IPL 2022 Virat Kohli: ಒನ್ ಹ್ಯಾಂಡ್ ಫ್ಲೈಯಿಂಗ್ ಕ್ಯಾಚ್ ಹಿಡಿದ ಕೊಹ್ಲಿ, ಪತ್ನಿ ಕಡೆ ಚಿಯರ್ಸ್ ಮಾಡಿದ ವಿಡಿಯೋ ವೈರಲ್..!

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಅನ್ನು ಹೊಹ್ಲಿ ಹಿಡಿದರು. ಈ ಮೂಲಕ ಪಂದ್ಯದ ಗತಿಯನ್ನು ಬದಲಿಸಿದರು. ಅಲ್ಲದೇ ಪತ್ನಿ ಅನುಷ್ಕಾ ಶರ್ಮಾ ಎದುರು ಚಿಯರ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ

ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ

  • Share this:
ಐಪಿಎಲ್ 2022ರ (IPL 2022) 15ನೇ ಸೀಸನ್​ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ರಾತ್ರಿ ನಡೆದ ಡೆಲ್ಲಿ (DC) ವಿರುದ್ಧದ ಪಂದ್ಯದಲ್ಲಿ ಭರ್ಜರಿಯಾಗಿ ಪ್ರದರ್ಶನ ಮಾಡುವ ಮೂಲಕ ಪಂದ್ಯವನ್ನು ಗೆದ್ದು ಬೀಗಿತು ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ಬ್ಯಾಟ್‌ ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ನಲ್ಲಿ ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಐಪಿಎಲ್ 2022 ರಲ್ಲಿ ಎರಡು ಬಾರಿ 40 ರನ್ ಗಡಿ ದಾಟಿದರೂ ಅವರು ಇನ್ನೂ ಅರ್ಧಶತಕ ಗಳಿಸಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಹ ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಿ ರನ್​ ಔಟ್ ಆದರು. ಆದರೆ, ಕೊಹ್ಲಿ ಅವರು ಅದ್ಭುತ ಕ್ಯಾಚ್ ಅನ್ನು ಹಿಡಿದರು. ಈ ಮೂಲಕ ಪಂದ್ಯದ ಗತಿಯನ್ನು ಬದಲಿಸಿದರು. ಅಲ್ಲದೇ ಪತ್ನಿ ಅನುಷ್ಕಾ ಶರ್ಮಾ ಎದುರು ಚಿಯರ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅದ್ಭುತ ಕ್ಯಾಚ್ ಹಿಡಿದ ಕೊಹ್ಲಿ:

ಸಿರಾಜ್ ಅವರ 17ನೇ ಓವರ್​ ನಲ್ಲಿ ರಿಷಭ್ ಪಂತ್​ ಗೆ ಫುಲ್ ಟಾಸ್ ಬೌಲ್ ಮಾಡಿದರು. ಈ ಬೌಲ್​ ಅನ್ನು ಎದುರಿಸಿದ ಪಂತ್ ಕವರ್ ಕಡೆಗೆ ಸ್ಲೈಸ್ ಮಾಡಿದರು. ಈ ವೇಳೆ ಕವರ್ ಕಡೆ ಇದ್ದ ನಿಂತಿದ್ದ ವಿರಾಟ್ ಕೊಹ್ಲಿ ಅದ್ಭುತವಾಗಿ ಹಿಡಿಯುವ ಮೂಲಕ ಎಲ್ಲರ ಮೆಚ್ಚಗೆಗೆ ಕಾರಣರಾದರು. ಅವರು ಗಾಳಿಯಲ್ಲಿ ಬಂದ ಚೆಂಡನ್ನು ಹಾರಿ ಒನ್​ ಹ್ಯಾಡ್​ ನಲ್ಲಿ ಹಿಡಿಯುವ ಮೂಲಕ ರಿಷಭ್ ಪಂತ್ ಅವರನ್ನು ಫೆವೆಲಿಯನ್​ ಗೆ ಅಟ್ಟಿದರು.





ಈ ಮೂಲಕ ಡೆಲ್ಲಿ ಪರ ವಾಲಿದ್ದ ಪಂದ್ಯವನ್ನು ಒಂದು ಕ್ಷಣಕ್ಕೆ ಆರ್​ಸಿಬಿ ಕಡೆ ತಿರುಗಿಸಿದರು. ಈ ಮೂಲಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಅಂತಿಮವಾಗಿ 16 ರನ್​ ಗಳ ರೋಚಕ ಗೆಲುವನ್ನು ದಾಖಲಿಸಿತು.

ಇದನ್ನೂ ಓದಿ: Dinesh karthik: 4, 4, 4, 6, 6, 4 ಲಾಸ್ಟ್ ಓವರ್​ನಲ್ಲಿ ಅಬ್ಬರಿಸಿದ ಕಾರ್ತಿಕ್, ಮತ್ತೆ ಗೇಮ್ ಚೇಂಜರ್ ಆದ RCB ಫಿನಿಶರ್

ಪತ್ನಿಯಡೇ ತಿರುಗಿ ಸಂಭ್ರಮಿಸಿದ ಕೊಹ್ಲಿ:

ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ ಗೆ ಪತ್ನಿ ಅನುಷ್ಕಾ ಶರ್ಮಾ ಸಹ ಸಂತಸ ವ್ಯಕ್ತಪಡಿಸಿದರು. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಸ್ಟ್ಯಾಂಡ್‌ನಲ್ಲಿ ಹಾಜರಿದ್ದರು. ಈ ವೇಳೆ ಕ್ಯಾಚ್ ಹಿಡಿದ ತಕ್ಷಣ ಕೊಹ್ಲಿ ಅನುಷ್ಕಾ ಅವರ ಕಡೆ ತಿರುಗಿ ಸಂಭ್ರಮಿಸಿ, ವಿ (ವಿಕ್ಟರಿ) ಚಿಹ್ನೆಯನ್ನು ತೋರಿಸುವ ಮೂಲಕ ಸಂಭ್ರಮಿಸಿದರು . ಸಧ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸದ ಕಾಮೆಂಟ್​ ಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: RCB vs DC: ಬೆಂಗಳೂರು ಬಾಯ್ಸ್ ಡಿಚ್ಚಿಗೆ ತಲೆ ತಿರುಗಿ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್, ಆರ್​​ಸಿಬಿ.. ಏನ್​ ಪರ್ಫಾಮೆನ್ಸ್​ ಗುರೂ!

ಡಿಸಿ ವಿರುದ್ಧ ಗೆದ್ದು ಬೀಗಿದ ಆರ್​ಸಿಬಿ:

ಪಂದ್ಯಕ್ಕೆ ಸಂಬಂಧಿಸಿದಂತೆ, RCB ಅಂತಿಮವಾಗಿ DC ಅನ್ನು 20 ಓವರ್‌ಗಳಲ್ಲಿ 173/7 ಕ್ಕೆ ಕಟ್ಟಿಹಾಕುವ ಮೂಲಕ ಪಂದ್ಯವನ್ನು ಆರಾಮವಾಗಿ ಗೆದ್ದುಕೊಂಡಿತು. 17ನೇ ಓವರ್‌ನಲ್ಲಿ ರಿಷಬ್ ಪಂತ್ ಔಟಾದ ನಂತರ ಕ್ಯಾಪಿಟಲ್ಸ್‌ ಸೋಲಿನ ಹಾದಿ ತುಳಿಯಿತು. ಇನ್ನು, ಕೊನೆಯಲ್ಲಿ ಕೊಹ್ಲಿಯ ಅದ್ಭುತ ಕ್ಯಾಚ್ ಪಂದ್ಯದ ಮಹತ್ವದ ತಿರುವು ಎಂದು ಸಾಬೀತಾಯಿತು.
Published by:shrikrishna bhat
First published: