IPL 2022 RCB vs RR: ಈ ಸಲನೂ ಕಪ್ ನಮಗೆ ಸಿಗ್ಲಿಲ್ಲ, ಬೆಂಗಳೂರಿಗರ ದುಃಖ ಕೇಳೋರ್ಯಾರು?

ರಾಜಸ್ಥಾನ್ ತಂಡವು 18.1 ಓವರ್​ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಜಯ ದಾಖಲಿಸಿತು ಈ ಮೂಲಕ ರವಿವಾರ ನಡೆಯುವ ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಲಿವೆ.

ಫೈನಲ್ ಪ್ರವೇಶಿಸಿದ ರಾಜಸ್ಥಾನ್

ಫೈನಲ್ ಪ್ರವೇಶಿಸಿದ ರಾಜಸ್ಥಾನ್

  • Share this:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ (RCB vs RR)  ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಡಿದವು. ಈ ಪಂದ್ಯದಲ್ಲಿ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ RCB ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ (RR) ತಂಡವು 18.1  ಓವರ್​ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಜಯ ದಾಖಲಿಸಿತು. ಈ ಮೂಲಕ ರವಿವಾರ ನಡೆಯುವ ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ತಂಡಗಳು ಸೆಣಸಾಡಲಿವೆ.

ಮತ್ತೆ ಅಬ್ಬರಿಸಿದ ಪಾಟಿದಾರ್:

ಇನ್ನು,  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ  RCB ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಕಳೆದ ಪಂದ್ಯದ ಶತಕ ವೀರ ರಜತ್ ಪಾಟಿದಾರ್ ಮತ್ತೆ ಅಬ್ಬರಿಸಿದ್ದಾರೆ.

ಅವರು 42 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿದರು. ಉಳಿದಂತೆ ವಿರಾಟ್ ಕೊಹ್ಲಿ 7 ರನ್, ನಾಯಕ ಪಾಫ್ ಡುಪ್ಲೇಸಿಸ್ 25 ರನ್, ಗ್ಲೇನ್ ಮ್ಯಾಕ್ಸ್ ವೆಲ್ 24 ರನ್, ಮಹಿಪಾಲ್ ಲೊರ್ಮೊರ್ 8 ರನ್, ದಿನೇಶ್ ಕಾರ್ತಿಕ್ 6 ರನ್, ಶಬಾಝ್ ಅಹ್ಮದ್ 12 ರನ್ ಮತ್ತು ಹರ್ಷಲ್ ಪಟೇಲ್, ಹ್ಯಾಜಲ್ವುಡ್ ತಲಾ 1 ರನ್ ಗಳಿಸುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಲು ಸಹಾಯಕರಾದರು.

ಇದನ್ನೂ ಓದಿ: IPL 2022: ವಿಶೇಷ ದಾಖಲೆಯ ಹೊಸ್ತಿಲಲ್ಲಿ ರಾಜಸ್ಥಾನ್ ತಂಡದ ಪವರ್ ಹಿಟ್ಟರ್, ಆರೆಂಜ್ ಕ್ಯಾಪ್ ರೇಸ್​ನಲ್ಲಿ ಬಟ್ಲರ್

ರಾಜಸ್ಥಾನ್ ದಾಳಿಗೆ ತತ್ತರಿಸಿದ ಆರ್​ಸಿಬಿ:

ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ತಂಡದ ನಿರ್ಧಾರ ಸರಿಯಾಗಿತ್ತು. ರಾಜಸ್ಥಾನ್ ತಂಡದ ಬೌಲರ್ ಗಳು ಆರ್​ಸಿಬಿ ಬ್ಯಾಟರ್​ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅದರಂತೆ ರಾಜಸ್ಥಾನ್ ಪರ ಪ್ರಸಿದ್ಧ ಕೃಷ್ಣ ಮತ್ತು ಓಬೆಡಡ್ ಮೆಕಾಯ್ ತಲಾ 3 ವಿಕೆಟ್ ಪಡೆಯುವ ಮೂಲಕ ಬೆಂಗಳೂರು ತಂಡದ ಕುಸಿತಕ್ಕೆ ಕಾರಣರಾದರು. ಉಳಿದಂತೆ ಟ್ರಂಟ್ ಬೋಲ್ಟ್ ಮತ್ತು ರವಿಚಂದ್ರನ್ ಅಶ್ವೀನ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: Virat Kohli: ಮಹತ್ವದ ಪಂದ್ಯದಲ್ಲಿ ಎಡವಿದ ಕೊಹ್ಲಿ, ಹೇಗಿದೆ ನೋಡಿ ನಾಕೌಟ್‌ನಲ್ಲಿ ವಿರಾಟ್ ಸಾಧನೆ

ಶತಕ ಸಿಡಿಸಿ ಸಂಭ್ರಮಿಸಿದ ಬಟ್ಲರ್:

ಬೆಂಗಳೂರು ನೀಡಿದ 158 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ರಾಜಸ್ಥಾನ್ ತಂಡ 18.1  ಓವರ್​ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ 7 ವಿಕೆಟ್ ಗಳ ಜಯ ದಾಖಲಿಸಿತು. ಈ ಮೂಲಕ ರವಿವಾರ ನಡೆಯುವ ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಲಿವೆ.

ರಾಜಸ್ಥಾನ್ ಪರ ಜಾಸ್ ಬಟ್ಲರ್ 60 ಎಸೆತದಲ್ಲಿ 6 ಸಿಕ್ಸ್ ಮತ್ತು 10 ಪೋರ್​ ಗಳ ನೆರವಿನಿಂದ ಆಕರ್ಷಕ ಶತಕ ಸಿಡಿಸಿದರು. ಅವರು 106 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ರುವಾರಿಯಾದರು. ಉಳಿದಂತೆ ಜೈಸ್ವಾಲ್ 21 ರನ್, ನಾಯಕ ಸಮಜು ಸ್ಯಾಮ್ಸನ್ 23 ರನ್, ದೇವದತ್ ಪಡ್ಡಿಕಲ್ 9 ರನ್ ಮತ್ತು ಹಿಟ್​ಮಯಾರ್ 2 ರನ್ ಗಳಿಸುವ ಮೂಲಕ ಬಟ್ಲರ್​ ಗೆ ಸಾಥ್ ನೀಡಿದರು.
Published by:shrikrishna bhat
First published: