IPL 2022: ಕೊಹ್ಲಿ ರೆಕಾರ್ಡ್ ಮೇಲೆ `ಹಿಟ್​ ಮ್ಯಾನ್​’​ ಕಣ್ಣು! ಏನದು ಅಂಥ ದಾಖಲೆ ಅಂತೀರಾ? ನೀವೇ ನೋಡಿ..

ಮಾರ್ಚ್‌ 27 ರಂದು ಮುಂಬೈನ ವಾಂಖೆಡೆಯಲ್ಲಿ ರಿಷಬ್ ಪಂತ್ ಅವರ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಎದುರಿಸಲಿದೆ. ಇದೇ ವೇಳೆ ಮುಂಬೈ ತಂಡದ ನಾಯಕ ರೋಹಿತ್ ದೊಡ್ಡ ಮೈಲಿಗಲ್ಲಿನ ಹೊಸ್ತಿಲಲ್ಲಿದ್ದಾರೆ. ಟಿ20ಯಲ್ಲಿ ಹಿಟ್‌ಮ್ಯಾನ್‌ 10,000 ರನ್‌ಗಳು ಪೂರೈಸುವ ಹಾದಿಯಲ್ಲಿದ್ದಾರೆ.

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) 15ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದೆ. 65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳನ್ನು ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳು ಕಣಕ್ಕಿಳಿದಿದ್ದು ಟೂರ್ನಿಯ ಕುತೂಹಲವನ್ನು ಹೆಚ್ಚಿಸಿದೆ. ಈ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು(Fans) ಕೂಡ ಸಜ್ಜಾಗುತ್ತಿದ್ದಾರೆ. ಮುಂಬೈ ಇಂಡಿಯನ್ಸ್​​ ಒಟ್ಟಾರೆ 5 ಐಪಿಎಲ್ ಟ್ರೋಫಿ(IPL Trophy)ಗಳನ್ನು ಗೆದ್ದಿದೆ. ಈ  ಬಾರಿಯೂ ಕೂಡ ಪ್ರಶಸ್ತಿ ಗೆಲ್ಲುವ ಪ್ರಮುಖ ತಂಡಗಳಲ್ಲಿ ಮುಂಬೈ ಇಂಡಿಯನ್ಸ್(Mumbai Indians)​ ಒಂದಾಗಿದೆ.ಇದು ಮುಂಬೈ ನಾಯಕ ರೋಹಿತ್ ಶರ್ಮಾ(Mumbai Captain Rohit Sharma) ಅವರು ಟೀಂ ಇಂಡಿಯಾ(Team India)ದ ಹೊಸ ಪೂರ್ಣ ಸಮಯದ ನಾಯಕರಾದ ನಂತರ ಅವರ ಮೊದಲ IPL ಸೀಸನ್ ಆಗಿದೆ. ಇದಕ್ಕೂ ಮೊದಲು ಹಿಟ್‌ಮ್ಯಾನ್‌(Hitman)ನ ಅಡಿಯಲ್ಲಿ ಮುಂಬೈ ಐದು ಪ್ರಶಸ್ತಿಗಳನ್ನು ಗೆದ್ದಿದೆ.

ಕಿಂಗ್​ ಕೊಹ್ಲಿ ದಾಖಲೆ ಮುರಿಯಲಿರುವ ರೋಹಿತ್​ ಶರ್ಮಾ!

ಮಾರ್ಚ್‌ 27 ರಂದು ಮುಂಬೈನ ವಾಂಖೆಡೆಯಲ್ಲಿ ರಿಷಬ್ ಪಂತ್ ಅವರ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಎದುರಿಸಲಿದೆ. ಇದೇ ವೇಳೆ ಮುಂಬೈ ತಂಡದ ನಾಯಕ ರೋಹಿತ್ ದೊಡ್ಡ ಮೈಲಿಗಲ್ಲಿನ ಹೊಸ್ತಿಲಲ್ಲಿದ್ದಾರೆ. ಟಿ20ಯಲ್ಲಿ ಹಿಟ್‌ಮ್ಯಾನ್‌ 10,000 ರನ್‌ಗಳು ಪೂರೈಸುವ ಹಾದಿಯಲ್ಲಿದ್ದಾರೆ. ರೋಹಿತ್ ಈಗಾಗಲೇ ರಾಷ್ಟ್ರೀಯ ತಂಡ ಮತ್ತು ಐಪಿಎಲ್‌ಗಾಗಿ ಟಿ20 ಮಾದರಿಯಲ್ಲಿ 9895 ರನ್ ಗಳಿಸಿದ್ದಾರೆ. ಮ್ಯಾಜಿಕ್ ಸಂಖ್ಯೆ 10,000 ತಲುಪಲು ಅವರಿಗೆ ಇನ್ನೂ 105 ರನ್‌ಗಳ ಅಗತ್ಯವಿತ್ತು.
10 ಸಾವಿರ ರನ್​ ಪೂರ್ಣಗೊಳಿಸುವ ತವಕದಲ್ಲಿ ರೋಹಿತ್!




ಭಾರತ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಶತಕ ಸಿಡಿಸಿದವರಲ್ಲಿ ನಾಲ್ಲು ರೋಹಿತ್ ಶರ್ಮಾನದ್ದೇ ಆಗಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯೂ ರೋಹಿತ್ ಹೆಸರಿನಲ್ಲಿದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಈಗಾಗಲೇ 10,000 ರನ್ ಗಳಿಸಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8123 ರನ್ ಗಳಿಸಿದ್ದಾರೆ. ರೋಹಿತ್ ಶೀಘ್ರದಲ್ಲೇ ರೆಡ್ ಬಾಲ್ ಕ್ರಿಕೆಟ್‌ನಲ್ಲಿ 10,000 ರನ್ ಪೂರ್ಣಗೊಳಿಸುವ ಭರವಸೆಯಲ್ಲಿದ್ದಾರೆ.

ಇದನ್ನೂ ಓದಿ: ಐಪಿಎಲ್​ ಇತಿಹಾಸದಲ್ಲೇ ಹೆಚ್ಚಿನ ಗೆಲುವು ದಾಖಲಿಸಿದ ಟಾಪ್​ 4 ತಂಡಗಳು ಇವು.. ಆರ್​​ಸಿಬಿನೂ ಇದೇ ರೀ!

10 ಸಾವಿರ ರನ್​ಗಳಿಸಿದ ಏಕೈಕ ಭಾರತೀಯ ಕೊಹ್ಲಿ!

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ 10,000 ಟಿ20 ರನ್‌ಗಳ ಎಲೈಟ್ ಕ್ಲಬ್‌ನಲ್ಲಿರುವ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ರೋಹಿತ್ ಈ ದಾಖಲೆ ಸರಿಗಟ್ಟಲು ರೆಡಿಯಾಗಿದ್ದಾರೆ. ರೋಹಿತ್ 2007 ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು ಮತ್ತು ಈಗಾಗಲೇ 370 ಟಿ20 ಗಳಲ್ಲಿ ಆಡಿದ್ದಾರೆ. ಈ ದಾಖಲೆಯನ್ನು ಮಾಡಿ ವಿರಾಟ್​ ಕೊಹ್ಲಿ ಅವರನ್ನು ಹಿಂದಿಕ್ಕಲು ರೋಹಿತ್ ಶರ್ಮಾ ಸಜ್ಜಾಗಿದ್ದಾರೆ.

ಅತಿ ಹೆಚ್ಚು ಗೆಲುವು ದಾಖಲಿಸಿರೋ ಮುಂಬೈ ಇಂಡಿಯನ್ಸ್​ 

ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ 2008- 2021ರ ಆವೃತ್ತಿಯವರೆಗೆ ಒಟ್ಟು 217 ಪಂದ್ಯಗಳನ್ನು ಆಡಿದೆ. ಇದರಲ್ಲಿ 125 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 88 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. 4 ಪಂದ್ಯಗಳು ಟೈ ಆಗಿದೆ. ಹಾಗಾಗಿ ಮುಂಬೈ ಇಂಡಿಯನ್ಸ್ ತಾನು ಆಡಿದ ಪಂದ್ಯಗಳ ಪೈಕಿ 57.6 ಪ್ರತಿಶತ ಪಂದ್ಯಗಳನ್ನು ಗೆದ್ದು ಕೊಂಡಂತಾಗಿದೆ.

ಇದನ್ನೂ ಓದಿ: ಈ ಮೂರು ಕಾರಣಗಳು ಆರ್​ಸಿಬಿಗೆ ಮಾರಕವಾಗಲಿದ್ಯಂತೆ! ಸರಿಪಡಿಸಿಕೊಳ್ಳದಿದ್ರೆ ಈ ಬಾರಿಯ ಪ್ಲೇ ಆಫ್​ ಕನಸು ಭಗ್ನ?

ನಾಲ್ಕನೇ ಸ್ಥಾನದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು!

ಇಲ್ಲಿಯವರೆಗೂ ಐಪಿಎಲ್​ ಕಪ್​ ಗೆಲ್ಲದಿದ್ದರೂ, ಆರ್​ಸಿಬಿ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಈವರೆಗೆ 212 ಪಂದ್ಯಗಳನ್ನು ಆಡಿದ್ದು 98 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 106 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು 3 ಟೈ ಪಂದ್ಯಗಳನ್ನು ಕಂಡಿದೆ.

Published by:Vasudeva M
First published: