Rohit Sharma: ರೋಹಿತ್ ಬಳಿ ಇರುವ ಕಾರುಗಳ ಕಲೆಕ್ಷನ್ ನೋಡಿದ್ರೆ ಶಾಕ್ ಆಗ್ತಿರಾ! ವಿಶ್ವದ ಅತ್ಯಂತ ವೇಗದ SUV ಒಡೆಯ ಹಿಟ್​ಮ್ಯಾನ್

ಮೊದಲಿನಿಂದಲೂ ಕಾರಗಳ ಬಗ್ಗೆ ಸಖತ್ ಕ್ರೇಜ್​ ಹೊಂದಿರುವ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಬಳಿ ಅನೇಕ ಐಷಾರಾಮಿ ಕಾರಿಗಳ ಕಲೇಕ್ಷನ್ ಇದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • Share this:
ಐಪಿಎಲ್ 2022 (IPL 2022) ರಲ್ಲಿ ಮುಂಬೈ ಇಂಡಿಯನ್ಸ್ (MI) ಪ್ರದರ್ಶನ ನಿರಾಶಾದಾಯಕವಾಗಿತ್ತು. 14 ಪಂದ್ಯಗಳಲ್ಲಿ 10ರಲ್ಲಿ ಸೋತಿರುವ ಮುಂಬೈ ಈ ವರ್ಷ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಸತತ 5 ಬಾರಿ ಐಪಿಎಲ್ ಗೆದ್ದಿರುವ ಮುಂಬೈನ ಐಪಿಎಲ್ ಇತಿಹಾಸದಲ್ಲಿ ಇದು ಅತ್ಯಂತ ಕಳಪೆ ಪ್ರದರ್ಶನ ಎಂದು ಹೇಳಬಹುದಾಗಿದೆ. ಲೀಗ್ ಹಂತದಿಂದ ಮುಂಬೈ ಇಂಡಿಯನ್ಸ್ ಹೊರಬಿದ್ದ ನಂತರ ತಂಡದ ಎಲ್ಲಾ ಆಟಗಾರರು ಬಯೋ ಬಬಲ್‌ನಿಂದ ಹೊರಬಂದರು. ಮುಂಬೈ ನಾಯಕ ರೋಹಿತ್ ಶರ್ಮಾ (Rohit Sharma) ಎಲ್ಲಾ ಆಟಗಾರರಿಗೆ ವಿದಾಯ ಹೇಳಿ ಕೊನೆಯದಾಗಿ ಅವರು ಮನೆಗೆ ತೆರಳಿದ್ದರು. ಇದಾದ ಬಳಿಕ ಅವರು ಇದೀಗ ಪತ್ನಿ ಹಾಗೂ ಮಗುವಿನ ಜೊತೆ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಇದರ ನಡುವೆ ಅವರು ಬಯೋ ಬಬಲ್ ನಿಂದ ಹೊರ ನಡೆಯುವಾಗ ಅವರ ಕಾರು (Car) ಸಖತ್ ವೈರಲ್ ಆಗಿದೆ.

ಲಂಬೋರ್ಗಿನಿ ಉರುಸ್ ಮಾಲೀಕ ಹಿಟ್​ಮ್ಯಾನ್:

ಇನ್ನು, ಮೊದಲಿನಿಂದಲೂ ಕಾರಗಳ ಬಗ್ಗೆ ಸಖತ್ ಕ್ರೇಜ್​ ಹೊಂದಿರುವ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಬಳಿ ಅನೇಕ ಐಷಾರಾಮಿ ಕಾರಿಗಳ ಕಲೇಕ್ಷನ್ ಇದೆ. ಆದರೆ ಅವರು ಈ ಬಾ ರಿ ಐಪಿಎಲ್ 2022ರ ಬಯೋಬಬಲ್ ನಿಂದ ಹೊರ ನಡೆಯುವಾಗ ಹೊಸ ಲಂಬೋರ್ಗಿನಿ ಉರುಸ್ ನಲ್ಲಿ ತೆರಳಿದ್ದಾರೆ. ಇದರ ವಿಡಿಯೋ ವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಅದೇ ವಿಡಿಯೋ ಇದೀಗ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

3.15 ಕೋಟಿ ಬೆಲೆಯ ಲಂಬೋರ್ಗಿನಿ:

ರೋಹಿತ್ ಶರ್ಮಾ ಅವರ ಹೊಸ ಲಂಬೋರ್ಗಿನಿ ಉರುಸ್ ಕಾರಿನ ಬೆಲೆ 3.15 ಕೋಟಿ ರೂ. ಐಪಿಎಲ್ ಆರಂಭಕ್ಕೂ ಮುನ್ನ ಮಾರ್ಚ್‌ನಲ್ಲಿ ರೋಹಿತ್ ಈ ಕಾರನ್ನು ಖರೀದಿಸಿದ್ದರು. ರೋಹಿತ್ ಶರ್ಮಾಗೆ ನೀಲಿ ಬಣ್ಣದ ಕಾರುಗಳ ಕ್ರೇಜ್ ಇದೆ. ಇದಕ್ಕೂ ಮೊದಲು ರೋಹಿತ್ ಬಳಿ ನೀಲಿ ಬಣ್ಣದ ಬಿಎಂಡಬ್ಲ್ಯು ಎಂ5 ಕಾರು ಇತ್ತು.

ಇದನ್ನೂ ಓದಿ: Rajat Patidar: RCB ಆಟಗಾರನ ಬದುಕು ಬದಲಿಸಿತು ಒಂದೇ ಒಂದು ಫೋನ್​ ಕಾಲ್; IPLಗಾಗಿ ಮದುವೆ ಪೋಸ್ಟ್​ಪೋನ್​​

ಲಂಬೋರ್ಗಿನಿ ಉರುಸ್ ವಿಶ್ವದ ಅತ್ಯಂತ ವೇಗದ SUV:

ಲಂಬೋರ್ಗಿನಿ ಉರುಸ್ ವಿಶ್ವದ ಅತ್ಯಂತ ವೇಗದ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ SUV ಗಳಲ್ಲಿ ಒಂದಾಗಿದೆ. ಇದಲ್ಲದೇ ರೋಹಿತ್ ವರ್ಲಿಯಲ್ಲಿರುವ 53 ಅಂತಸ್ತಿನ ಕಟ್ಟಡದ 29ನೇ ಮಹಡಿಯಲ್ಲಿ ಐಷಾರಾಮಿ ಮನೆಯನ್ನೂ ತೆಗೆದುಕೊಂಡಿದ್ದಾರೆ. ರೋಹಿತ್ ಮನೆಯ ಮೌಲ್ಯ 30 ಕೋಟಿ ಎಂದು ಹೇಳಲಾಗುತ್ತಿದೆ.

ರೋಹಿತ್ ಬಳಿ ಇರುವ ಕಾರುಗಳ ಕಲೇಕ್ಷನ್ ಹೇಗಿದೆ ಗೊತ್ತಾ?:

ರೋಹಿತ್ ಶರ್ಮಾ ಬಳಿ ಅನೇಕ ಐಶಾರಾಮಿ ಕಾರುಗಳ ಕಲೇಕ್ಷನ್ ಇದೆ. ಅವುಗಳು ಯಾವುವೆಂದು ನೋಡುವುದಾರೆ
1. ಸ್ಕೋಡಾ ಲಾರಾ - 12.92 ಲಕ್ಷ
2. ಟೊಯೋಟಾ ಫಾರ್ಚುನರ್ - 35.15 ಲಕ್ಷ
3. BMW X3 - 56.50 ಲಕ್ಷ
4. BMW M5 [ಫಾರ್ಮುಲಾ ಒನ್ ಆವೃತ್ತಿ] - 1.55 ಕೋಟಿ
5. ಮರ್ಸಿಡಿಸ್ GLS 350D -1.05 ಕೋಟಿ
6. ಲಂಬೋರ್ಗಿನಿ ಉರುಸ್ - 3.15 ಕೋಟಿ

ಇದನ್ನೂ ಓದಿ: Rohit Sharma: ಐಪಿಎಲ್ ನಂತರ ಮಾಲ್ಡೀವ್ಸ್‌ಗೆ ಹಾರಿದ ರೋಹಿತ್, ರಿತಿಕಾ ಜೊತೆಗಿನ ಕ್ಯೂಟ್ ಫೋಟೋ ಹಂಚಿಕೊಂಡ ಹಿಟ್​ಮ್ಯಾನ್

ಮಾಲ್ಡೀವ್ಸ್‌ ಪ್ರವಾಸದಲ್ಲಿರುವ ಹಿಟ್​ಮ್ಯಾನ್:

ಐಪಿಎಲ್ ನಂತರ, ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಅವರೊಂದಿಗೆ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ರೋಹಿತ್ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20I ಸರಣಿಯಿಂದ ದೂರವಿರುವ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ಗೆ ರೋಹಿತ್ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ.
Published by:shrikrishna bhat
First published: