ಬುಧವಾರ ನಡೆದ RCB ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ನಡುವಿನ IPL 2022 ಎಲಿಮಿನೇಟರ್ ಪಂದ್ಯದಲ್ಲಿ RCB ಲಕ್ನೋವನ್ನು 14 ರನ್‌ಗಳಿಂದ ಸೋಲಿಸಿತು. ಈ ಸೋಲಿನಿಂದ ಐಪಿಎಲ್‌ನಲ್ಲಿ ಲಕ್ನೋ ಪ್ರಯಾಣ ಅಂತ್ಯಗೊಂಡಿತು. RCB ತನ್ನ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಮೇ 27 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ರಜತ್ ಪಾಟಿದಾರ್ (Rajat Patidar) ಆಕರ್ಷಕ ಶತಕ ಸಿಡಿಸಿದರು. ಈ ಮೂಲಕ ಆರ್ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಮೊತ್ತ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸುವ ಮೂಲಕ 14 ರನ್ ಗಳಿಂದ ಲಕ್ನೊ ತಂಡ ಆರ್ಸಿಬಿ ಎದುರು ಸೋಲನ್ನಪ್ಪಿತು. ಆದರೆ ಪಂದ್ಯದ ವೇಳೆ ಪ್ರೇಕ್ಷಕ ಗ್ಯಾಲರಿಯೊಂದ ವಿರಾಟ್ ಅಭಿಮಾನಿಯೊಬ್ಬ ಕ್ರೀಡಾಂಗಣಕ್ಕೆ ನುಗ್ಗಿದ ಘಟನೆ ನಡೆಯಿತು.
ಕ್ರೀಡಾಂಗಣಕ್ಕೆ ನುಗ್ಗಿದ ವಿರಾಟ್ ಅಭಿಮಾನಿ:
ಇನ್ನು, ಲಕ್ನೋ ಬ್ಯಾಟಿಂಗ್ ವೇಳೆ ಬೌಡರಿ ಗಡಿಯಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ, ವಿರಾಟ್ ಕೊಹ್ಲಿ ಬಳಿಗೆ ಒಳನುಗ್ಗಿದ ವ್ಯಕ್ತಿ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೈದಾನದಲ್ಲಿ ಇದೆಲ್ಲಾ ನಡೆಯುತ್ತಿದ್ದರೂ ವಿರಾಟ್ ಕೊಹ್ಲಿಯ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಮಾಡುತ್ತಿದ್ದ ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್ ಬೌಲಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಲಕ್ನೋ ಬ್ಯಾಟ್ಸ್‌ಮನ್ ದುಷ್ಮಂತ ಚಮೀರಾ ಅವರು ಹರ್ಷಲ್ ಪಟೇಲ್‌ಗೆ ಸಿಕ್ಸರ್ ಬಾರಿಸಿದರು, ನಂತರ ಲಕ್ನೋ ಗೆಲುವಿಗೆ 3 ಎಸೆತಗಳಲ್ಲಿ 16 ರನ್ ಗಳಿಸಬೇಕಾಗಿತ್ತು, ಪ್ರೇಕ್ಷಕರ ಒಳ ಪ್ರವೇಶಿಸಿದ್ದರಿಂದ ಪಂದ್ಯವನ್ನು ಸ್ವಲ್ಪ ಸಮಯ ನಿಲ್ಲಿಸಲಾಯಿತು.
ಇದನ್ನೂ ಓದಿ: IPL 2022: ಈ ಸಲ ಕಪ್ ನಮ್ದೇ ಅಂತಿದ್ದಾರೆ RCB ಫ್ಯಾನ್ಸ್! ಕಾರಣ ಏನು ಗೊತ್ತಾ?
ವೈರಲ್ ಆದ ವಿರಾಟ್ ಪ್ರತಿಕ್ರಿಯೆ:
ಈ ವ್ಯಕ್ತಿ ಸಮೀಪಿಸುತ್ತಿರುವುದನ್ನು ನೋಡಿದ ವಿರಾಟ್ ಭದ್ರತಾ ಸಿಬ್ಬಂದಿಯ ಕಡೆಗೆ ಸನ್ನೆ ಮಾಡಿದರು, ನಂತರ ನಾಲ್ವರು ಭದ್ರತಾ ಸಿಬ್ಬಂದಿ ಅವನನ್ನು ಹಿಡಿದು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪ್ರೇಕ್ಷಕನನ್ನು ಸಿಬ್ಬಂದಿ ಎತ್ತಿಕೊಂಡು ಹೋದಂತಹ ದೃಶ್ಯ ನೋಡಿದ ಕೊಹ್ಲಿ, ಆಶ್ಚರ್ಯವನ್ನು ವ್ಯಕ್ತಪಡಿಸಿ, ನಂತರ ಸಿಬ್ಂದಿ ವ್ಯಕ್ತಿಯನ್ನು ಎತ್ತಿಕೊಂಡು ಹೊದ ರೀತಿಯಲ್ಲಿ ಆ್ಯಕ್ಷನ್ ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
When the intruder towards Virat Kohli at Eden Gardens - VK couldn't control his laugh seeing policeman's reaction 😂 pic.twitter.com/Ctvw8fU4uy
— sohom ᱬ (@AwaaraHoon) May 26, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ