ಐಪಿಎಲ್ನ (IPL 2022) 3ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ತಂಡಗಳು ಸೆಣಸಾಡುತ್ತಿದೆ. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಾಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡು, ಆರ್ಸಿಬಿ ತಂಡವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿತು. ಆದರೆ ಮಾಯಾಂಕ್ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ ಆರ್ಸಿಬಿ ಹುಡುಗರು ಈ ಬಾರಿ ಐಪಿಎಲ್ನ 3ನೇ ಪಂದ್ಯದಲ್ಲಿಯೇ 200 ರ ಗಡಿ ದಾಟಿಸಿದ್ದಾರೆ. ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದೆ. ಈ ಬಾರಿ ಹೊಸ ನಾಯಕನಾಗಿ ಆರ್ಸಿಬಿ ಗೆ ಆಯ್ಕೆ ಆಗಿರುವ ಫಾಫ್ ಡುಪ್ಲೆಸಿಸ್ (Faf du plessis) ಬಿರುಸಿನ ಆಟದಿಂದ ಹೊಸ ಬರಸವಸೆಯನ್ನು ಮೂಡಿಸಿದ್ದಾರೆ.
ಉತ್ತಮ ಆರಂಭ ನೀಡಿದ ಪಾಫ್ -ರಾವತ್ ಜೋಡಿ:
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆ ಅನೂಜ್ ರಾವತ್ ಇನಿಂಗ್ಸ್ ಆರಂಭಿಸಿ ಭದ್ರ ಅಡಿಪಾಯ ಹಾಕಿದರು. ಮೊದಲ ವಿಕೆಟ್ಗೆ 50 ರನ್ಗಳ ಜೊತೆಯತಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು ನಂತರ ವಿರಾಟ್ ಕೊಹ್ಲಿ ಜೊತೆ ಅಬ್ಬರಿಸಿದ ಫಾಫ್ ಡುಪ್ಲೆಸಿಸ್ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ನಾಯಕನಾಗಿ ಅಬ್ಬರಿಸಿದ ಫಾಫ್:
ಅರ್ಧಶತಕದ ಬಳಿಕ ಅಬ್ಬರಿಸಲು ಆರಂಭಿಸಿದ ಫಾಫ್ ಸಿಕ್ಸ್ಗಳ ಮೇಲೆ ಸಿಕ್ಸ್ ಸಿಡಿಸಿದರು. ಡುಪ್ಲೇಸಿಸ್ 57 ಎಸೆತಗಳಲ್ಲಿ 3 ಫೋರ್ ಜೊತೆಗೆ ಅಬ್ಬರದ 7 ಸಿಕ್ಸ್ಗಳ ನೆರವಿನಿಂದ ಬರೋಬ್ಬರಿ 88 ರನ್ ಗಳಿಸಿದರು. ಇದೇ ವೇಳೆ 65 ರನ್ ಗಳಿಸಿದ ವೇಳೆ ಫಾಫ್ ಐಪಿಎಲ್ನಲ್ಲಿ 3 ಸಾವಿರ ರನ್ ಪೂರೈಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಐಪಿಎಲ್ನಲ್ಲಿ 101 ಪಂದ್ಯಗಳನ್ನಾಡಿರುವ ಡುಪ್ಲೆಸಿಸ್ 94 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 23 ಅರ್ಧಶತಕದೊಂದಿಗೆ 3 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: IPL 2022 PBKS vs RCB Head to Head: ಆರ್ಸಿಬಿ vs ಪಂಜಾಬ್: ಎಬಿ ಡಿವಿಲಿಯರ್ಸ್ ಇಲ್ಲದ ಮ್ಯಾಚಲ್ಲಿ ಬೆಂಗಳೂರು ಗೆಲ್ಲುತ್ತಾ?
ಗೆಲುವಿನ ಬರವಸೆ ಮೂಡಿಸಿರುವ ಫಾಫ್:
ಈಗಾಗಲೇ ಐಪಿಎಲ್ ನಲ್ಲಿ ಮೂರು ತಂಡಗಳ ಪರ ಆಡಿರುವ ಫಾಫ್ ಈ ಬಾರಿ ಆರ್ಸಿಬಿ ಪರ ನಾಯಕನಾಗಿ ಮೊದಲ ಪಂದ್ಯವನ್ನು ಆಡಿದ್ದಾರೆ. ಅಲ್ಲದೇ ಮೊದಲ ಪಂದ್ಯದಲ್ಲಿಯೇ ಅಬರಬಿಸಿರುವ ಡುಪ್ಲೇಸಿಸ್ ಈ ಬಾರಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಕಪ್ ಗೆಲ್ಲುವ ಆಸೆಯನ್ನು ಈಡೇರಿಸುವ ಮುನ್ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ ನಾಯಕನಾಗಿ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ:
ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡವು ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದೆ. ಆರ್ಸಿಬಿ ಪರ ಫಾಫ್ 88, ಅನೂಜ್ ರಾವತ್ 21, ಕೊಹ್ಲಿ 41 ಮತ್ತು ದಿನೇಶ್ ಕಾರ್ತಿಕ್ 31 ರನ್ ಗಳಿಸಿ ಮಿಂಚಿದರು.
ಇದನ್ನೂ ಓದಿ: IPL 2022: ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಸೋಲು, ಇಶಾನ್ ಕಿಶನ್ ಅರ್ಧ ಶತಕ ವ್ಯರ್ಥ
RCB ಮತ್ತು PBKS ತಂಡಗಳು:
ಆರ್ಸಿಬಿ ತಂಡ: ಫಾಫ್ ಡುಪ್ಲೆಸಿಸ್, ಅನೂಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫಾನ್ ರುದರ್ಫೋರ್ಡ್, ದಿನೇಶ್ ಕಾರ್ತಿಕ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್
ಪಂಜಾಬ್ ಕಿಂಗ್ಸ್ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್ಸ್ಟೋನ್, ಭಾನುಕಾ ರಾಜಪಕ್ಸೆ (ವಿಕೆಟ್ ಕೀಪರ್), ಶಾರುಖ್ ಖಾನ್, ಒಡಿಯನ್ ಸ್ಮಿತ್, ರಾಜ್ ಬಾವಾ, ಅರ್ಷ್ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ