ಐಪಿಎಲ್ 2022ರ (IPL 2022) ಲೀಗ್ ಹಂತದ ಪಂದ್ಯಗಳು ಇಂದಿಗೆ ಮುಕ್ತಾಯವಾಗಲಿದೆ. ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (MI vs DC) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 5 ವಿಕೆಟ್ ಗಳ ಜಯ ದಾಖಲಿಸಿತು. ಈ ಗೆಲುವಿನ ಹೆಚ್ಚು ಲಾಭವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಗಿದೆ. ಹೌದು, ಆರ್‌ಸಿಬಿಗೆ ಪ್ಲೇ-ಆಫ್‌ಗೆ ಹೋಗಲು ಮುಂಬೈ ಇಂಡಿಯನ್ಸ್ ಪಂದ್ಯವನ್ನು ಗೆಲ್ಲುವ ಅಗತ್ಯವಿತ್ತು. ಈ ಮೂಲಕ RCB ತಂಡ ಫ್ಲೇ ಆಫ್ ಹಂತಕ್ಕೆ ತಲುಪಿತು. ಪಂದ್ಯದ ಮೇಲಿನ ನಿರೀಕ್ಷೆ ಎಷ್ಟಿತ್ತೆಂದರೆ ಆರ್‌ಸಿಬಿ ಆಟಗಾರರು ಸಹ ಮುಂಬೈ ಮತ್ತು ಡೆಲ್ಲಿ ತಂಡದ ಪಂದ್ಯವನ್ನು ವೀಕ್ಷಿಸಿದ್ದರು. ಅಲ್ಲದೇ ಆರ್‌ಸಿಬಿಯ ಈ ಆಸೆಯನ್ನು ಮುಂಬೈ ಪೂರೈಸಿದ ತಕ್ಷಣ, ಆಟಗಾರರು ಜೋರಾಗಿ ಸಂಭ್ರಮಿಸಿದರು.
ಮುಂಬೈ ಗೆಲುವನ್ನು ಸಂಭ್ರಮಿಸಿದ ಆರ್‌ಸಿಬಿ:
ನಿನ್ನೆ ನಡೆದ ಡೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ತಂಡವು 5 ವಿಕೆಟ್ ಗಳಿಂದ ಗೆದ್ದು ಟೂರ್ನಿಗೆ ಶುಭ ವಿದಾಯ ಹೇಳಿತು. ಇತ್ತ ಮುಂಬೈ ಗೆಲುವಿಗಾಗಿ ಆರ್‌ಸಿಬಿ ತಂಡದ ಲಕ್ಷಾಂತರ ಅಭಿಮಾನಿಗಲು ಕಾತುರದಿಂದ ಕಾಯುತ್ತಿದ್ದರು. ಕೇವಲ ಅಭಿಮಾನಿಗಳಷ್ಟೇ ಅಲ್ಲದೇ ಆರ್‌ಸಿಬಿ ಆಟಗಾರರು ಸಹ ನಿನ್ನೆಯ ಪಂದ್ಯವನ್ನು ಲೈವ್ ವೀಕ್ಷಿಸಿದ್ದರು. ಆರ್‌ಸಿಬಿ ಆಟಗಾರರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ವಿರಾಟ್ ಕೊಹ್ಲಿ, ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಇಡೀ ತಂಡ ಮುಂಬೈ ಗೆಲುವನ್ನು ಸಂಭ್ರಮಿಸುತ್ತಿದೆಯಂತೆ. ಎಲ್ಲಾ ಆರ್‌ಸಿಬಿ ಆಟಗಾರರು ಪ್ಲೇ ಆಫ್‌ಗೆ ಪ್ರವೇಶಿಸಿದ ಖುಷಿಯಲ್ಲಿದ್ದಾರೆ. ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು.
RCB qualified for the playoffs for the third consecutive year. We bring to you raw emotions, absolute joy and post-match celebrations, as the team watched #MIvDC. This is how much it meant to the boys last night.@kreditbee#PlayBold #IPL2022 #Mission2022 #RCB #ನಮ್ಮRCB pic.twitter.com/5lCbEky8Xy
— Royal Challengers Bangalore (@RCBTweets) May 22, 2022
ಇನ್ನು, ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ಮುಂಬೈ ಗೆದ್ದರೆ ಬೆಂಗಳೂರು ತಂಡ ನೇರವಾಗಿ ಪ್ಲೇ ಆಫ್ ಹಂತಕ್ಕೆ ತಲುಪಲಿದೆ ಎಂಬ ಕಾರಣಕ್ಕೆ ಟ್ವೀಟರ್ ನಲ್ಲಿ RCB = ರಾಯಲ್ ಚಾಲೆಂಜರ್ಸ್ ಬಾಂಬೆ ನ್ನುವುದು ಸಖತ್ ಟ್ರೆಂಡ್ ಆಗುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಇಂದು ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿ ಎಂದು ಕೇಳಿಕೋಳ್ಳುತ್ತಿದ್ದಾರೆ.
ಇದನ್ನೂ ಓದಿ: IPL 2022 PBKS vs SRH: ಪಂಜಾಬ್ - ಹೈದರಾಬಾದ್ ಮುಖಾಮುಖಿ, ಹೇಗಿದೆ ಉಭಯ ತಂಡಗಳ ಬಲಾಬಲ
ಬ್ಲೂ ಬಣ್ಣದಲ್ಲಿ ಬದಲಾದ ಆರ್‌ಸಿಬಿ ಲೋಗೊ:
ಇನ್ನು, ಆರ್‌ಸಿಬಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ತನ್ನ ಅಧಿಕೃತ ಟ್ವಿಟರ್ ನಲ್ಲಿ ಲೊಗೋ ಬದಲಾಯಿಸಿತ್ತು. ಹೌದು, ನೀಲಿ ಬಣ್ಣದಲ್ಲಿ ಲೋಗೋವನ್ನು ಬದಲಿಸಿದ್ದು, ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ರೋಹಿತ್ ಅವರಿಗೆ ಶುಭವಾಗಲಿ. ಇಂದಿನ ಪಂದ್ಯ ಮುಂಬೈ ಗೆಲ್ಲಲಿ ಎನ್ನುವುದು ಆರ್‌ಸಿಬಿ ಅಭಿಮಾನಿಗಲ ಆಶಯ ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿತ್ತು. ಈ ಮೂಲಕ ಮುಂಬೈ - ಡೆಲ್ಲಿ ಪಂದ್ಯ ಆರ್‌ಸಿಬಿ ತಂಡಕ್ಕೆ ಎಷ್ಟು ಮುಖ್ಯವಾಗಿದೆ ಎಂದು ತಿಳಿದುಬರುತ್ತದೆ. ಆದರೆ ಇದೀಗ RCB ಮೊದಲ ರೀತಿಯ್ಲಲೇ ಹಳೆಯ ಲೋಗೋವನ್ನೇ ಮತ್ತೆ ಬದಲಿಸಿಕೊಂಡಿದೆ.
ಇದನ್ನೂ ಓದಿ: IPL 2022 MI vs DC: ಡೆಲ್ಲಿ ವಿರುದ್ಧ ಮುಂಬೈ ತಂಡಕ್ಕೆ ಗೆಲುವು, ಫ್ಲೇ ಆಫ್ ಪ್ರವೇಶಿಸಿದ RCB
RCB vs LSG ಪಂದ್ಯ:
ಕ್ವಾಲಿಫೈಯರ್‌ನ ಮೊದಲ ಪಂದ್ಯ ಮಂಗಳವಾರ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡವು ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ವಿರುದ್ಧ ಆಡಲಿದೆ. ಎಲಿಮಿನೇಟರ್‌ನಲ್ಲಿ ಸೋತ ತಂಡದ ಸವಾಲು ಅಂತ್ಯಗೊಳ್ಳಲಿದ್ದು, ಗುಜರಾತ್ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಸೋತ ತಂಡದ ವಿರುದ್ಧ ಸೆಣಸಿದರೆ, ಗೆದ್ದ ತಂಡ ಭಾನುವಾರ ಫೈನಲ್‌ಗೆ ಮೈದಾನಕ್ಕೆ ಇಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ