ಐಪಿಎಲ್ 2022ರ (IPL 2022) 15ನೇ ಆವೃತ್ತಿಯ ಲೀಗ್ ಹಂತವು ಇನ್ನೇನು ಕೊನೆಗೊಳ್ಳುವುದರಲ್ಲಿದೆ. ಅಲ್ಲದೇ ಮೇ 29ಕ್ಕೆ ಐಪಿಎಲ್ 2022ರ ಫೈನಲ್ ಪಂದ್ಯ ನಡೆಯುವ ಮೂಲಕ ಈ ಸೀಸನ್ ಗೆ ಅಧಿಕೃತವಾಗಿ ತೆರೆಬಿಳಲಿದೆ. ಇದರ ನಡುವೆ ಈ ಬಾರಿ ಸ್ಟಾರ್ ಪ್ಲೇಯರ್ಸ್ ಅಥವಾ ಹಿರಿಯ ಆಟಗಾರಿಗಿಂತ ಹೆಚ್ಚಾಗಿ ಹೊಸ ಯಂಗ್ ಪ್ಲೇಯರ್ಸ್ ಗಳೇ ಐಪಿಎಲ್ ನಲ್ಲಿ ಮಿಂಚು ಹರಿಸಿದ್ದಾರೆ ಎಂದರೂ ತಪ್ಪಾಗಲಾರದು. ಅದರಲ್ಲಿಯೂ ಜಮ್ಮುವಿನ ಉಮ್ರಾನ್ ಮಲಿಕ್ (Umran Malik) ಈ ಬಾರಿ ತಮ್ಮವೇಗದ ಬೌಲಿಂಗ್ ನಿಂದ ಎಲ್ಲರ ಗಮನವನ್ನೂ ಸೆಳೆದಿದ್ದಾರೆ. ತಮ್ಮ ಬೆಂಕಿ ವೇಗದಿಂದ ಎದುರಾಳಿ ಬ್ಯಾಟರ್ ಗಳನ್ನು ದಂಗುಬಡಿಸುವಲ್ಲಿ ಉಮ್ರಾನ್ ಯಶಸ್ವಿಯಾಗಿದ್ದಾರೆ. ಅಲ್ಲದೇ ವೇಗದ ಬೌಲಿಂಗ್ ನಿಂದ ದಾಖಲೆಯನ್ನೂ ನಿರ್ಮಿಸಿದ್ದಾರೆ. ಇದರ ನಡುವೆ ಟೀಂ ಇಂಡಿಯಾದ ಹಿರಿಯ ಆಟಗಾರ ಮೊಹಮ್ಮದ್ ಶಮಿ (Mohammed Shami) ಇದೀಗ ಉಮ್ರಾನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಮೆಚ್ಚುಗೆಯ ಮಾತುಗಳನ್ನಾಡಿದ ಶಮಿ:
ಇನ್ನು, ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡುತ್ತಿದ್ದಾರೆ. ಐಪಿಎಲ್ 15ನೇ ಸೀಸನ್ ನಲ್ಲಿ ಶಮಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಮೊಹಮ್ಮದ್ ಶಮಿ ಹೈದರಾಬಾದ್ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರ ವೇಗದಿಂದ ಪ್ರಭಾವಿತರಾಗಿದ್ದಾರೆ, ಆದರೆ ಅವರು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ ಎಂದು ಶಮಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಮ್ರಾನ್ ಮಲಿಕ್ ಅವರು ಐಪಿಎಲ್‌ನಲ್ಲಿ 157 ಕಿಮೀ ವೇಗದಲ್ಲಿ ವೇಗದ ಚೆಂಡನ್ನು ಎಸೆದಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಎಸೆತವಾಗಿದೆ. ಉಮ್ರಾನ್ ಐಪಿಎಲ್‌ನಲ್ಲಿ ವೇಗವಾಗಿ ಬೌಲಿಂಗ್ ಮಾಡಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಉಮ್ರಾನ್ ಮಲಿಕ್ ವೇಗದ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾಗೆ ಆಯ್ಕೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: 36 ಎಸೆತಗಳಲ್ಲಿ 100 ರನ್, IPL ನಲ್ಲಿ RCB ಬೌಲಿಂಗ್ ಜೋಡಿಯ ಕೆಟ್ಟ ದಾಖಲೆ
ಮಲ್ಲಿಕ್ ಪ್ರಬುದ್ಧರಾಗಲು ಇನ್ನೂ ಸ್ವಲ್ಪ ಸಮಯ ಬೇಕು:
'ವೇಗವಾಗಿರುವುದು ಪರವಾಗಿಲ್ಲ, ಆದರೆ ನೀವು 140 ಕಿಮೀ / ಗಂ ವೇಗದಲ್ಲಿ ಎರಡೂ ಸ್ವಿಂಗ್ ಮಾಡುತ್ತಿದ್ದರೆ, ನೀವು ಇನ್ನೂ ಬ್ಯಾಟ್ಸ್ಮನ್ ಗಳನ್ನು ಕಟ್ಟಿಹಾಕಬುದು. ಉಮ್ರಾನ್ ಮಲಿಕ್ ಪ್ರಬುದ್ಧರಾಗಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ, ಅವರಲ್ಲಿ ವೇಗವಿದೆ, ಆದರೆ ಹೆಚ್ಚು ಆಡಿದ ನಂತರ ಅವರು ವೇಗದ ಜೊತೆಗೆ ವಿಭಿನ್ನ ವಿಷಯಗಳನ್ನು ಕಲಿಯುತ್ತಾರೆ'ಎಂದು ಶಮಿ ಹೇಳಿದ್ದಾರೆ.
ಈ ಬಾರಿ ಐಪಿಎಲ್ ನಲ್ಲಿ ಯುವ ವೇಗಿಗಳು ಹೆಚ್ಚು ಪ್ರಭಾವಶಾಲಿಯಾಗಿದ್ದಾರೆ:
ಐಪಿಎಲ್‌ನಿಂದ ಮುಂದೆ ಬಂದಿರುವ ಯುವ ವೇಗದ ಬೌಲರ್‌ಗಳ ಬಗ್ಗೆ ಶಮಿ ಪ್ರಭಾವಿತರಾಗಿದ್ದಾರೆ. ‘ಈ ಋತುವಿನಲ್ಲಿ ಹಲವು ಯುವ ವೇಗಿಗಳು ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡುತ್ತಿರುವುದು ಒಳ್ಳೆಯ ಸಂಗತಿ. ವೇಗದ ಬೌಲರ್ ಆಗಿ ಉತ್ತಮ ಪ್ರದರ್ಶನ ನೀಡಲು ನಿಮಗೆ ಪ್ರತಿಭೆಯ ಜೊತೆಗೆ ಪಂದ್ಯದ ಅಭ್ಯಾಸವೂ ಬೇಕು. ಐಪಿಎಲ್ ನಿಂದಾಗಿ ಯುವ ವೇಗದ ಬೌಲರ್ ಗಳು ಮ್ಯಾಚ್ ಪ್ರಾಕ್ಟೀಸ್ ಪಡೆಯುತ್ತಿದ್ದಾರೆ. ಅವರು ಹಿರಿಯ ಆಟಗಾರರೊಂದಿಗೆ ಸಮಯ ಕಳೆಯುತ್ತಿದ್ದಾರೆ ಮತ್ತು ಅವರ ಅನುಭವದಿಂದ ಕಲಿಯುತ್ತಿದ್ದಾರೆ' ಎಂದು ಶಮಿನ್ ಹೇಳಿದ್ದಾರೆ.
ಇದನ್ನೂ ಓದಿ: IPL 2022 KKR vs SRH: ಕೋಲ್ಕತ್ತಾ - ಹೈದರಾಬಾದ್ ತಂಡಗಳ ಮುಖಾಮುಖಿ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್ 11
ತಮ್ಮ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಮಿ:
ಶಮಿ ಕೂಡ ಐಪಿಎಲ್ 2022ರಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 'ಅವಕಾಶ ಸಿಕ್ಕಾಗ ಶೇ. 100 ರಷ್ಟು ನೀಡಲು ಯತ್ನಿಸಿ ಯಶಸ್ವಿಯಾಗಿದ್ದೆ. ಕಳೆದ 3-4 ಐಪಿಎಲ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ನಾನೂ ಒಬ್ಬ. ಕಳೆದ T20 ವಿಶ್ವಕಪ್‌ನಲ್ಲಿ, ಅವರು 5 ಪಂದ್ಯಗಳಲ್ಲಿ 23 ರ ಸರಾಸರಿಯಲ್ಲಿ 6 ವಿಕೆಟ್‌ಗಳನ್ನು ಪಡೆದರು ಮತ್ತು 8.84 ರ ಎಕಾನಮಿ ರೇಟ್‌ನಲ್ಲಿ ಬೌಲಿಂಗ್ ಮಾಡಿದರು. ಟಿ20 ವಿಶ್ವಕಪ್ ಬಳಿಕ ಶಮಿ ಭಾರತದಿಂದ ಹೊರಗುಳಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ