ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 2ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ (MI vs DC) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ (Over) 5 ವಿಕೆಟ್ ನಷ್ಟಕ್ಕೆ 177 ರನ್ಗಳಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ ತಂಡವು ಇನ್ನೂ 10 ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿದೆ. ಡೆಲ್ಲಿ 18.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸುವ ಮೂಲಕ ಮುಂಬೈ ವಿರುದ್ಧ 4 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಇನ್ನು ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ (Axar Patel) ಅವರ 17 ಎಸೆತಗಳಲ್ಲಿ 38 ರನ್ಗಳ ಅಮೋಘ ಇನ್ನಿಂಗ್ಸ್ನ ಸೋಲಿನ ಸರಣಿಯನ್ನು ಗೆಲುವಿನತ್ತ ತಿರುಗಿಸಲು ಡೆಲ್ಲಿ ನೆರವಾಯಿತು.
ಸ್ಪೋಟಕ ಆಟವಾಡಿದ ಅಕ್ಷರ್ ಪಟೇಲ್:
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ದವಡೆಯಿಂದ ಅಕ್ಷರ್ ಪಟೇಲ್ ತಪ್ಪಿಸಿದ್ದಾರೆ. ಹೌದು, ಅಂತಿಮ ಹಂತದಲ್ಲಿ ಸ್ಪೋಟಕ ಆಟವಾಡಿದ ಅಕ್ಷರ್ ಪಟೇಲ್ 17 ಎಸೆತಗಳಲ್ಲಿ 3 ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 38 ರನ್ ಗಳಿಸುವ ಮೂಲಕ ತಂಡವು ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಡೆಲ್ಲಿ ಪರ ಲಲಿತ್ ಯಾಧವ್ 48 ರನ್ ಹಾಗೂ ಪ್ರಥ್ವಿ ಶಾ 38 ರನ್ ಗಳಿಸಿದರೆ, ಟೀಮ್ ಸೈಫರ್ಟ್ 21 ಹಾಗೂ ಶಾರ್ದೂಲ್ ಠಾಕೂರ್ 22 ರನ್ ಗಳಿಸಿ ಮಿಂಚಿದರು.
ಇದನ್ನೂ ಓದಿ: DC vs MI: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಹೇಗಿದೆ ಬ್ರಬೋರ್ನ್ ಸ್ಟೇಡಿಯಂ ಪಿಚ್ ರಿಪೋರ್ಟ್?
ಮೊದಲು ಬ್ಯಾಟ್ ಮಾಡಿದ ಮುಂಬೈ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಮುಂಬೈ ಪರ ನಾಯಕ ರೋಹಿತ್ ಶರ್ಮಾ 32 ಬಾಲ್ಗಳಲ್ಲಿ 41 ರನ್ಗಳಿಸಿದರೆ, ಇಶಾನ್ ಕಿಶನ್ 48 ಬಾಲ್ಗಳಲ್ಲಿ 11 ಫೋರ್ 1 ಸಿಕ್ಸ್ ನೆರವಿನಿಂದ ಬರೋಬ್ಬರಿ 81 ರನ್ಗಳಿಸುವ ಮೂಲಕ ತಂಡದ ದೊಡ್ಡ ಮೊತ್ತ ಪೇರೆಪಿಸುವಲ್ಲಿ ಸಹಾಯ ಮಾಡಿದರು. ಉಳಿದಂತೆ ತಿಲಕ್ ವರ್ಮಾ 22 ರನ್ ಗಳಿಸಿದರು.
ಮಿಂಚಿದ ಕುಲದೀಪ್ ಯಾದವ್:
ಇನ್ನು, ಡೆಲ್ಲಿ ಸಹ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದು, ಮುಂಬೈ ತಂಡವನ್ನು 177 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಡೆಲ್ಲಿ ಪರ ಕುಲದೀಪ್ ಯಾದವ್ 4 ಓವರ್ ಮಾಡಿ 18 ರನ್ಗೆ 3 ವಿಕೆಟ್ ಪಡೆದು ಮಿಂಚಿದರು. ಜೊತೆಗೆ ಕಲೀದ್ ಅಹ್ಮದ್ 4 ಓವರ್ಗೆ 27 ರನ್ ನೀಡಿ 2 ವಿಕೆಟ್ ಪಡೆದರು. ಆದರೆ ಅಕ್ಷರ್ ಪಟೇಲ್ 40 ರನ್ ನೀಡುವ ಮೂಲಕ ಸ್ವಲ್ಪ ದುಬಾರಿಯಾದರು.
ಇದನ್ನೂ ಓದಿ: MI vs DC: ಮುಂಬೈ ಕೊಟ್ಟ ಕೋಟಿ ಕೋಟಿ ವೇಸ್ಟ್ ಆಗಲಿಲ್ಲ.. ಮೊದಲ ಪಂದ್ಯದಲ್ಲೇ ಮಿಂಚಿದ ಇಶಾನ್ ಕಿಶನ್!
ವ್ಯರ್ಥವಾದ ಕಿಶನ್ ಹಾಗೂ ತಾಂಪಿ ಆಟ:
ಇನ್ನು, ಮುಂಬೈ ಪರ ಬಿಸೆಲ್ ತಾಂಪಿ 4 ಓವರ್ಗೆ 35 ರನ್ ನೀಡಿ 3 ವಿಕೆಟ್ ಪಡೆದರೆ ಮುರುಗನ್ ಅಶ್ವೀನ್ 2 ಹಾಗೂ ಮೀಲ್ಸ್ 1 ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಶಾನ್ ಕಿಶನ್, ಕೇವಲ 48 ಬಾಲ್ಗಳಲ್ಲಿ 11 ಫೋರ್ ಮತ್ತು 1 ಸಿಕ್ಸ್ ನೆರವಿನಿಂದ ಬರೋಬ್ಬರಿ 81 ರನ್ಗಳಿಸಿದರೂ ಮುಂಬೈ ತಂಡ ಗೆಲ್ಲಲೂ ಸಾಧ್ಯವಾಗಲಿಲ್ಲ.
ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ:
ಇಂದಿನ ಎರಡನೇ ಪಂದ್ಯದಲ್ಲಿ ಬೆಂಗಳೂರು ಮತ್ತು ಪಂಜಾಬ್ ತಂಡಗಳು ಸೆಣಸುತ್ತಿದ್ದು, ಟಾಸ್ ಗೆದ್ದ ಪಂಜಾಬ್ ಮೊದಲು ಬೆಂಗಳೂರು ತಂಡವನ್ನು ಬ್ಯಾಟಿಂಗ್ ಇಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ