IPL 2022 RR vs LSG: ರಾಜಸ್ಥಾನ್​ಗೆ ಲಕ್ನೋ ಸವಾಲು, ಉಭಯ ತಂಡಗಳ ಬಲಾಬಲ ಹೇಗಿದೆ?

2ನೇ ಪಂದ್ಯವು ಮುಂಬೈನ ವಾಂಖಡೆ ಮೈದಾನದಲ್ಲಿ ಸಂಜುಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ (RR vs LSG) ಮುಖಾಮುಖಿ ಆಗಲಿದೆ.

RR vs LSG

RR vs LSG

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಇಂದು (IPL 2022) ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (KKR vs DC) ತಂಡದ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವು ಮದ್ಯಾಹ್ನ 3:30ಕ್ಕೆ ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. 2ನೇ ಪಂದ್ಯವು ಮುಂಬೈನ ವಾಂಖಡೆ ಮೈದಾನದಲ್ಲಿ ಸಂಜುಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ (RR vs LSG) ಮುಖಾಮುಖಿ ಆಗಲಿದೆ. ಈ ಪಂದ್ಯವು ಸಂಜೆ 7:30ಕ್ಕೆ ಆರಂಭವಾಗಲಿದ್ದು, ಈಗಾಗಲೇ ಅಂಕಪಟ್ಟಿಯಲ್ಲಿ ಲಕ್ನೋ (Lucknow) 4 ಹಾಗೂ ರಾಜಸ್ತಾನ್ 5 ಸ್ಥಾನದಲ್ಲಿದ್ದು ಉಭಯ ತಂಡಗಳು ಟಾಫ್ ಲೀಸ್ಟ್ ಅಲ್ಲಿ ಬರಲು ಇಂದಿನ ಪಂದ್ಯ ಪ್ರಮುಖವಾಗಿದ್ದು, ಸೂಪರ್ ಸಂಡೆ ಪಂದ್ಯದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಇನ್ನು, 2 ತಂಡಗಳ ಬಲಾಬಲ ನೋಡುವುದಾರೆ ಈ ಕೆಳಕಂಡಂತಿದೆ.

ಪಂದ್ಯದ ವಿವರ:

ಇಂದಿನ 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೇಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಂಬೈನ ವಾಂಖಡೆ ಮೈದಾನದಲ್ಲಿ ಸೆಣಸಾಡಲಿವೆ. ಭಾರತೀಯ ಕಾಲಮಾನ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಪಿಚ್ ವರದಿ:

ವಾಂಖೆಡೆ ಸ್ಟೇಡಿಯಂ ವೇಗದ ಬೌಲರ್‌ಗಳಿಗೆ ಇಲ್ಲಿಯವರೆಗೆ ಉತ್ತಮವಾಗಿ ಸಹಾಯ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಇಲ್ಲಿಯವರೆಗೆ ದೊಡ್ಡ ಸ್ಕೋರ್‌ಗಳನ್ನು ಗಳಿಸಲು ಸಾಧ್ಯವಾಗದ ಕಾರಣ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಳ್ಳದಿರುವುದು ಬಹಳ ಮುಖ್ಯ. ಟಾಸ್ ಗೆದ್ದ ನಾಯಕನು ಸಂಜೆಯ ನಂತರ ದೊಡ್ಡ ಪರಿಣಾಮವನ್ನು ಬೀರುವ ಇಬ್ಬನಿ ಅಂಶವನ್ನು ಪರಿಗಣಿಸಿ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: IPL 2022 CSK vs SRH: ಇಂದಿನ ಪಂದ್ಯದ ಮೂಲಕ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ? ಚೆನ್ನೈ-ಹೈದರಾಬಾದ್ ಸಂಭಾವ್ಯ ತಂಡ

ಐಪಿಎಲ್ 2022 ರಲ್ಲಿ ಉಭಯ ತಂಡಗಳ ಪ್ರದರ್ಶನ:

ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ರಲ್ಲಿ ಇದುವರೆಗೆ 3 ಪಂದ್ಯಗಳನ್ನು ಆಡಿದೆ. ಅವರು 2 ಪಂದ್ಯಗಳನ್ನು ಗೆದ್ದು 1 ರಲ್ಲಿ ಸೋತಿದ್ದಾರೆ. 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿದ್ದು, 3ರಲ್ಲಿ ಗೆದ್ದು 1ರಲ್ಲಿ ಸೋತಿದೆ. 6 ಅಂಕಗಳೊಂದಿಗೆ LSG ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಉಭಯ ತಂಡಗಳು ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೇರಲು ಇಂದಿನ ಪಂದ್ಯ ಪ್ರಮುಖವಾಗಿದೆ.

ಉಭಯ ತಂಡಗಳ ಬಲಾಬಲ:

ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ತಂಡಗಳು ಐಪಿಎಲ್​ ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ. ಆದರೆ ತಂಡಗಳ ಆಟಗಾರರ ಬಲಾಬಲ ನೋಡುವುದಾದರೆ, ರಾಜಸ್ಥಾನ್ ಪರ ಜೋಸ್ ಬಟ್ಲರ್ ಈ ಬಾರಿ ಉತ್ತಮ ಫಾರ್ಮ್​ ನಲ್ಲಿ ಇದ್ದು, 3 ಪಂದ್ಯಗಳಿಂದ ಬರೋಬ್ಬರಿ 205 ರನ್ ಗಳಿಸಿದ್ದಾರೆ, ಹಾಗೇಯೆ ಬೌಲಿಂಗ್​ನಲ್ಲಿ ಆರ್​ಆರ್​ ಪರ ಯುಜುವೇಂದ್ರ ಚಾಹಲ್ 3 ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದಾರೆ. ಅದರಂತೆ ಲಕ್ನೋ ತಂಡದಲ್ಲಿಯೂ ಕ್ವಿಂಟನ್ ಡಿ ಕಾಕ್ 4 ಪಂದ್ಯಗಳಿಂದ 149 ರನ್ ಗಳಿಸಿ ತಂಡಕ್ಕೆ ಆಸರೆಯಾದರೆ, ಆವೇಶ್ ಖಾನ್ 4 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಆಟಗಾರರ ಪ್ರದರ್ಶನ ಇಂದು ನಿರ್ಣಾಯಕವಾಗಿರಲಿದೆ.

ವಾಂಖಡೆ ಮೈದಾನದ ಅಂಕಿಅಂಶ:

ವಾಂಖಡೆ ಮೈದಾನದ ಅಂಕಿಅಂಶ ನೋಡುವುದಾದರೆ, ಇಲ್ಲಿ ಈವರೆಗೆ ಒಟ್ಟು 7 ಪಂದ್ಯಗಳು ನಡೆದಿದ್ದು, ಇದರಲ್ಲಿ 2 ಪಂದ್ಯವನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಆದರೆ 5 ಪಂದ್ಯಗಳನ್ನು ಚೇಸಿಂಗ್ ಟೀಂ ಗೆದ್ದಿದೆ. ಉಳಿದಂತೆ ಮೊದಲ ಇನ್ನಿಂಗ್ಸ್​ ಮೊತ್ತ 194 ರನ್​ ಆಗಿದ್ದರೆ, ದಾಖಲೆಯ ಗರಿಷ್ಠ ಸ್ಕೋರ್ 240 ರನ್​ ಆಗಿದೆ. ಹಾಗಾಗಿ ಪಿಚ್​ ಸಹ ಇಂದಿನ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಟಾಸ್ ಗೆದ್ದ ತಂಡ ಚೇಸಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: IPL 2022 PBKS vs GT: ಪಂಜಾಬ್ ರಾಜರಿಗೆ ಗುಜರಾತ್ ಸವಾಲು, ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ XI

RR vs LSG ಸಂಭಾವ್ಯ ತಂಡ:

ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್/ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಸಂಜು ಸ್ಯಾಮ್ಸನ್ (ಸಿ & ವಿಕೆ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್.
Published by:shrikrishna bhat
First published: