IPL 2022 RR vs GT: ಬಲಿಷ್ಠ ರಾಜಸ್ಥಾನ್ ತಂಡಕ್ಕೆ ಗುಜರಾತ್ ಸವಾಲು, ಉಭಯ ತಂಡಗಳ ಪ್ಲೇಯಿಂಗ್ 11

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಇಂದು ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ (RR vs GT) ತಂಡಗಳು ಸೆಣಸಾಡಲಿದೆ.

RR vs GT

RR vs GT

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಇಂದು ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ (RR vs GT) ತಂಡಗಳು ಸೆಣಸಾಡಲಿದೆ. ಮುಂಬೈನ ಡಿವೈ ಪಾಟೀಲ್ (DY Patel) ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಪ್ರಸ್ಥುತ ಐಪಿಎಲ್​ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ 4 ಪಂದ್ಯಗಳನ್ನು ಆಡಿದ್ದು, 4ರಲ್ಲಿ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ತಂಡವು 3 ಪಂದ್ಯಗಳನ್ನು ಆಡಿದೆ ಮತ್ತು ಎಲ್ಲವನ್ನೂ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ಬಾಲಬಲ (Head to Head) ಹೇಗಿರಲಿದೆ ಎಂದು ನೋಡೋಣ ಬನ್ನಿ.

ಪಂದ್ಯದ ವಿವರ:

ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡಲಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7ಕ್ಕೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಐಪಿಎಲ್​ 2022ರ ಉಭಯ ತಂಡಗಳ ಪ್ರದರ್ಶನ:

ರಾಜಸ್ಥಾನ್ ರಾಯಲ್ಸ್ ತಂಡವು ಈವರೆಗೆ 4 ಪಂದ್ಯಗಳನ್ನು ಆಡಿದ್ದು, 4ರಲ್ಲಿ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಂತೆಯೇ ಹಾರ್ದಿಕ್ ಪಾಂಡ್ಯಾ ನಾಯಕತ್ವದ ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ತಂಡವು 3 ಪಂದ್ಯಗಳನ್ನು ಆಡಿದೆ ಮತ್ತು ಎಲ್ಲವನ್ನೂ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯವು ಹೆಚ್ಚಿನ ಪೈಪೋಟಿಯಿಂದ ಕೂಡಿರಲಿದ ಎಂಬ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2022 MI vs PBKS: ಸತತ 5ನೇ ಸೋಲು ಕಂಡ ಮುಂಬೈ, ಗೆದ್ದು ಬೀಗಿದ ಪಂಜಾಬ್ ರಾಜರು

RR vs GT ಪಿಚ್ ವರದಿ:

ಮೊದಲು ಬ್ಯಾಟಿಂಗ್ ಮಾಡಿದ ತಂಡ 170-180 ಗಳಿಸಿದರೆ ಉತ್ತಮ ಮೊತ್ತವಾಗಲಿದೆ. ಆದರೆ ಐಪಿಎಲ್‌ನಲ್ಲಿ ಈ ಹಿಂದೆ ಇದ್ದಂತೆ ಇಬ್ಬನಿ ದೊಡ್ಡ ಸಮಸ್ಯೆಯಾಗುವುದಿಲ್ಲ. ಹೀಗಾಗಿ ಟಾಸ್ ಪ್ರಮುಖ ಪಾತ್ರವಹಿಸಲಿದ್ದು, ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಉಭಯ ತಂಡಗಳ ಹೆಡ್​ ಟು ಹೆಡ್​:

ಎರಡೂ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಹೀಗಾಗಿ ಹಿಂದಿನ ಅಂಕಿಅಂಶಗಳಿಗಿಂತ ಈ ಬಾರಿಯ ಐಪಿಎಲ್​ ನಲ್ಲಿ 2 ತಂಡಗಳ ಪ್ರದರ್ಶನ ಇಲ್ಲಿ ಪ್ರಮುಖವಾಗಲಿದೆ. ಈಗಾಗಲೇ 2 ತಂಡಗಳು ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಇಂದು ನಡೆಯುವ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. 

ಉಭಯ ತಂಡಗಳ ಬಲಾಬಲ:

ರಾಜಸ್ಥಾನ್ ತಂಡವು ಬ್ಯಾಟಿಂಗ್​ ನಲ್ಲಿ ಅಷ್ಟು ಬಲಿಷ್ಠವಾಗಿ ಇಲ್ಲವಾದರೂ ಬೌಲಿಂಗ್​ ನಲ್ಲಿ ಡಿಪೇಂಡ್​ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಗುಜರಾತ್ ತಂಡದಲ್ಲಿ ಬ್ಯಾಟಿಂಗ್ ಲೈನ್​ ಅಪ್ ಉತ್ತಮವಾಗಿದ್ದು, ಶುಭಮನ್ ಗಿಲ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2022 MI vs PBKS: ಗೆಲುವಿನ ಖಾತೆ ತೆರೆಯಲಿದ್ಯಾ ಮುಂಬೈ ಇಂಡಿಯನ್ಸ್? ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ XI?

RR vs GT ಸಂಭವನೀಯ ತಂಡ:

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (c & wk), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಕುಲದೀಪ್ ಸೇನ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್

ಗುಜರಾತ್ ಟೈಟನ್ಸ್: ಮ್ಯಾಥ್ಯೂ ವೇಡ್ (WK), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (c), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಆರ್ ಸಾಯಿ ಕಿಶೋರ್.
Published by:shrikrishna bhat
First published: