IPL 2022: ಪ್ಲೇ ಆಫ್ ಪ್ರವೇಶಿಸಲಿದ್ಯಾ RCB? ಏನು ಹೇಳುತ್ತಿದೆ ಐಪಿಎಲ್ ಅಂಕಪಟ್ಟಿ

RCB ತಂಡವು ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಆದರೆ ಕಳೆದ 2 ಪಂದ್ಯಗಳಿಂದ ಬ್ಯಾಕ್ ಟು ಬ್ಯಾಕ್ ಸೋಲನ್ನು ಅನುಭವಿಸುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಲ್ಲದೇ ಇದರಿಂದಾಗಿ ಆರ್​ಸಿಬಿ ಪ್ಲೇ ಆಫ್ ಹಾದಿಯೂ ಮತ್ತಷ್ಟು ಕಠಿಣವಾಗುತ್ತಿದೆ.

RCB Team

RCB Team

  • Share this:
ಐಪಿಎಲ್ 2022ರ (IPL 2022) 15ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಟೂರ್ನಿಯ ಆರಂಭದಿಂದಲೂ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ. ಆದರೆ ಕಳೆದ 2 ಪಂದ್ಯಗಳಿಂದ ಬ್ಯಾಕ್ ಟು ಬ್ಯಾಕ್ ಸೋಲನ್ನು ಅನುಭವಿಸುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಲ್ಲದೇ ಇದರಿಂದಾಗಿ ಆರ್​ಸಿಬಿ ಪ್ಲೇ ಆಫ್ ಹಾದಿಯೂ ಮತ್ತಷ್ಟು ಕಠಿಣವಾಗುತ್ತಿದೆ. ಹೌದು, ಐಪಿಎಲ್​ 15ನೇ ಆವೃತ್ತಿಯ ಮೊದಲಾರ್ಧದಲ್ಲಿನ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಕೇವಲ 2ರಲ್ಲಿ ಸೋತು ಉತ್ತಮ ಸ್ಥಿಯಲ್ಲಿತ್ತು. ಆದರೆ ಟೂರ್ನಿಯ ದ್ವಿತಿಯಾರ್ಧದಲ್ಲಿ ಸತತ 2 ಸೋಲುಗಳನ್ನು ಕಂಡಿದ್ದು ಒಟ್ಟು 4 ಸೋಲುಗಳ ಮೂಲಕ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ. ಅದರಲ್ಲಿಯೂ ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಸೋತು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಬಹುದಾಗಿದೆ.

ಪ್ಲೇ ಆಫ್​ ರೇಸ್​ನಲ್ಲಿ 8 ತಂಡಗಳು:

ಐಪಿಎಲ್ 2022ರ ಪ್ಲೇ ಆಫ್ ಸುತ್ತಿನಿಂದ ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬಾಗಶಹ ಹೊರಬಿದ್ದಂತೆ ಎಂದು ಹೇಳಬಹುದು. ಆದರೆ ಉಳಿದಿರುವ 8 ತಂಡಗಳಯು ಪ್ಲೇ ಆಫ್​ ಗೆ ಸೆಣಸಾಡುತ್ತಿವೆ. ಹೀಗಾಗಿ ಆರ್​ಸಿಬಿ ತಂಡಕ್ಕೆ ಇನ್ನು ಕೇವಲ 5 ಪಂದ್ಯಗಳು ಮಾತ್ರ ಉಳಿದಿವೆ. ಅದರಲ್ಲಿ ಕನಿಷ್ಠ 4 ಪಂದ್ಯಗಳನ್ನಾದರೂ ಗೆದ್ದಲ್ಲಿ ಮಾತ್ರ ಬೆಂಗಳೂರು ತಂಡ ಈ ಬಾರಿ ಐಪಿಎಲ್​ ನಲ್ಲಿ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲಿದೆ. ಇಲ್ಲವಾದಲ್ಲಿ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

ಪ್ಲೇ ಆಫ್ ಲೆಕ್ಕಾಚಾರ:

ಇನ್ನು ಐಪಿಎಲ್ ಪ್ಲೇ ಆಫ್ ಪ್ರವೇಶಿಸುವ ಲೆಕ್ಕಾಚಾರ ನೋಡುವುದಾದರೆ, ಒಂದು ತಂಡವು 14ರಲ್ಲಿ 9 ಪಂದ್ಯಗಳನ್ನು ಗೆದ್ದು 18 ಅಂಕಗಳು ಆದಲ್ಲಿ ನೇರವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಅದರಂತೆ ಗುಜರಾತ್ ಟೈಟನ್ಸ್ 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಇನ್ನು ಕೇವಲ 2 ಪಂದ್ಯಗಳನ್ನು ಗೆದ್ದಲ್ಲಿ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಉಳಿದಂತೆ ರಾಜಸ್ಥಾನ್ ರಾಯಲ್ಸ್ ಸಹ 12 ಅಂಕಗಳೊಂದಿಗಿದ್ದು, 3 ಪಂದ್ಯಗಳ ಗೆಲುವಿನ ಅವಶ್ಯಕತೆ ಇದೆ.

ಇದನ್ನೂ ಓದಿ: Virat Kohli: 101 ಪಂದ್ಯಗಳಾದರೂ ಶತಕ ಸಿಡಿಸದ ವಿರಾಟ್, ಕೊಹ್ಲಿ ಕಳಪೆ ಫಾರ್ಮ್​ಗೆ ಕಾರಣವೇನು?

ಉಳಿದಂತೆ 3 ತಂಡ್ಗಳ ನಡುವೆ ಈ ಬಾರಿ ಭರ್ಜರಿ ಪೈಪೋಟಿಯಿದ್ದು, ಸನ್ ರೈಸರ್ಸ್ ಹೈದರಾಬಾದ್, ಲ್ಕೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಹೈದರಾಬಾದ್ ತಂಡಗಳು ಕ್ರಮವಾಗಿ 10 ಅಂಕಗೊಳೊದಿಗೆ 3, 4 ಮತ್ತು 5ನೇ ಸ್ಥಾನದಲ್ಲಿದೆ. ಆದರೆ ನೆಟ್ ರನ್ ರೇಟ್ ಮೇಲೆ ಲಕ್ನೋ ಮತ್ತು ಹೈದರಾಬಾದ್ ತಂಡಗಳು ಆರ್​ಸಿಬಿ ಗಿಂತ ಮೇಲಿದ್ದು, ಬೆಂಗಳೂರು ತಂಡಕ್ಕೆ ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಕನಿಷ್ಠ 4 ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ:

ಇನ್ನು, ಆರ್​ಸಿಬಿ ತಂಡವು ಪ್ಲೇ ಆಫ್ ಸುತ್ತಿಗೆ ಹೋಗಬೇಕಾದರೆ ಮುಂದಿನ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಲ್ಲಿ ಮಾತ್ರ 18 ಅಂಕಗಳೊಂದಿಗೆ ಪ್ಲೇ ಆಫ್ ಗೆ ಹೋಗಲಿದೆ. ಆದರೆ 5ರಲ್ಲಿ 3 ಪಂದ್ಯ ಗೆದ್ದರೆ 16 ಅಂಕ ಸಂಪಾಧಿಸುತ್ತದೆ. ಅಲ್ಲದೇ ಉಳಿದ ಲಕ್ನೋ ಮತ್ತು ಎಸ್​ಆರ್​ ಎಚ್ ತಂಡಗಳು ತಮ್ಮ 6 ಪಂದ್ಯದಲ್ಲಿ ಕೇವಲ 3ರಲ್ಲಿ ಗೆಲುವನ್ನು ಸಾಧಿಸದರೆ ಆಗ ಮತ್ತೆ ಈ 3 ತಂಡಗಳು ನೆಟ್ ರನ್ ರೇಟ್ ಮೊರೆ ಹೋಗಬೇಕಾಗುತ್ತದೆ.

ಇದನ್ನೂ ಓದಿ: IPL 2022: ಕೆಲ ಫ್ರಾಂಚೈಸಿಗಳು ನನಗೆ ದ್ರೋಹ ಬಗೆದಿವೆ, ಶಾಕಿಂಗ್ ಹೇಳಿಕೆ ನೀಡಿದ RCB ಸ್ಟಾರ್ ಬೌಲರ್

RCB ತಂಡ:

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್​ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್​ ಹ್ಯಾಸಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
Published by:shrikrishna bhat
First published: