ಐಪಿಎಲ್ 2022ರ (IPL 2022) 2ನೇ ಫ್ಲೇ ಆಫ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ (KL Rahul) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಫ್ ಡುಪ್ಲೇಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ರಜತ್ ಪಾಟಿದಾರ್ (Rajat Patidar) ಆಕರ್ಷಕ ಶತಕ ಸಿಡಿಸಿದರು. ಈ ಮೂಲಕ ಆರ್ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸುವ ಮೂಲಕ 15 ರನ್ ಗಳಿಂದ ಲಕ್ನೊ ತಂಡ ಆರ್ಸಿಬಿ ಎದುರು ಸೋಲನ್ನಪ್ಪಿತು. ಈ ಮೂಲಕ RCB ತಂಡವು ಮೇ 27ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಟವಾಡಲಿದೆ.
ಆಕರ್ಷಕ ಶತಕ ಸಿಡಿಸಿದ ರಜತ್ ಪಾಟಿದಾರ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಆರ್ಸಿಬಿ ತಂಡವು ಬೃಹತ್ ಮೊತ್ತ ಕಲೆಹಾಕುವ ಮೂಲಕ ಉತ್ತಮ ಮೊತ್ತ ಪೇರೆಪಿಸಿತು. ಆರ್ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಆರ್ಸಿಬಿ ಪರ ಭರ್ಜರಿ ಶತಕ ಸಿಡಿಸಿದ ರಜತ್ ಪಾಟಿದಾರ್ ಕೇವಲ 54 ಎಸೆತದಲ್ಲಿ 7 ಸಿಕ್ಸ್ ಹಾಗೂ 12 ಬೌಂಡರಿಗಳ ನೆರವಿನಿಂದ ಆಕರ್ಷಕ ಶತಕ 112 ರನ್ ಗಳನ್ನು ಸಿಡಿಸಿದರು.
ಉಳಿದಂತೆ ನಾಯಕ ಡುಪ್ಲೇಸಿಸ್ ಶುನ್ಯಕ್ಕೆ ಔಟಾದರೆ, ವಿರಾಟ್ ಕೊಹ್ಲಿ 25 ರನ್, ಮ್ಯಕ್ಸ್ವೆಲ್ 9 ರನ್, ಮಹಿಪಾಲ್ 14 ರನ್ ಮತ್ತು ಕೊನೆಯಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ 23 ಎಸೆತದ್ಲಲಿ 1 ಸಿಕ್ಸ್ ಮತ್ತು 5 ಪೋರ್ ಗಳ ನೆರವಿನಿಂದ 37 ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು.
ಬೌಲಿಂಗ್ ನಲ್ಲಿ ಎಡವಿದಿ ಲಕ್ನೋ:
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆರಂಭಿಸಿದ ಲಕ್ನೋ ತಂಡವು ಮೊದಲು ಆರ್ಸಿಬಿ ತಂಡದ ಮೇಲೆ ಉತ್ತಮ ಹಿಡಿತ ಸಾಧಿಸಿತತ್ಉ, ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ನಾಯಕ ಡುಪ್ಲೇಸಿಸ್ ವಿಕೆಟ್ ಗಳನ್ನು ಉರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ನಂತರ ಬಂದ ರಜತ್ ಪಾಟಿದಾರ್ ಲಕ್ನೋ ಬೌಲರ್ ಗಳ ಬೆವರಿಳಿಸಿದರು. ಲಕ್ನೋ ಪರ ಮೋಶಿನ್ ಖಾನ್, ಕೃನಲ್ ಪಾಂಡ್ಯ, ಆವೇಶ್ ಖಾನ್ ಮತ್ತು ರವಿ ಬಿಶ್ನೋಯ್ ತಲಾ ಒಂದು ವಿಕೆಟ್ ಪಡೆದರು.
ನಾಯಕನ ಆಟವಾಡಿದ ರಾಹುಲ್:
ಇನ್ನು, ಆರ್ಸಿಬಿ ನೀಡಿದ 208 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಲಕ್ನೋ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಲಕ್ನೋ ಪರ ಕ್ವಿಂಟನ್ ಡಿ ಕಾಕ್ ಕೇವಲ 6 ರನ್ ಗೆ ಔಟಾಗಿ ಫೆವೆಲಿಯನ್ ನಡೆದರು. ನಂತರದ್ಲಲಿ ಮನಾನ್ ವೊರ್ಹಾ 19 ರನ್, ಮಾರ್ಕ್ಸ್ ಸ್ಟೋನಿಸ್ 9 ರನ್ ಮತ್ತು ದೀಪಕ್ ಹೂಡಾ 45 ರನ್ ಗಳಿಸಿದರು. ಆದರೆ ನಾಯಕ ಕೆಎಲ್ ರಾಹುಲ್ ನಾಯಕನ ಆಡವಾಡುವ ಮೂಲಕ 58 ಎಸೆತದಲ್ಲಿ 5 ಸಿಕ್ಸ್ಸ ಮತ್ತು 3 ಬೌಂಡರಿಗಳ ನೆರವಿನಿಂದ 79 ರನ್ ಗಳಿಸಿ ಮಿಂಚಿದರು. ಆದರೂ ತಂಡವನ್ನು ಗೆಲುವಿನ ದಡ ಸೇರಸಲು ವಿಫಲರಾಧರು.
ಜೋಶ್ ಹ್ಯಾಜಲ್ವುಡ್ ದಾಳಿಗೆ ತತ್ತರಿಸಿದ ಲಕ್ನೋ:
ಇನ್ನು, ಉತ್ತಮವಾಗಿ ಆಡುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ ತಂಡದ ಬ್ಯಾಟ್ಸ್ಮನ್ ಗಳನ್ನು ನಿಯಂತ್ರಿಸುವಲ್ಲಿ ಜೋಶ್ ಹ್ಯಾಜಲ್ವುಡ್ ಯಶಶ್ವಿಯಾದರು. ಅವರು 4 ಓವರ್ ಮಾಡಿ 43 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೊಹ್ಮದ್ ಸಿರಾಜ್, ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ