ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 60ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಇಂದಿನ ಪಂದ್ಯವು ಪಂಜಾಬ್ ತಂಡಕ್ಕಿಂತ ಹೆಚ್ಚಾಗಿ ಬೆಂಗಳೂರು ತಂಡಕ್ಕೆ ಮಹತ್ವದ್ದಾಗಿದೆ. ಪ್ಲೇ ಆಫ್ (Play Off) ಹಂತಕ್ಕೆ ತಲುಪುವ ನಿಟ್ಟಿನಲ್ಲಿ ಆರ್ಸಿಬಿ (RCB) ತಂಡಕ್ಕೆ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಇದಲ್ಲವಾದಲ್ಲಿ ಬೆಂಗಳೂರು ತಂಡಕ್ಕೆ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಇತ್ತ ಪಂಜಾಬ್ ತಂಡಕ್ಕೆ ಇನ್ನೂ ಪ್ಲೇ ಆಫ್ ಬಾಗಿಲು ತೆರೆದಿದ್ದು, ಪಂಜಾಬ್ ಸಹ ಇಂದಿನ ಪಂದ್ಯವನ್ನು ಉತ್ತಮ ರನ್ ರೇಟ್ ನಲ್ಲಿ ಗೆಲ್ಲುವ ಮೂಲಕ ಪ್ಲೇ ಆಫ್ ರೇಸ್ ನಲ್ಲಿ ಉಳಿದುಕೊಳ್ಳಬಹುದಾಗಿದೆ.
ಪಂದ್ಯದ ವಿವರ:
ಐಪಿಎಲ್ 2022ರ 60ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ನಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸರಿಯಾಗಿ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
RCB - PBKS ಹೆಡ್ ಟು ಹೆಡ್:
ಐಪಿಎಲ್ ನಲ್ಲಿ ಒಟ್ಟಾರೆಯಾಗಿ ಉಭಯ ತಂಡಗಳು ಈವರೆಗೆ 29 ಪಂದ್ಯಗಳನ್ನು ಆಡಿವೆ. ಇದರಲ್ಲಿ 13 ಫಮದ್ಯವನ್ನು ಆರ್ಸಿಬಿ ಗೆದ್ದರೆ 16 ಪಂದ್ಯಗಳನ್ನು ಪಮಜಾಬ್ ಗೆದ್ದಿದೆ. ಕಳೆದ ಬಾರಿ ನಡೆದ ಐಪಿಎಲ್ 2021ರಲ್ಲಿ ಆಡಿಕದ 1 ಪಂದ್ಯವನ್ನೂ ಸಹ ಪಂಜಾಬ್ ಕಿಂಗ್ಸ್ ತಂಡ ಗೆದ್ದಿದೆ. ಅದರಲ್ಲಿಯೂ ಮೊದಲು ಬ್ಯಾಟಿಂಗ್ ಮಾಡಿದಾಗ ಆರ್ಸಿಬಿ 7 ಮತ್ತು ಪಂಜಾಬ್ 6 ಬಾರಿ ಗೆದ್ದರೆ, ಚೇಸಿಂಗ್ ನಲ್ಲಿ ಬೆಂಗಳೂರು 6 ಮತ್ತು ಪಂಜಾಬ್ ತಂಡ 10 ಬಾರಿ ಗೆದ್ದಿದೆ. ಒಟ್ಟಾರೆ ಅಂಕಿಅಂಶಗಳ ಪ್ರಕಾರ ಪಂಜಾಬ್ ಕಿಂಗ್ಸ್ ತಂಡವು ಬೆಂಗಳೂರು ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದ್ದಂತೆ ಕಾಣುತ್ತಿದೆ. ಆದರೆ ಈ ಬಾರಿ ಪಂಜಾಬ್ ತಂಡಕ್ಕಿಂತ ಬೆಂಗಳೂರು ತಂಡವು ಹೆಚ್ಚುಬಲಿಷ್ಠವಾಗಿದ್ದಂತೆ ಕಾಣುತ್ತಿದ್ದು, ಇಂದಿನ ಪಂದ್ಯ ಗೆಲ್ಲುವ ಮೆಚ್ಚಿನ ತಂಡವಾಗಿದೆ.
ಇದನ್ನೂ ಓದಿ: Worlds Richest Athlete: ಇವರೇ ವಿಶ್ವದ ಶ್ರೀಮಂತ ಅಥ್ಲೀಟ್‌ಗಳು, ಭಾರತದಲ್ಲಿ ಕೊಹ್ಲಿ ಒಬ್ಬರೇ ಕಿಂಗ್
ಉಭಯ ತಂಡಗಳ ಐಪಿಎಲ್ 2022ರ ಪ್ರದರ್ಶನ:
ಈ ಬಾರಿ ಐಪಿಎಲ್ 2022ರಲ್ಲಿ ರಾಯಲ್ ಚಾಲೆಂಲೆರ್ಸ್ ಬೆಂಗಳೂರು ತಂಡವು ಈವರಗೆ ಒಟ್ಟು 12 ಪಂದ್ಯಗಳನ್ನಾಡಿದ್ದು, 7 ಪಂದ್ಯಗಳಲ್ಲಿ ಗೆದ್ದಿದ್ದು, 5ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಅದರಂತೆ 11 ಪಂದ್ಯವನ್ನಾಡಿ 5ರಲ್ಲಿ ಗೆದ್ದು, 6ರಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದಲ್ಲಿ ಆರ್ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪುವುದು ಖಚಿತವಾದಂತಾಗುತ್ತದೆ.
ಇದನ್ನೂ ಓದಿ: Virat Kohli: ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಔಟ್ ಆಗ್ತಾರಾ ಕೊಹ್ಲಿ? ಚರ್ಚೆಗೆ ಗ್ರಾಸವಾದ BCCI ನಡೆ
RCB - PBKS ಸಂಭಾವ್ಯ ತಂಡ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್.
ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಸಂದೀಪ್ ಶರ್ಮಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ