ಐಪಿಎಲ್ 2022ರ (IPL 2022) 2ನೇ ಫ್ಲೇ ಆಫ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈಗಾಗಲೇ ಗುಜರಾತ್ ಟೈಟನ್ (GT) ತಂಡವು ಫೈನಲ್ ತಲುಪಿದೆ. ಇಂದಿನ ಪಂದ್ಯ ಗೆದ್ದವರು ಮೇ 27ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಎದುರಿಸಲಿದೆ. ಇನ್ನು, ಇಂದಿನ ಪಂದ್ಯವನ್ನು ಗೆದ್ದು ಫೈನಲ್ ಹಂತಕ್ಕೆ ಸಮೀಪಿಸಲು ಉಭಯ ತಂಡಗಳು ಎದುರು ನೋಡುತ್ತಿದೆ. ಅಲ್ಲದೇ ಆರ್ಸಿಬಿ ತಂಡಕ್ಕೆ ಇಮದಿನ ಪಂದ್ಯವನ್ನು ಗೆದ್ದು, ಫೈನಲ್ ಟ್ರೋಫಿ ಗೆಲ್ಲುವ ತವಕದಲ್ಲಿದೆ. ಹಾಗಿದ್ದರೆ, ಉಭಯ ತಂಡಗಳ ಬಲಾಬಲ ಹೇಗಿದೆ ಎಂದು ನೋಡೋಣ.
ಪಂದ್ಯದ ವಿವರ:
ಐಪಿಎಲ್ 2022ರ 2ನೇ ಫ್ಲೇ ಆಫ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಪಿಚ್ ವರದಿ:
ಎರಡೂ ತಂಡಗಳು ಈಡನ್ ಗಾರ್ಡನ್ಸ್ ಪಿಚ್ ಅನ್ನು ಪರಿಗಣಿಸಿ ಹೆಚ್ಚಿನ ಸ್ಪಿನರ್ಸ್ ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮಳೆಯ ಹವಾಮಾನ ಇರುವುದರಿಂದ ತೇವಾಂಶ ಪಂದ್ಯದ ಮೇಲೆ ಪರಿಣಾಮ ಬೀರಲಿದೆ. ಇದಲ್ಲದೇ ಕಳೆದ ಪಂದ್ಯದಲ್ಲಿ ಬೃಹತ್ ಮೊತ್ತವನ್ನೂ ಸಹ ಗುಜರಾತ್ ತಂಡ ಸರಾಗವಾಗಿ ಚೇಸ್ ಮಾಡಿರುವುದರಿಂದ ಟಾಸ್ ಗೆದ್ದ ನಾಯಕ ಇಂದು ಮೊದಲು ಬೌಲಿಂಗ್ ತೆಗದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: RCB ಪಾಳಯದಲ್ಲಿ ಟೆನ್ಷನ್, ಇದೇ ರೀತಿ ನಡೆದರೆ ಈ ಬಾರಿಯೂ ಫೈನಲ್ ತಲುಪುವುದು ಕಷ್ಟವಂತೆ!
LSG vs RCB ಹೆಡ್ ಟು ಹೆಡ್:
ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದ ಆರ್ಸಿಬಿ ಮತ್ತು ಲಕ್ನೋ ತಂಡಗಳಲ್ಲಿ ಬೆಂಗಳೂರು ತಂಡವು ಗೆದ್ದು ಬೀಗಿತ್ತು. ಈ ಪಂದ್ಯದ್ಲಲಿ ನಾಯಕ ಫಾಫ್ ಡು ಪ್ಲೆಸಿಸ್ (96ರನ್, 64 ಎಸೆತ, 11 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ 18 ರನ್ ಗಳ ಗೆಲುವನ್ನು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್ಸಿಬಿ ಗೆಲ್ಲುವ ಫೇವರೇಟ್ ತಂಡವಾಗಿದ್ದರೂ, ಲಕ್ನೋ ತಂಡವನ್ನೂ ಸಹ ಅಷ್ಟು ಸಲೀಸಾಗಿ ಪರಗಣಿಸುವಂತಿಲ್ಲ. ಹೀಗಾಗಿ ಒಂದು ಉತ್ತಮ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಲೀಗ್ ಹಂತದಲ್ಲಿಯೂ 9 ಗೆಲುವಿನೊಂದಿಗೆ 3ನೇ ಸ್ಥಾನದಿಂದ ಫ್ಲೇ ಆಫ್ ಪ್ರವೇಶಿಸಿದರೆ, ಆರ್ಸಿಬಿ 8 ಗೆಲುವಿನೊಂದಿಗೆ 4ನೇ ಸ್ಥಾನದಿಂದ ಫ್ಲೇ ಆಫ್ ಹಂತ್ಕಕೆ ಏರಿತ್ತು.
ಮಳೆ ಬಂದಲ್ಲಿ ಏನಾಗಲಿದೆ ಪಂದ್ಯ?:
ಇಂದು ಕೋಲ್ಕತ್ತಾದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಒಂದು ವೇಳೆ ಮಳೆ ಆದಲ್ಲಿ ಸೂಪರ್ ಓವರ್ ಅಥವಾ ಅವಕಾಶವಿದ್ದಲ್ಲಿ ಪ್ರತಿ ತಂಡಗಳಿಗೂ 5 ಓವರ್ ಗಳ ಪಂದ್ಯ ಆಡಿಸುವ ಅವಕಾಶ ಐಪಿಎಲ್ ನಿಯಮದಲ್ಲಿದೆ. ಇದಲ್ಲದೇ ಸಂಪೂರ್ಣ ಮಳೆಯಿಂದ ಪಂದ್ಯ ರದ್ಧಾದಲ್ಲಿ ಲೀಗ್ ಹಂತದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಹೀಗಾದಲ್ಲಿ 3ನೇ ಸ್ಥಾನದಲ್ಲಿರುವ ಲಕ್ನೋ ತಂಡ ಮುಂದಿನ ಹಂತಕ್ಕೆ ತಲುಪಲಿದೆ.
ಇದನ್ನೂ ಓದಿ: AB de Villiers: RCB ಅಭಿಮಾನಿಗಳಿಗೆ ಗುಡ್ ನ್ಯೂಸ್, ಮುಂದಿನ ವರ್ಷ ಐಪಿಎಲ್ಗೆ ಮರಳಲಿದ್ದಾರೆ ಮಿ. 360!
LSG vs RCB ಸಂಭಾವ್ಯ ತಂಡ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಸಿದ್ದಾರ್ಥ್ ಕೌಲ್ / ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (wk), ಕೆಎಲ್ ರಾಹುಲ್ (c), ಎವಿನ್ ಲೂಯಿಸ್, ದೀಪಕ್ ಹೂಡಾ, ಆಯುಷ್ ಬಡೋನಿ / ಮನನ್ ವೋಹ್ರಾ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್ / ಕೃನಾಲ್ ಪಾಂಡ್ಯ, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ