IPL 2022 RCB vs GT: ಭರ್ಜರಿ ಜಯ ದಾಖಲಿಸಿದ RCB, ಪ್ಲೇ ಆಫ್ ಕನಸು ಇನ್ನೂ ಜೀವಂತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸುವ ಮೂಲಕ ಭರ್ಜರಿ 8 ವಿಕೆಟ್ ಗಳ ಜಯ ದಾಖಲಿಸಿತು.
ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 67ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು (RCB vs GT) ಸೆಣಸಾಡಿದವು. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಫಾಪ್ ಡುಪ್ಲೇಸಿಸ್ (Faf du Plessis) ನಾಯಕತ್ವದ RCB ತಂಡ ಗೆಲ್ಲುವ ಮೂಲಕ ಫ್ಲೇ ಆಫ್ ಹಂತದ ಸಮೀಪಕ್ಕೆ ಬಂದು ನಿಂತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸುವ ಮೂಲಕ ಭರ್ಜರಿ 8 ವಿಕೆಟ್ ಗಳ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್:
ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಗುಜರಾಥ್ ಪರ ವೃದ್ಧಿಮಾನ್ ಸಾಹಾ 31 ರನ್, ಮ್ಯಾಥ್ಯು ವೇಡ್ 16 ರನ್ ಗಳಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 47 ಎಸೆತದಲ್ಲಿ 4 ಪೋರ್ ಮತ್ತು 3 ಸಿಕ್ಸ್ರ್ ಗಳ ನೆರವಿನಿಂದ 62 ರನ್ ಗಳಿಸಿ ಮಿಂಚಿದರು. ಉಳಿದಂತೆ ಡೇವಿಡ್ ಮಿಲ್ಲರ್ 34 ರನ್ ಮತ್ತು ಅಂತಿಮವಾಗಿ ರಷೀಧ್ ಖಾನ್ 6 ಎಸೆತದಲ್ಲಿ 19 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಾಯಕರಾದರು.
ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಬೆಂಗಳೂರು ತಂಡ ಗಯಜರಾತ್ ತಂಡದ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆರ್ಸಿಬಿ ಪರ ಜೋಸ್ ಹೆಝಲ್ವುಡ್ 2 ವಿಕೆಟ್ ಪಡೆದರೆ, ಗ್ಲೇನ್ ಮ್ಯಾಕ್ಸ್ವೇಲ್ ಮತ್ತುವನಿಂದು ಹಸರಂಗ ತಲಾ 1 ವಿಕೆಟ್ ಪಡೆದು ಮಿಂಚಿದರು. ಉಳಿದ ಬೌಲರ್ ಗಳು ಸಹ ಉತ್ತಮ ಬೌಲಿಂಗ್ ಮಾಡಿ ಗುಜರಾತ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೆ ಹರ್ಷಲ್ ಪಟೇಲ್ ಕೇವಲ 1 ಓವರ್ ಬೌಲ್ ಮಾಡಿ ನಿರಾಸೆ ಮೂಡಿಸಿದರು.
ಗುಜರಾತ್ ಟೈಟನ್ಸ್ ನೀಡಿದ್ದ ಮೊತ್ತವನ್ನು ಬನ್ನಟ್ಟಿದ ಆರ್ಸಿಬಿ ತಂಡಕ್ಕೆ ಓಪನರ್ ಗಲಾದ ಡುಪ್ಲೇಸಿಸ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭನೀಡಿದರು. ಅದರಲ್ಲಿಯೂ ವಿರಾಟ್ ಕೊಹ್ಲಿ ಸೂಪರ್ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಮತ್ತೆ ಫಾರ್ಮ್ಗೆ ಮರಳಿದ ಸೂಚನೆ ನೀಡಿದರು. ಕೊಹ್ಲಿ 54 ಎಸೆತದಲ್ಲಿ 2 ಸಿಕ್ಸ್ ಮತ್ತು 8 ಬೌಂಡರಿಗಳ ನೆರವಿನಿಂದ 73 ರನ್ ಗಳಿಸಿ ಮಿಂಚಿದರು. ಉಳಿದಂತೆ ನಾಯಕ ಪಾಫ್ ಡು ಪ್ಲೇಸಿಸ್ 44 ರನ್, ಗ್ಲೇನ್ ಮ್ಯಾಕ್ಸ್ವೆಲ್ 40 ರನ್ ಮತ್ತು ದಿನೇಶ್ ಕಾರ್ತಿಕ್ 2 ರನ್ ಗಳಿಸುವ ಮೂಲಕ ತಂಡದ ಜಯ ಗಳಿಸುವಲ್ಲಿ ಸಹಾಯಕರಾದರು.
That's that from Match 67 as #RCB win by 8 wickets and are now 4th on the #TATAIPL Points Table.
ಇನ್ನು, ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಗುಜರಾತ್ ತಂಡವು ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಯಿತಿ. ಗುಜರಾತ್ ಪರ ಯಾವೊಬ್ಬ ಬೌಲರ್ ಸಹ ಆರ್ಸಿಬಿ ಬ್ಯಾಟರ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಜಿಟಿ ಪರ ರಷೀಧ ಖಾನ್ ಕೇವಲ 2 ವಿಕೆಟ್ ಪಡೆದು ಮಿಂಚಿದರು.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ