IPL 2022: RCB ಹೊಸ ಜೆರ್ಸಿ ಬಿಡುಗಡೆ, ಈ ಬಾರಿ ಹೊಸ ಜರ್ಸಿಯೊಂದಿಗೆ ಕಣಕ್ಕಿಳಿಯುತ್ತಿವೆ ಈ ತಂಡಗಳು

ಈ ಬಾರಿ ಅನೇಕ ತಂಡಗಳು ತಮ್ಮ ಹಳೆಯ ಜರ್ಸಿಯ ಬದಲಾಗಿ ಹೊಸ ಜರ್ಸಿಯನ್ನು ಬಿಡುಗಡೆ ಮಾಡುತ್ತಿವೆ. ಹೌದು, ಈಗಾಗಲೇ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ನಿನ್ನೆ (ಮಾರ್ಚ್ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಮ್ಮ ನೂತನ ಜರ್ಸಿಯನ್ನು ಬಿಡುಗಡೆ ಮಾಡಿದೆ.

RCB ತಂಡದ ಹೊಸ ಜರ್ಸಿ

RCB ತಂಡದ ಹೊಸ ಜರ್ಸಿ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಸೀಸನ್ 15 ಪ್ರಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಎಲ್ಲಾ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಲು ಈಗಾಗಲೇ ಟೂರ್ನಿಗೆ ಬೇಕಾದ ಸಿದ್ದತೆಗಳನ್ನು ಆರಂಭಿಸಿದೆ. ಅದಲ್ಲದೇ ಈ ಬಾರಿ ಅನೇಕ ತಂಡಗಳು ತಮ್ಮ ಹಳೆಯ ಜರ್ಸಿಯ (Jersey) ಬದಲಾಗಿ ಹೊಸ ಜರ್ಸಿಯನ್ನು ಬಿಡುಗಡೆ ಮಾಡುತ್ತಿವೆ. ಹೌದು, ಈಗಾಗಲೇ ಮುಂಬೈ ಇಂಡಿಯನ್ಸ್ (Mumbai Indians), ಡೆಲ್ಲಿ ಕ್ಯಾಪಿಟಲ್ಸ್ (Delhi Capitals ) ಮತ್ತು ನಿನ್ನೆ (ಮಾರ್ಚ್ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು ತಮ್ಮ ನೂತನ ಜರ್ಸಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ಈ ಬಾರಿ ಈ ತಂಡಗಳು ಯಾವ ರೀತಿಯ ಜರ್ಸಿಯೊಂದಿಗೆ ಕಣಕ್ಕಿಳಿಯಲಿವೆ ಎಂದು ನೋಡೋಣ ಬನ್ನಿ.

RCB ಹೊಸ ಜರ್ಸಿ ಬಿಡುಗಡೆ:

RCB ತಂಡವು ಈ ಬಾರಿ ಐಪಿಎಲ್​ ಗಾಗಿ  ನೂತನ ಜೆರ್ಸಿಯನ್ನೂ ಅನಾವರಣಗೊಳಿಸಿದೆ. ಇಷ್ಟು ವರ್ಷಗಳ ಜರ್ಸಿಗಿಂತ ಈ ಬಾರಿಯ ಜರ್ಸಿಯಲ್ಲಿ ತುಸು ಬದಲಾವಣೆ ಮಾಡಲಾಗಿದ್ದು, ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ ಹೊಸ ವಿನ್ಯಾಸದ ಉಡುಗೆಯನ್ನು ಬೆಂಗಳೂರು ಪ್ರಾಂಚೈಸಿ ಬಿಡುಗಡೆ ಮಾಡಿದೆ. ಪ್ರತಿ ಬಾರಿಯೂ ಆರ್​ಸಿಬಿ ಜೆರ್ಸಿಯಲ್ಲಿ ಕೆಂಪು ಬಣ್ಣಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿ ಎಂಬಂತೆ ಕೆಂಪು ಬಣ್ಣದ ಬದಲಿಗೆ ಕಪ್ಪು ಬಣ್ಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಕೆಳಬಾಗದಲ್ಲಿ ಕೆಂಪು ಬಣ್ಣವನ್ನು ನೀಡಲಾಗಿದೆ.

ಗಮನ ಸೆಳೆಯುತ್ತಿದೆ ಡೆಲ್ಲಿ ಕ್ಯಾಪಿಟಲ್ಸ್ ಜರ್ಸಿ:

ಡೆಲ್ಲಿ ಕ್ಯಾಪಿಟಲ್ಸ್ ಈ ಹಿಂದಿನ ಜರ್ಸಿಗಳಿಗಿಂತ ಈ ಬಾರಿ ವಿಭಿನ್ನವಾದ ರೀತಿಯ ಜರ್ಸಿಯನ್ನು ರಿಲೀಸ್ ಮಾಡಿದೆ. ಈ ಬಾರಿ ನೀಲಿ ಮತ್ತು ಕೆಂಪು ಬಣ್ಣದಿಂದ ಕೂಡಿರು ಹೊಸ ಜರ್ಸಿಯನ್ನು ಅನಾವರಣಗೊಳಿಸಿದ್ದು, ಎಲ್ಲರ ಗಮನ ಸೆಳೆಯುವಂತಿದೆ. ಇನ್ನು, ಜರ್ಸಿಯ ಬಲ ಭಾಗವು ನೀಲಿ ಬಣ್ಣದಿಂದ ಕೂಡಿದ್ದು, ಎಡಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿದೆ. ಇದರ ಜೊತೆಗೆ ತಂಡದ ಲೋಗೋ ಆಗಿರುವ ಸಿಂಹದ ಮುಖವನ್ನು ಜರ್ಸಿಯ ಮಧ್ಯಭಾಗದಲ್ಲಿ ದೊಡ್ಡದಾಗಿ ಇರಿಸಲಾಗಿದೆ.

ಇದನ್ನೂ ಓದಿ: IPL 2022: RCB ತಂಡದ ಸಂಪೂರ್ಣ ವೇಳಾಪಟ್ಟಿ, ಮಾರ್ಚ್ 27ರಂದು ಮೊದಲ ಪಂದ್ಯ

ಚಿಕ್ಕ ಬದಲಾವಣೆಯೊಂದಿಗೆ ಮುಂಬೈ ಜರ್ಸಿ ಅನಾವರಣ:

ಎಲ್ಲಾ ತಂಡಗಳಂತೆಯೇ ಈ ಬಾರಿ ಮುಂಬೈ ಇಂಡಿಯನ್ಸ್ ಸಹ ಹೊಸ ಜರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಮುಂಬೈ ತಂಡವದ ಸಾಂಪ್ರದಾಯಿಕ ನೀಲಿ ಬಣ್ಣದಲ್ಲಿಯೇ ಜರ್ಸಿ ಇರಲಿದ್ದು, ನೂತನ ಜರ್ಸಿಯಲ್ಲಿ ಚಿಕ್ಕ ಬದಲಾವಣೆ ಮಾಡಲಾಗಿದೆ. ಅದರಂತೆ ಜರ್ಸಿಯ ಕೆಳಭಾಗದಲ್ಲಿ ಅಚ್ಚು ಬಣ್ಣದ ನೀಲಿಯಯನ್ನು ನೀಡಲಾಗಿದ್ದು, ಜರ್ಸಿಯ ತುದಿಯಲ್ಲಿ ಎಂದಿನಂತೆ ಚಿನ್ನದ ಬಣ್ಣದ ಪಟ್ಟಿಯನ್ನು ನೀಡಲಾಗಿದೆ. ಇನ್ನು, ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪ್ರಾಯೊಜಕತ್ವ ಬದಲಾಗಿದ್ದು, ಸ್ಲೈಸ್​ ಕಂಪನಿಯು ಈ ಬಾರಿ ಪ್ರಯೋಜಕರಾಗಿದ್ದಾರೆ. ಹೀಗಾಗಿ ಸ್ಲೈಸ್​ ಕಂಪನಿಯ ಲೋಗೋವನ್ನು ಜರ್ಸಿಯ ಮಧ್ಯಬಾಗದಲ್ಲಿ ನೀಡಲಾಗಿದೆ.

ಇದನ್ನೂ ಓದಿ: RCB ತಂಡದ ನೂತನ ನಾಯಕನ ಘೋಷಣೆ, ಈ ಸಲ ಕಪ್ ನಮ್ದೇ ಎಂದ ಅಭಿಮಾನಿಗಳು..!

RCB ತಂಡಕ್ಕೆ ಹೊಸ ನಾಯಕ:

ಐಪಿಎಲ್​ ಸೀಸನ್ 15 ನಲ್ಲಿ ಆರ್​ಸಿಬಿ ತಂಡವನ್ನು ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ. ತಂಡದ ನಾಯಕ ಯಾರಾಗುತ್ತಾರೆ ಎನ್ನುವುದನ್ನು ಶೀಘ್ರ ಘೋಷಿಸುವುದಾಗಿ ಕೆಲ ದಿನಗಳ ಹಿಂದೆ ಆರ್​ಸಿಬಿ ಪ್ರಾಂಚೈಸಿ ತಿಳಸಿತ್ತು. ಅದರಂತೆ ನಿನ್ನೆ ನಡೆದ ಆರ್​ಸಿಬಿ ಅನ್​ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ಫಾಫ್ ಡುಪ್ಲೆಸಿಸ್ ಅವರನ್ನು ತಂಡದ ಕ್ಯಾಪ್ಟನ್ ಆಗಿ ಅಧಿಕೃತವಾಗಿ ಘೋಷಿಸಿದೆ. ಬೆಂಗಳೂರು ತಂಡವು ಮಾರ್ಚ್ 27 ರಂದು ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.
Published by:shrikrishna bhat
First published: