ಬೆಂಗಳೂರಿ(Bengaluru)ಗರಿಗೆ ಇರುವ ನಿಯತ್ತು ಯಾರಿಗೂ ಇಲ್ಲ ಎಂದು ಹೇಳಬಹುದು. ಕಳೆದ 14 ವರ್ಷದಿಂದ ಆರ್ಸಿಬಿ(RCB) ತಂಡ ಕಪ್(Cup) ಗೆಲ್ಲದಿದ್ದರು, ನಾವು ಅವರ ಕೈ ಮಾತ್ರ ಬಿಟ್ಟಿಲ್ಲ. ಇಂದಲ್ಲ, ನಾಳೆ ಅಥವಾ ಮುಂದೊಂದು ದಿನ ಅವರು ಗೆದ್ದೆ ಗೆಲ್ಲುತ್ತಾರೆ ಅನ್ನುವ ವಿಶ್ವಾಸದಲ್ಲಿ ಇದ್ದೇವೆ. ಆರ್ಸಿಬಿ ಅನ್ನುವುದು ಕೇವಲ ತಂಡವಲ್ಲ. ಬೆಂಗಳೂರಿಗರ ಎಮೋಷನ್(Emotion) ಅದು. ಈ ಬಾರಿ ಹೊಸ ಹುರುಪು, ಹೊಸ ನಾಯಕ(New Captain)ನೊಂದಿಗೆ ಆರ್ಸಿಬಿ ಕಣಕ್ಕಿಳಿಯಲಿದೆ. ಕಪ್ ಒಂದನ್ನು ಬಿಟ್ಟು ಆರ್ಸಿಬಿ ಬೆಂಗಳೂರಿಗರ ಕಿಡ್ನಿ(Kidney), ಹೃದಯ(Heart), ಮನಸ್ಸು ಗೆದ್ದಿದೆ. ಈ ಸಲನಾದರೂ ಆರ್ಸಿಬಿ ಕಪ್ ಗೆಲ್ಲಲ್ಲಿ ಎಂದು ಈಗಿನಿಂದಲೇ ದೇವರ ಮೊರೆ ಹೋಗಿದ್ದಾರೆ ಅಭಿಮಾನಿಗಳು(Fan). ಇತ್ತೀಚೆಗಷ್ಟೇ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕ ಎಂದು ಘೋಷಿಸಿದೆ ಆರ್ಸಿಬಿ. ಫಾಫ್ ನಾಯಕತ್ವದಲ್ಲಿ ಹೊಸ ಸ್ವರೂಪದಲ್ಲಿ ಆರ್ಸಿಬಿ ಮತ್ತೆ ಕಣಕ್ಕಿಳಿಯಲು ಸಂಪೂರ್ಣವಾಗಿ ಸಜ್ಜಾಗಿದೆ.
ಕೊಹ್ಲಿ ಬಗ್ಗೆ ಹಿಂಗ್ಯಾಕ್ ಅಂದ್ರು ಆರ್.ಅಶ್ವಿನ್!
ಕಿಂಗ್ ಕೊಹ್ಲಿ ನಾಯಕತ್ವವನ್ನು ಹೊರತುಪಡಿಸಿ ಬೇರೊಬ್ಬ ನಾಯಕನ ಮುಂದಾಳತ್ವದಲ್ಲಿ ಆರ್ಸಿಬಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಅನುಭವಿ ಆಟಗಾರ, ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಆರ್ ಅಶ್ವಿನ್ ಮಾತು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಖುಷಿ ನೀಡುವಂತಿದೆ. ಅಶ್ವಿನ್ ಮಾತು ನಿಜವಾಗುತ್ತಾ? ಅಂತ ಚರ್ಚೆ ನಡೆಸುತ್ತಿದ್ದಾರೆ. ಅದೇನು ಅಂತೀರಾ? ಮಂದೆ ನೀವೇ ನೋಡಿ..
ನಾಯಕತ್ವಕ್ಕೆ ವಿರಾಮ ತೆಗೆದುಕೊಂಡಿದ್ದಾರಂತೆ ವಿರಾಟ್!
ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿಯಲು ಅವರ ಮೇಲಿರುವ ಒತ್ತಡದ ಕಾರಣವಿರಬಹುದು ಎಂದು ಆರ್ ಅಶ್ವಿನ್ ಹೇಳಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಸ್ಟಾಪ್-ಗ್ಯಾಪ್ ಡಿಸಿಸನ್ ತೆಗೆದುಕೊಂಡಿರಬಹುದು. ಒತ್ತಡದಿಂದ ಹೊರಗೆ ಬರುವ ಸಲುವಾಗಿ ವಿರಾಟ್ ಕೊಹ್ಲಿ ನಾಯಕತ್ವದಿಂದ ವಿರಾಮವನ್ನು ತೆಗೆದುಕೊಂಡಿರಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: RCB ಗೆಲ್ಲಬೇಕು ಅಂದ್ರೆ ಕೊಹ್ಲಿನೇ ಬರಬೇಕಿಲ್ಲ.. ಈ ಸಲ ಇವ್ರಿಬ್ಬರು ರೊಚ್ಚಿಗೆದ್ರು ಅಂದ್ರೆ ಕಪ್ ನಮ್ದೆ ಬಾಸ್!
ಮತ್ತೆ ಕೊಹ್ಲಿ ಕ್ಯಾಪ್ಟನ್ ಆಗಬಹುದು ಎಂದ ಅಶ್ವಿನ್!
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಆರ್ ಅಶ್ವಿನ್ ಆರ್ಸಿಬಿ ತಂಡದ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಪ್ರಕಾರ ವಿರಾಟ್ ಕೊಹ್ಲಿ ಒತ್ತಡದ ಕಾರಣದಿಂದಾಗಿ ನಾಯಕತ್ವವನ್ನು ತೊರೆದಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿ ಮುಂದಿನ ಆವೃತ್ತಿಯಲ್ಲಿ ಆರ್ಸಿಬಿ ತಂಡವನ್ನು ಮತ್ತೊಮ್ಮೆ ಮುನ್ನಡೆಸಲೂಬಹುದು’ ಎಂದು ಆರ್ ಅಶ್ವಿನ್ ಭವಷ್ಯ ನುಡಿದಿದ್ದಾರೆ. ಈ ವಿಚಾರ ಆರ್ಸಿಬಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇವರು ಹೇಳಿದ ಹಾಗೇ ನಿಜವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಹೀಗೆ ಹೇಳೋದಕ್ಕೂ ಒಂದು ಕಾರಣವಿದೆ!
ಅಶ್ವಿನ್ಆರ್ ಅಶ್ವಿನ್ ವಿರಾಟ್ ಕೊಹ್ಲಿ ಬಗ್ಗೆ ಈ ಭವಿಷ್ಯ ನುಡಿಯಲು ಕಾರಣವೂ ಇದೆ. ‘ಆರ್ಸಿಬಿ ತಂಡದ ನಾಯಕನಾಗಿರುವ ಫಾಫ್ ಡು ಪ್ಲೆಸಿಸ್ ತಮ್ಮ ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿದ್ದಾರೆ. ಆಟಗಾರನಾಗಿ ಅವರು ಇನ್ನು ಎರಡುರಿಂದ ಮೂರು ವರ್ಷಗಳ ಕಾಲ ಮುಂದುವರಿಯಬಹುದು. ಇದಾದ ಬಳಿಕ ಅವರು ಕೂಡ ವಿಶ್ರಾಂತಿ ಪಡೆಯುತ್ತಾರೆ. ಆಗ ಮತ್ತೆ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗೇ ಆಗ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹರಾಜಿನ ಬೆಲೆಯು ನನ್ನ ಆಟವನ್ನು ವಿಚಲಿತಗೊಳಿಸುವುದಿಲ್ಲ, RCB ಬೌಲರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ!
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಫಾಫ್ ಡು ಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಜಲ್ವುಡ್, ಶಹಬಾಜ್ ಅಹಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಬೆಹ್ರೆನ್ಡಾರ್ಫ್, ಸುಯಶ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಶರ್ಮಾ, ಕರ್ನ್, ಅನೆ ಸಿದ್ಧಾರ್ಥ್ ಕೌಲ್, ಲುವ್ನಿತ್ ಸಿಸೋಡಿಯಾ, ಡೇವಿಡ್ ವಿಲ್ಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ