ಐಪಿಎಲ್ 2022ರ (IPL 2022) 2ನೇ ಫ್ಲೇ ಆಫ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ (RCB vs LSG) ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ (KL Rahul) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಫ್ ಡುಪ್ಲೇಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ರಜತ್ ಪಾಟಿದಾರ್ (Rajat Patidar) ಆಕರ್ಷಕ ಶತಕ ಸಿಡಿಸಿದರು. ಈ ಮೂಲಕ ಆರ್ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಇಂದಿನ ಪಂದ್ಯವು ಊಭಯ ತಂಡಗಳೆರಡಕ್ಕೂ ಮಹತ್ವದ್ದಾಗಿದ್ದು, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಆಕರ್ಷಕ ಶತಕ ಸಿಡಿಸಿದ ರಜತ್ ಪಾಟಿದಾರ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಆರ್ಸಿಬಿ ತಂಡವು ಬೃಹತ್ ಮೊತ್ತ ಕಲೆಹಾಕುವ ಮೂಲಕ ಉತ್ತಮ ಮೊತ್ತ ಪೇರೆಪಿಸಿತು. ಆರ್ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಆರ್ಸಿಬಿ ಪರ ಭರ್ಜರಿ ಶತಕ ಸಿಡಿಸಿದ ರಜತ್ ಪಾಟಿದಾರ್ ಕೇವಲ 54 ಎಸೆತದಲ್ಲಿ 7 ಸಿಕ್ಸ್ ಹಾಗೂ 12 ಬೌಂಡರಿಗಳ ನೆರವಿನಿಂದ ಆಕರ್ಷಕ ಶತಕ 112 ರನ್ ಗಳನ್ನು ಸಿಡಿಸಿದರು.
ಉಳಿದಂತೆ ನಾಯಕ ಡುಪ್ಲೇಸಿಸ್ ಶುನ್ಯಕ್ಕೆ ಔಟಾದರೆ, ವಿರಾಟ್ ಕೊಹ್ಲಿ 25 ರನ್, ಮ್ಯಕ್ಸ್ವೆಲ್ 9 ರನ್, ಮಹಿಪಾಲ್ 14 ರನ್ ಮತ್ತು ಕೊನೆಯಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ 23 ಎಸೆತದ್ಲಲಿ 1 ಸಿಕ್ಸ್ ಮತ್ತು 5 ಪೋರ್ ಗಳ ನೆರವಿನಿಂದ 37 ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು.
ಬೌಲಿಂಗ್ ನಲ್ಲಿ ಎಡವಿದಿ ಲಕ್ನೋ:
ಇನ್ನು, ಟಾಸ್ ಗೆದ್ದು ಮೊದಲು ಬೌಲಿಂಗ್ ಆರಂಭಿಸಿದ ಲಕ್ನೋ ತಂಡವು ಮೊದಲು ಆರ್ಸಿಬಿ ತಂಡದ ಮೇಲೆ ಉತ್ತಮ ಹಿಡಿತ ಸಾಧಿಸಿತತ್ಉ, ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ನಾಯಕ ಡುಪ್ಲೇಸಿಸ್ ವಿಕೆಟ್ ಗಳನ್ನು ಉರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ನಂತರ ಬಂದ ರಜತ್ ಪಾಟಿದಾರ್ ಲಕ್ನೋ ಬೌಲರ್ ಗಳ ಬೆವರಿಳಿಸಿದರು. ಲಕ್ನೋ ಪರ ಮೋಶಿನ್ ಖಾನ್, ಕೃನಲ್ ಪಾಂಡ್ಯ, ಆವೇಶ್ ಖಾನ್ ಮತ್ತು ರವಿ ಬಿಶ್ನೋಯ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: IPL 2022: RCB vs LSG ಪಂದ್ಯಕ್ಕೆ ವರುಣನ ಕಾಟ, ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದ BCCI
RCB vs LSG ತಂಡ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್.
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿಕಾಕ್, ಕೆಎಲ್ ರಾಹುಲ್, ಎವಿನ್ ಲೂಯಿಸ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಮನನ್ ವೋರಾ, ಮಾರ್ಕಸ್ ಸ್ಟೊಯ್ನಿಸ್, ಮೊಹ್ಸಿನ್ ಖಾನ್, ಆವೇಶ್ ಖಾನ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ