• Home
  • »
  • News
  • »
  • sports
  • »
  • Jos Buttler: ಜೋಸ್ ಬಟ್ಲರ್ ನನ್ನ 2ನೇ ಪತಿ, ವೈರಲ್ ಆಯ್ತು ಸ್ಟಾರ್ ಕ್ರಿಕೆಟಿಗನ ಪತ್ನಿ ಹೇಳಿಕೆ

Jos Buttler: ಜೋಸ್ ಬಟ್ಲರ್ ನನ್ನ 2ನೇ ಪತಿ, ವೈರಲ್ ಆಯ್ತು ಸ್ಟಾರ್ ಕ್ರಿಕೆಟಿಗನ ಪತ್ನಿ ಹೇಳಿಕೆ

ಲಾರಾ ಮತ್ತು ಬಟ್ಲರ್

ಲಾರಾ ಮತ್ತು ಬಟ್ಲರ್

ಬಟ್ಲರ್ ತಮ್ಮ 2ನೇ ಗಂಡ ಎಂದು ಸ್ಟಾರ್ ಕ್ರಿಕೆಟಿಗನ ಪತ್ನಿಯೊಬ್ಬರು ಹೇಳಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗಿದೆ.

  • Share this:

ಐಪಿಎಲ್ 2022ರ (IPL 2022) 15ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಅಹಮದಾಬಾದ್​ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ (Narendra Modi Stadium) ನಡೆಯಲಿದೆ. ಅದರಲ್ಲಿಯೂ ಸಂಜು ಸ್ಯಾಮ್ಸನ್​ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿ ಜೋಸ್ ಬಟ್ಲರ್ (Jos Buttler) ಆಸರೆಯಾಗಿದ್ದಾರೆ. ಹೌದು, ಬಟ್ಲರ್ ಈ ಬಾರಿ ಆರೆಂಜ್ ಕ್ಯಾಪ್ ರೇಸ್​ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಲ್ಲದೇ ಇಂದಿನ ಪಂದ್ಯದಲ್ಲಿಯೂ ಅಬ್ಬರಿಸಲು ಬಟ್ಲರ್ ಸಿದ್ಧರಾಗಿದ್ದು, ಇದರ ಬಟ್ಲರ್ ತಮ್ಮ 2ನೇ ಗಂಡ ಎಂದು ಸ್ಟಾರ್ ಕ್ರಿಕೆಟಿಗನ ಪತ್ನಿಯೊಬ್ಬರು ಹೇಳಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗಿದೆ.


ಬಟ್ಲರ್ ಆಟಕ್ಕೆ ಸಂಭ್ರಮಿಸಿದ ವಿದೇಶಿ ಮಹಿಳೆ:


ರಾಜಸ್ಥಾನ್ ಕಳೆದ ಪಂದ್ಯದಲ್ಲಿ ಅದ್ಭುತವಾಗಿ ಪ್ರದರ್ಶನ ತೋರಿದ್ದರು. ಈ ವೇಳೆ ವೀಕ್ಷಕ ಗ್ಯಾಲರಿಯಲ್ಲಿ ಚಹಾಲ್ ಪತ್ನಿ ಧನಶ್ರೀ ಜೊತೆ ಸಂಭ್ರಮಿಸುತ್ತಿದ್ದ ವಿದೇಶಿ ಮಹಿಳೆಯೊಬ್ಬರು ಸಂಭ್ರಮಿಸಿದ್ದು, ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆದರೆ ಇದಾದ ನಂತರ ಎಲ್ಲಡೆ ಈ ವಿದೇಶಿ ಮಹಿಳೆ ಬಟ್ಲರ್ ಅವರ ಪತ್ನಿ ಎಂದು ವೈರಲ್ ಆಗಿದೆ. ತದನಂತರ ನಿಜ ತಿಳಿದಿದ್ದು, ಈ ಮಹಿಳೆ ರಾಜಸ್ಥಾನ ಪರ ಆಡುವ ರಾಸ್ಸೀ ವಂಡರ್ ಡಸ್ಸನ್ ಅವರ ಪತ್ನಿ ಲಾರಾ ಎಂದು ತಿಳಿದಿದೆ. ಆದರೆ ಲಾರಾ ವರು ನೀಡಿದ ಒಂದು ಹೇಲಿಕೆ ಇದೀಗ ವೈರಲ್ ಆಗಿದೆ.


ಬಟ್ಲರ್ ತನ್ನ 2ನೇ ಪತಿ:


ಪಂದ್ಯದ ಬಳಿಕೆ ಮಾತನಾಡಿದ ಲಾರಾ, ‘ನಾನು ಈಗ ಜೋಸ್ ಬಟ್ಲರ್ ಅವರನ್ನು ನನ್ನ 2ನೇ ಗಂಡನಾಗಿ ದತ್ತು ತೆಗೆದುಕೊಳ್ಳಬೇಕು. ಬಟ್ಲರ ಪತ್ನಿಯ ಹೆಸರು ಲೂಯಿಸ್ ಎಂದು. ಆದರೆ ಇದೀಗ ಎಲ್ಲರೂ ಸೇರಿ ನನ್ನನ್ನು ಲೂಯಿಸ್ ಮಾಡಿದ್ದಾರೆ. ಅಲ್ಲದೇ ಅವರನ್ನು ನಾನು ಈವರೆಗೂ ಭೇಟಿ ಆಗಿಲ್ಲ. ಇನ್ನು, ಅನೇಕರು ನನ್ನನ್ನು ಬಟ್ಲರ್ ಅವರ ಪತ್ನಿ ಎಂದು ಅಂದುಕೊಂಡಿದ್ದಾರೆ. ಏಕೆಂದರೆ ಅವರ ಆಟಕ್ಕೆ ನಾನು ಸಂಭ್ರಮಿಸಿದ್ದೇ ಕಾರಣವಾಗಿರಬಹುದು‘ ಎಂದು ಹೇಳಿದ್ದಾರೆ. ಅವರು ನೀಡಿದ ಇದೊಂದು ಹೇಳಿಕೆ ಇದೀಗ ಎಲ್ಲಡೆ ಸಖತ್ ವೈರಲ್ ಆಗುತ್ತದೆ.


ಇದನ್ನೂ ಓದಿ: Harbhajan Singh: ಈ ಬಾರಿ ಕಪ್ ಗೆಲ್ಲೋದು RCB ತಂಡವಂತೆ, ಭವಿಷ್ಯ ನುಡಿದ ಹರ್ಭಜನ್ ಸಿಂಗ್


ಬಟ್ಲರ್​ಗೆ ಈ ಬಾರಿ ಪಕ್ಕಾ ಆರೆಂಜ್ ಕ್ಯಾಪ್:


ಇನ್ನು, ಐಪಿಎಲ್ 2022ರ ಆರೆಂಜ್ ಕ್ಯಾಪ್ ರೇಸ್​ ನಲ್ಲಿ ಈಗಾಗಲೇ ಸಾಕಷ್ಟು ಮುಂದಿರುವ ಜೋಸ್ ಬಟ್ಲರ್ ಆಡಿರುವ 15 ಪಂದ್ಯದಲ್ಲಿ 718 ರನ್ ಗಳಿಸಿದ್ದಾರೆ. ಅಲ್ಲದೇ ನಂತರದ ಸ್ಥಾನದಲ್ಲಿರುವವರ ಯಾವ ತಂಡವೂ ಮುಂದಿನ ಹಂತಕ್ಕೆ ತಲುಪಿಲ್ಲ. ಹಾಗಿದ್ದರಿಂದ ಈ ಬಾರಿ ಪಕ್ಕಾ ಆರೆಂಜ್ ಕ್ಯಾಪ್ ಬಟ್ಲರ್ ಅವರಿಗೆ ಎಂದು ಹೇಳಬಹುದಾಗಿದೆ.


ಇದನ್ನೂ ಓದಿ: IPL 2022 RCB vs RR: ರಾಜಸ್ಥಾನ್ ತಂಡಕ್ಕೆ RCB ಸವಾಲ್, ಗೆದ್ದರೆ ಫೈನಲ್​ಗೆ ಎಂಟ್ರಿ ಕೊಡ್ತಾರೆ ಬೆಂಗಳೂರು ಬಾಯ್ಸ್


RR vs RCB ಸಂಭವನೀಯ ತಂಡ:


ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (c), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.


ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (c & wk), ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಓಬೇದ್ ಮೆಕಾಯ್.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು