20-20 ಪಂದ್ಯಗಳು ಅಂದರೆ ನಮ್ಮ ಕ್ರೀಡಾಭಿಮಾನಿಗಳಿಗೆ ಪಂಚ ಪ್ರಾಣ. ಅದರಲ್ಲೂ ಐಪಿಎಲ್(IPL) ಬಂತು ಅಂದರೆ ಸಾಕು ಅದು ಹಬ್ಬ.. ಪಂದ್ಯ ನಡೆಯುವ ಅಷ್ಟು ದಿನಗಳನ್ನೂ ಹಬ್ಬದಂತೆ ಆಚರಿಸುತ್ತಾರೆ. ಐಪಿಎಲ್ 2022ಕ್ಕೆ ಮಾರ್ಚ್ 26ರಂದು ಚಾಲನೆ ಸಿಕ್ಕಿದೆ.65 ದಿನಗಳ ಅವಧಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳು ನಡೆಯಲಿದೆ. ಈ ಬಾರಿ ಹತ್ತು ತಂಡಗಳು(10 Teams) ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿರುವುದು ಟೂರ್ನಿಯ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಮಾರ್ಚ್ 27ರಂದು ಆರ್ಸಿಬಿ ವರ್ಸಸ್ ಪಂಜಾಬ್(RCB v/s PK) ಮುಖಾಮುಖಿಯಾಗಲಿದೆ. ಟೂರ್ನಿಯ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಆರ್ಸಿಬಿ(RCB) ಸೆಣೆಸಾಟ ನಡೆಸುವ ಮೂಲಕ ಈ ಬಾರಿಯ ಟೂರ್ನಿಯ ಅಭಿಯಾನ ಆರಂಭಿಸಲಿದೆ. ಆರ್ಸಿಬಿ ತಂಡದ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್(Faf Du Plessis) ವಹಿಸಿಕೊಂಡಿದ್ದರೆ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ವಹಿಸಿಕೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಗೆಲ್ಲೋದ್ಯಾರು?
ಆರ್ಸಿಬಿ ತಂಡ ಈ ಬಾರಿಯ ಟೂರ್ನಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಕಾರಣ ಈ ಪಂದ್ಯದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ ಈ ಬಾರಿ ವಿರಾಟ್ ಕೊಹ್ಲಿ ಕೇವಲ ಆಟಗಾರನಾಗಿ ಮಾತ್ರವೇ ಕಣಕ್ಕಿಳಿಯುತ್ತಿದ್ದು ನಾಯಕತ್ವದ ಹೊರೆಯನ್ನು ಕಳಚಿಟ್ಟು ಆಡಲು ಸಜ್ಜಾಗಿದ್ದಾರೆ. ನಿನ್ನೆಯ ಪಂದ್ಯದಲ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿ ಗ್ರೌಂಡ್ಗೆ ಇಳಿದಿದ್ದ ಎಂ.ಎಸ್ ಧೋನಿ ಮೂರು ವರ್ಷದ ಬಳಿಕ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಜೊತೆಗೆ ವಿರಾಟ್ ಬಿಟ್ಟು ಈ ಮೂವರು ಆಟಗಾರರ ಮೇಲೆ ಆರ್ಸಿಬಿ ಅಭಿಮಾನಿಗಳ ಕಣ್ಣಿದೆ.
ವಿರಾಟ್ ಕೊಹ್ಲಿ
ನಾಯಕತ್ವದ ಒತ್ತಡದಿಂದ ಹೊರಬಂದಿರುವ ಕಾರಣ ಕೊಹ್ಲಿ ಬ್ಯಾಟಿಂಗ್ ಮೇಲೆ ಎಲ್ಲರ ನಿರೀಕ್ಷೆಯೂ ಹೆಚ್ಚಾಗಿದೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಬ್ಯಾಟ್ನಿಂದ ದೊಡ್ಡ ಮೊತ್ತದ ರನ್ಗಳ ಬಾರದ ಕಾರಣ ಕೊಹ್ಲಿ ಐಪಿಎಲ್ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಹಾತೊರೆಯುತ್ತಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ ಆಟ ಆಡಿದ ಧೋನಿ.. 3 ವರ್ಷದ ಬಳಿಕ 50 ರನ್ ಸ್ಕೋರ್ ಮಾಡಿದ ಮಾಹಿ!
ಫಾಫ್ ಡು ಪ್ಲೆಸಿಸ್
ಈ ಬಾರಿ ಆರ್ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿರುವ ಫಾಫ್ ಡು ಪ್ಲೆಸಿಸ್ ಕಳೆದ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೀಗ ಆರ್ಸಿಬಿ ತಂಡದಲ್ಲಿಯೂ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ನಾಯಕತ್ವ ಕೂಡ ವಹಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ವನಿಂದು ಹಸರಂಗ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಫ್ರಾಂಚೈಸಿ ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗಾ ಅವರನ್ನು ಮತ್ತೊಮ್ಮೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಯುಜುವೇಂದ್ರ ಚಾಹಲ್ ಬದಲಿಗೆ ತಂಡದ ಪ್ರಮುಖ ಸ್ಪಿನ್ನರ್ ಆಗಿ ಹಸರಂಗಾ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಚುಟುಕು ಸಮರಕ್ಕೆ ಸಿಕ್ತು ಚಾಲನೆ.. ಟಾಸ್ ಗೆದ್ದು ಚೇಸಿಂಗ್ ಚೂಸ್ ಮಾಡಿದ್ದೇಕೆ ಶ್ರೇಯಸ್? ಅದಕ್ಕೂ ಕಾರಣವಿದೆ!
ಹರ್ಷಲ್ ಪಟೇಲ್
ಕಳೆದ ಭಾರಿಯ ಐಪಿಎಲ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಹರ್ಷಲ್ ಪಟೇಲ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಈ ಬಾರಿಯ ಆವೃತ್ತಿಗೂ ಹರ್ಷಲ್ ಪಟೇಲ್ ಅವರನ್ನು ಆರ್ಸಿಬಿ ಮತ್ತೆ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಅಂತ ಆರ್ಸಿಬಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ