• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Shikhar Dhawan: ಫ್ಲೇ ಆಫ್ ತಲುಪಲು ವಿಫಲವಾಗಿದ್ದಕ್ಕೆ ಧವನ್​ಗೆ ತಂದೆಯಿಂದ ಥಳಿತ, ವಿಡಿಯೋ ವೈರಲ್

Shikhar Dhawan: ಫ್ಲೇ ಆಫ್ ತಲುಪಲು ವಿಫಲವಾಗಿದ್ದಕ್ಕೆ ಧವನ್​ಗೆ ತಂದೆಯಿಂದ ಥಳಿತ, ವಿಡಿಯೋ ವೈರಲ್

ಶಿಖರ್ ಧವನ್

ಶಿಖರ್ ಧವನ್

ಪಂಜಾಬ್ ಪ್ಲೇ-ಆಫ್‌ಗೆ ಹೋಗದ ಕಾರಣ ತಂದೆ ನನ್ನನ್ನು ಹೊಡೆದರು ಎಂದು ಧವನ್ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೊ ಸದ್ಯ ಸಖತ್ ವೈರಲ್ ಆಗುತ್ತಿದ್ದು, ಇದರ ಅಸಲಿಯತ್ತೇನೆಂದು ನೋಡಿ.

  • Share this:

ಪಂಜಾಬ್ ಕಿಂಗ್ಸ್ (PBKS) ತಂಡ ಐಪಿಎಲ್ (IPL) ಟೂರ್ನಿಯ ಪ್ಲೇ-ಆಫ್ ತಲುಪಲು ವಿಫಲವಾಗಿದ್ದು, ಈ ಬಾರಿ ಟೂರ್ನಿಯಿಂದ ಹೊರನಡೆದಿದೆ. ಕಳೆದ ವಾರದವರೆಗೂ ಪಂಜಾಬ್ ತಂಡ ಫ್ಲೇ ಆಫ್ ಋತುವಿನಲ್ಲಿತ್ತು. ಆದರೆ, ನಿರ್ಣಾಯಕ ಘಟ್ಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಫ್ಲೇ ಆಫ್ ತಲುಪುವ ಮೂಲಕ ಪಂಜಾಬ್ ಫ್ಲೇ ಆಫ್ ಕನಸು ಭಗ್ನವಾಯಿತು. ಈ ಋತುವಿನಲ್ಲಿ ಮೊದಲ ಬಾರಿಗೆ ಪಂಜಾಬ್ ಪರ ಆಡುತ್ತಿರುವ ಶಿಖರ್ ಧವನ್ (Shikhar Dhawan) ಇಡೀ ಋತುವಿನಲ್ಲಿ 460 ರನ್ ಗಳಿಸಿದರು. ಧವನ್ ಅವರ ಪ್ರಯತ್ನಗಳು ಅವರನ್ನು ಪ್ಲೇ-ಆಫ್‌ಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಪಂಜಾಬ್ ಕಿಂಗ್ಸ್ ಸವಾಲಿನ ನಂತರ ಶಿಖರ್ ಧವನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಧವನ್ ಅವರಿಗೆ ಅವರ ತಂದೆ ಹೊಡೆಯುತ್ತಿರುವುದನ್ನು ಕಾಣಬಹುದು. ಪಂಜಾಬ್ ಪ್ಲೇ-ಆಫ್‌ಗೆ ಹೋಗದ ಕಾರಣ ತಂದೆ ನನ್ನನ್ನು ಹೊಡೆದರು ಎಂದು ಧವನ್ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೊ ಸದ್ಯ ಸಖತ್ ವೈರಲ್ ಆಗುತ್ತಿದ್ದು, ಇದರ ಅಸಲಿಯತ್ತೇನೆಂದು ನೋಡಿ.


ಧವನ್​ ಗೆ ಥಳಿಸಿದ ತಂದೆ:


ಶಿಖರ್ ಧವನ್ ಅವರ ಈ ವಿಡಿಯೋ ಕಾಮಿಡಿಯಾಗಿದೆ. ಧವನ್ ಯಾವಾಗಲೂ ತಮಾಷೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಮನರಂಜನೆಗಾಗಿ ಈ ವಿಡಿಯೋವನ್ನು ಶೇರ್ ಮಾಡಿದ್ದು ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧವನ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನನ್ನ ತಂದೆ ಪಂಜಾಬ್ ತಂಡ ಐಪಿಎಲ್ ನಲ್ಲಿ ಫ್ಲೇ ಆಫ್​ ಗೆ ಹೊಗದರಿವುದಕ್ಕೆ ನನನಗೆ ಹೊಡೆದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಇದು ಕೇವಲ ಮನೋರಂಜನೆಗಾಗಿ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.




ಐಪಿಎಲ್ 2022ರಲ್ಲಿ ಧವನ್ ಪ್ರದರ್ಶನ:


ಐಪಿಎಲ್ 15ನೇ ಆವೃತ್ತಿಯಲ್ಲಿ 122ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ 14 ಪಂದ್ಯಗಳಲ್ಲಿ ಒಟ್ಟು 460 ರನ್ ಗಳಿಸಿದ್ದರು. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 88 ಆಗಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಶಿಖರ್ ನಾಲ್ಕನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: IPL 2022: ಐಪಿಎಲ್ ನಿಯಮ ಉಲ್ಲಂಘಿಸಿದ ಕಾರ್ತಿಕ್, ಇಂದು RCB ಪರ ಆಟವಾಡ್ತಾರಾ DK?


ಧವನ್​ಗೆ ಕರೆ ಮಾಡಿದ್ದ ದ್ರಾವಿಡ್:


ಐಪಿಎಲ್ ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದರೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ತಂಡಕ್ಕೆ ಶಿಖರ್ ಧವನ್ ಆಯ್ಕೆಯಾಗಿಲ್ಲ. ಹೀಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು ಹೌದು. ಸರಣಿಗೆ ತಂಡವನ್ನು ಆಯ್ಕೆ ಮಾಡುವ ಮುನ್ನ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೇ ಶಿಖರ್ ಧವನ್ ಅವರಿಗೆ ಕರೆ ಮಾಡಿ ತಂಡದಲ್ಲಿ ಆಯ್ಕೆಯಾಗುತ್ತಿಲ್ಲ ಎಂದು ತಿಳಿಸಿದ್ದರು. ಟಿ20ಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬೇಕು. ರಾಹುಲ್ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸಿದ್ದರು ಮತ್ತು ಎಲ್ಲರೂ ಅವರನ್ನು ಒಪ್ಪಿದರು. ತಂಡದ ಆಯ್ಕೆಗೂ ಮುನ್ನ ದ್ರಾವಿಡ್ ಶಿಖರ್ ಧವನ್ ಅವರಿಗೆ ಕರೆ ಮಾಡಿ ಈ ಮಾಹಿತಿ ನೀಡಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Jos Buttler: ಜೋಸ್ ಬಟ್ಲರ್ ನನ್ನ 2ನೇ ಪತಿ, ವೈರಲ್ ಆಯ್ತು ಸ್ಟಾರ್ ಕ್ರಿಕೆಟಿಗನ ಪತ್ನಿ ಹೇಳಿಕೆ


ಆರ್​ಸಿಬಿ ಮತ್ತು ರಾಜಸ್ಥಾನ್ ಪಂದ್ಯ:


ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ (RCB vs RR)  ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಗೆಲ್ಲುವ ತಂಡ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಆಡಲಿದೆ.

top videos
    First published: