದಲ್ಲಿ ಭದ್ರ ಪಡಿಸುಕೊಳ್ಳುವಲ್ಲಿ ವಿಫಲರಾಗಿದ್ದು, ಟಿ20 ಪಂದ್ಯಗಳಲ್ಲಿಯೂ ಅವರು ಒಬ್ಬ ನಿಯಮಿತ ಆಟಗಾರನಾಗಲು ಇನ್ನೂ ಹೆಣಗಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕರುಣ್ ನಾಯರ್

ಕರುಣ್ ನಾಯರ್

  • Share this:
ಇಂಗ್ಲೆಂಡ್ ವಿರುದ್ಧ 2016 ರಲ್ಲಿ ಐತಿಹಾಸಿಕ 303 ರನ್ ಗಳಿಸಿದ ನಂತರವೂ ಸಹ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಗಳಲ್ಲಿ ಒಬ್ಬರಾದ ಕರುಣ್ ನಾಯರ್ (Karun Nair) ಅವರು ಟೆಸ್ಟ್ (Test) ತಂಡದಲ್ಲಿ ಅವರ ಸ್ಥಾನವನ್ನು ನಿರೀಕ್ಷೆಯ ಮಟ್ಟದಲ್ಲಿ ಭದ್ರ ಪಡಿಸುಕೊಳ್ಳುವಲ್ಲಿ ವಿಫಲರಾಗಿದ್ದು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕರುಣ್ ಅವರು ಬರೀ ಟೆಸ್ಟ್ ಕ್ರಿಕೆಟ್ ನಲ್ಲಿ ಅಲ್ಲದೆ ಟಿ20 ಪಂದ್ಯಗಳಲ್ಲಿಯೂ ಅವರು ಒಬ್ಬ ನಿಯಮಿತ ಆಟಗಾರನಾಗಲು ಇನ್ನೂ ಹೆಣಗಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾಯರ್ ಅವರು 2014 ರಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (IPL) ನಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪರ 142.24 ಸ್ಟ್ರೈಕ್ ರೇಟ್ ನಲ್ಲಿ 330 ರನ್ ಗಳನ್ನು ಬಾರಿಸುವ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಉತ್ತಮ ಆರಂಭವನ್ನು ಪಡೆದಿದ್ದರು. ಆದಾಗ್ಯೂ, ಅಂದಿನಿಂದ ಇನ್ನೂ ಕೆಲವು ತಂಡಗಳಿಗಾಗಿ ಆಡಿದ ನಂತರವೂ ಸಹ ಅವರು ಟಿ20 ಕ್ರಿಕೆಟ್ ನಲ್ಲಿ ತಮ್ಮನ್ನು ತಾವು ಗಟ್ಟಿಗೊಳಿಸಿಕೊಳ್ಳಲು ಈವರೆಗೂ ಹೆಣಗಾಡುತ್ತಿದ್ದಾರೆ ಎಂದು ಹೇಳಬಹುದು.

ನಾಯರ್ ಅವರು ಇತ್ತೀಚಿನ ವರ್ಷಗಳಲ್ಲಿ ತಂಡದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡ ನಂತರ ಐಪಿಎಲ್ 2022 ರ ಆವೃತ್ತಿಗಾಗಿ ರಾಜಸ್ಥಾನ್ ರಾಯಲ್ಸ್ ನೊಂದಿಗೆ ಮತ್ತೆ ಒಂದಾಗಿದ್ದಾರೆ. ಅವರು ತಂಡವನ್ನು ಸೇರಿಕೊಳ್ಳಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.

ಜನರು ನನ್ನನ್ನು ಟಿ20 ಸ್ಪೆಷಲಿಸ್ಟ್ ಆಗಿ ನೋಡುವುದಿಲ್ಲ:

ಜನರು ನನ್ನನ್ನು ಎಂದಿಗೂ ಟಿ20 ಸ್ಪೆಷಲಿಸ್ಟ್ ಆಟಗಾರನಾಗಿ ನೋಡುತ್ತಿಲ್ಲ, ಇದರ ಹಿಂದಿನ ಕಾರಣವೆಂದರೆ ನಾನು ಎಂದಿಗೂ ಟಿ20 ಕ್ರಿಕೆಟ್ ನಲ್ಲಿ ಒಂದು ತಂಡದಲ್ಲಿ ಪ್ರಮುಖ ಆಟಗಾರನಾಗಿರಲಿಲ್ಲ. ನೀವು ನೋಡಿದರೆ, ನಾನು ರನ್ ಗಳಿಸಿದಾಗಲೆಲ್ಲಾ, ಅದೇ ಪಂದ್ಯದಲ್ಲಿ ಉತ್ತಮ ಸ್ಕೋರ್ ಮಾಡುವ ಬೇರೆ ಯಾರಾದರೂ ಇರುತ್ತಿದ್ದರು ಎಂದು ನಗುತ್ತಾ ನಾಯರ್ ಹೇಳಿದರು.

ಇದನ್ನೂ ಓದಿ: Ranji Trophy 2019-20: ಮೊದಲ ದಿನ 17 ವಿಕೆಟ್ ಪತನ; ಕರ್ನಾಟಕ ಅಲ್ಪ ಮುನ್ನಡೆ

ಜನರು ನನ್ನನ್ನು ಟಿ20 ಸ್ಪೆಷಲಿಸ್ಟ್ ಆಗಿ ಏಕೆ ನೋಡುವುದಿಲ್ಲವೆಂದರೆ, ಹಲವಾರು ವರ್ಷಗಳಿಂದ ವಿಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸಲು ನನ್ನನ್ನು ಕೇಳಲಾಗಿದೆ ಮತ್ತು ಕೆಲವೊಮ್ಮೆ ಅದು ಚೆನ್ನಾಗಿ ಕೆಲಸ ಮಾಡಿದೆ, ಕೆಲವೊಮ್ಮೆ ಅದು ಚೆನ್ನಾಗಿ ಕೆಲಸ ಮಾಡಿಲ್ಲ. ಆದರೆ ರಾಯಲ್ಸ್ ತಂಡದೊಂದಿಗೆ ಉತ್ತಮ ಐಪಿಎಲ್ ಆವೃತ್ತಿಯನ್ನು ಮತ್ತೊಮ್ಮೆ ಶುರು ಮಾಡಲು ನಾನು ಆಶಿಸುತ್ತಿದ್ದೇನೆ ಮತ್ತು ನನಗೆ ಏನು ಮಾಡಲು ಹೇಳಲಾಗುತ್ತದೆಯೋ ಅದರ ಮೇಲೆ ಗಮನ ಹರಿಸುತ್ತೇನೆ ಎಂದು ಅವರು ಹೇಳಿದರು.

ಸ್ವಂತ ಮನೆಯಂತೆ ಭಾಸವಾಗುತ್ತದೆ:

ನಾನು ಈ ತಂಡದಲ್ಲಿ ಮೊದಲು ಇದ್ದಾಗಿನಿಂದಲೂ ಹಿಡಿದು ಇದುವರೆಗೂ ಸಾಕಷ್ಟು ವಿಷಯಗಳು ಬದಲಾಗಿವೆ, ಆದರೆ ಈ ತಂಡವು ಯಾವಾಗಲೂ ನನಗೆ ಸ್ವಂತ ಮನೆಯಂತೆ ಭಾಸವಾಗುತ್ತದೆ. ನಾವು ಉತ್ತಮ ಸಮತೋಲಿತ ತಂಡವನ್ನು ಹೊಂದಿದ್ದೇವೆ ಮತ್ತು ಎಲ್ಲಾ ಆಟಗಾರರ ಬಗ್ಗೆ ತಿಳಿದು ಕೊಳ್ಳುವುದನ್ನು ನಾನು ಆನಂದಿಸುತ್ತಿದ್ದೇನೆ. ಅಲ್ಲದೆ ಇದು ಈ ಫ್ರಾಂಚೈಸಿಯ ಇತಿಹಾಸದಲ್ಲಿಯೇ ಒಂದು ರೋಮಾಂಚಕಾರಿ ಹಂತವಾಗಿದೆ ಮತ್ತು ನಾನು ರೋಮಾಂಚಕಾರಿ ಬ್ರ್ಯಾಂಡ್ ಕ್ರಿಕೆಟ್ ಆಡಲು ಎದುರು ನೋಡುತ್ತಿದ್ದೇನೆ. ರಾಯಲ್ಸ್ ಯಾವಾಗಲೂ ಅದನ್ನು ಮಾಡಲು ಪ್ರಯತ್ನಿಸುತ್ತದೆ ಎಂದು ನನಗೆ ತಿಳಿದಿದೆ ಎಂದು ಕರಣ್ ನಾಯರ್ ಹೇಳಿದರು.

ಇದನ್ನೂ ಓದಿ: Karun Nair: IPL ಮೂಲಕ ಟೀಮ್ ಇಂಡಿಯಾಗೆ ಮರಳುವೆ: ಕರುಣ್ ನಾಯರ್

ಸಂಜು ಸ್ಯಾಮ್ಸನ್ ಅವರೊಂದಿಗೆ ಆಡಲು ಎದುರು ನೋಡುತ್ತಿದ್ದೇನೆ:

ಈ ಹಿಂದೆ ಆಡಿದ ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರೊಂದಿಗೆ ಆಡಲು ಎದುರು ನೋಡುತ್ತಿದ್ದೇನೆ. ಏಕೆಂದರೆ ನಾನು ಯಾವಾಗಲೂ ಸಂಜು ಅವರೊಂದಿಗೆ ಆಡುವುದನ್ನು ಇಷ್ಟಪಡುತ್ತೇನೆ, ಆದ್ದರಿಂದ ಮೈದಾನದಲ್ಲಿ ಅವರೊಂದಿಗೆ ಮರು ಸಂಪರ್ಕಿಸಲು ನಾನು ಕಾಯಲು ಸಾಧ್ಯವಿಲ್ಲ. ನಾವು ಕೆಲವು ವರ್ಷಗಳಿಂದ ಕೆಲವು ಉತ್ತಮ ಜೊತೆಯಾಟವನ್ನು ಆಡಿದ್ದೇವೆ ಮತ್ತು ಸಂಜು, ಕುಮಾರ್ ಸಂಗಕ್ಕಾರ ಮತ್ತು ಜುಬಿನ್ ಅವರೊಂದಿಗೆ ನನ್ನನ್ನು ತಂಡಕ್ಕೆ ಮರಳಿ ಕರೆತರಲು ನನ್ನಲ್ಲಿ ನಂಬಿಕೆಯನ್ನು ತೋರಿಸಿದ್ದಾರೆ ಎಂದು ತಿಳಿದು ನನಗೆ ನಿಜವಾಗಿಯೂ ಸಂತೋಷವಾಗಿದೆ ಎಂದು ಅವರು ಹೇಳಿದರು.
Published by:shrikrishna bhat
First published: