IPL 2022 PBKS vs SRH: ಪಂಜಾಬ್ - ಹೈದರಾಬಾದ್ ಮುಖಾಮುಖಿ, ಹೇಗಿದೆ ಉಭಯ ತಂಡಗಳ ಬಲಾಬಲ

PBKS vs SRH

PBKS vs SRH

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 70ನೇ ಪಂದ್ಯದಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ (PBKS vs SRH) ತಂಡಗಳು ಸೆಣಸಾಡಲಿವೆ.

  • Share this:

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 70ನೇ ಪಂದ್ಯದಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ (PBKS vs SRH) ತಂಡಗಳು ಸೆಣಸಾಡಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈ ಪಂದ್ಯವು ಐಪಿಎಲ್ 2022ರ ಕೊನೆಯ ಲೀಗ್ ಹಂತದ ಪಂದ್ಯವಾಗಿರಲಿದ್ದು, ಅಂತಿಮ ಲೀಗ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ. ಇದಲ್ಲದೇ ಇಂದಿನ ಪಂದ್ಯವು ಉಭಯ ತಂಡಗಳೆರಡಕ್ಕೂ ಔಪಚಾರಿಕ ಪಂದ್ಯವಾಗಿದ್ದು, ಯಾವುದೇ ನಿರೀಕ್ಷೆಗಳು ಇಲ್ಲವೆಂದರೂ ತಪ್ಪಾಗಲಾರದು. ಈಗಾಗಲೇ ಪಂಜಾಬ್ (PBKS) ಮತ್ತು ಹೈದರಾಬಾದ್ (SRH) ತಂಡಗಳು ಟೂರ್ನಿಯಿಂದ ಹೊರಬಿದ್ದಿದ್ದು, ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್ 15ನೇ ಆವೃತ್ತಿಗೆ ವಿಧಾಯ ಹೇಳುವ ತವಕದಲ್ಲಿ ಎರಡೂ ತಂಡಗಳಿವೆ.


ಪಂದ್ಯದ ವಿವರ:


ಐಪಿಎಲ್ 2022ರ 70ನೇ ಪಂದ್ಯದಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.


ಪಿಚ್ ವರದಿ:


ವಾಂಖೆಡೆಯಲ್ಲಿ ಇದು ಋತುವಿನ ಕೊನೆಯ ಪಂದ್ಯವಾಗಿದ್ದು, ಪಿಚ್ ಬ್ಯಾಟರ್‌ಗಳಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಎರಡೂ ತಂಡಗಳು ಸಮಾನವಾದ ಉತ್ತಮ ಬ್ಯಾಟಿಂಗ್ ಲೈನ್-ಅಪ್ ಅನ್ನು ಹೊಂದಿವೆ ಮತ್ತು ಇದು ಹೆಚ್ಚಿನ ಸ್ಕೋರಿಂಗ್ ನ್ನು ನಿರೀಕ್ಷಿಸಬಹುದು. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: IPL 2022 MI vs DC: ಡೆಲ್ಲಿ ವಿರುದ್ಧ ಮುಂಬೈ ತಂಡಕ್ಕೆ ಗೆಲುವು, ಫ್ಲೇ ಆಫ್ ಪ್ರವೇಶಿಸಿದ RCB


SRH vs PBKS ಹೆಡ್ ಟು ಹೆಡ್:


ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ ಐಪಿಎಲ್ ನಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ 13 ಬಾರಿ ಹೈದರಾಬಾದ್ ಮತ್ತು 6 ಬಅರಿ ಪಂಜಾಬ್ ತಂಡಗಳು ಗೆಲುವನ್ನು ಸಾದಿಸಿವೆ. ಕಳೆದ ಬಾರಿ ನಡೆದ 1 ಪಂದ್ಯದಲ್ಲಿಯೂ ಪಮಜಾಬ್ ಎದುರು ಹೈದರಾಬಾದ್ ತಂಡ ಜಯ ಸಾಧಿಸಿತ್ತು. ಹೀಗಾಗಿ ಅಂಕಿಅಂಶಗಳ ಪ್ರಕಾರ ಹೈದರಾಬಾದ್ ತಂಡ ಹೆಚ್ಚು ಬಲಿಷ್ಠವಾಗಿ ಕಾಣುತ್ತದೆ.


ಇನ್ನು, ಐಪಿಎಲ್ 2022ರಲ್ಲಿ ಉಭಯ ತಂಡಗಳೆರಡೂ ಸಹ ಆಡಿರುವ ಒಟ್ಟು 13 ಪಂದ್ಯದಲ್ಲಿ 6 ರಲ್ಲಿ ಗೆದ್ದು 7 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಹೀಗಾಗಿ ಎರಡೂ ತಂಡಗಳು ತಲಾ 12 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಪಂಜಾಬ್ 7 ಮತ್ತು ಹೈದರಾಬಾದ್ 8ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಗೆ ಶುಭ ವಿದಾಯ ಹೇಳು ನಿರೀಕ್ಷೆಯಲ್ಲಿ ಉಭಯ ತಂಡಗಳಿವೆ.


ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್, ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸ್‌ಮನ್ ಕೊಹ್ಲಿ


SRH vs PBKS ಸಂಭವನೀಯ ತಂಡ:


ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್ (c), ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್, ಟಿ ನಟರಾಜನ್ / ಕಾರ್ತಿಕ್ ತ್ಯಾಗಿ.


ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ / ಶಾರುಖ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (c), ಜಿತೇಶ್ ಶರ್ಮಾ (WK), ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್.

First published: