ಐಪಿಎಲ್ 2022ರ (IPL 2022) 15ನೇ ಆವೃತ್ತಿಯ 67ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು (RCB vs GT) ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಲಿದೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ತಲುಪಿರುವ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ ಇಂದಿನ ಪಂದ್ಯ ಔಪಚಾರಿಕವಾಗಿದೆ. ಆದರೆ ಫಾಪ್ ಡುಪ್ಲೇಸಿಸ್ (Faf du Plessis) ನಾಯಕತ್ವದ RCB ತಂಡಕ್ಕೆ ಇಂದಿನ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಫ್ಲೇ ಆಫ್ ಹಂತಕ್ಕೆ ಏರಲು ಬೆಂಗಳೂರು ತಂಡವು ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಇಂದಿನ ಪಂದ್ಯ ಗೆದ್ದಲ್ಲಿ ಆರ್ಸಿಬಿ ತಂಡ ಫ್ಲೇ ಆಫ್ ತಲುಪುವುದು ಖಚಿತವಾಗುತ್ತದೆ.
ಹಾಗಿದ್ದರೆ ಉಭಯ ತಂಡಗಳಲ್ಲಿ ಯಾವ ತಂಡ ಎಷ್ಟು ಬಲಿಷ್ಠವಾಗಿದೆ ಹಾಗೂ ಯಾವ ತಂಡ ಇಂದು ಗೆಲ್ಲುವ ಫೆವರೇಟ್ ಆಗಿದೆ ಎಂದು ನೋಡುವುದಾದರೆ, 2 ತಂಡಗಳ ಐಪಿಎಲ್ ಅಂಕಿಅಂಶ ಹಾಗೂ ಈ ಬಾರಿ ಐಪಿಎಲ್ ನ ಪ್ರದರ್ಶನ ನೋಡೋಣ.
ಪಂದ್ಯದ ವಿವರ:
ಐಪಿಎಲ್ 2022ರ 67ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
ಇದನ್ನೂ ಓದಿ: IPL 2022 LSG vs KKR: ಲಕ್ನೋ ತಂಡಕ್ಕೆ ರೋಚಕ ಗೆಲುವು, ಪ್ಲೇ ಆಫ್ ಪ್ರವೇಶಿಸಿದ ರಾಹುಲ್ ಪಡೆ
ಪಿಚ್ ವರದಿ:
ವಾಂಖೆಡೆ ಸ್ಟೇಡಿಯಂನಲ್ಲಿ ಈ ವರ್ಷ ನಡೆದ ಬಹುತೇಕ ಪಂದ್ಯಗಳು ಕಡಿಮೆ ಸ್ಕೋರ್ ಗಳಲ್ಲಿ ಅಂತ್ಯಗೊಂಡಿತ್ತು. ಇಲ್ಲಿ ಬೌಲರ್ ಗಳು ಹೆಚ್ಚು ಪ್ರಭಾವಶಾಲಿಯಾಗಿಲಿದ್ದು, ಸಂಜೆಯ ಪಂದ್ಯವಾಗಿದ್ದರಿಂದ ತೇವಾಂಶ ಮತ್ತು ಇಬ್ಬನಿಯು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಹೀಗಾಗಿ ಮೊದಲು ಟಾಸ್ ಗೆದ್ದ ನಾಯಕ ಬೌಲಿಂಗ್ ತೆಗೆದುಕೊಳ್ಳುವ ಸಾಧ್ಯತೆ ಇದರುತ್ತದೆ.
ಐಪಿಎಲ್ 2022ರಲ್ಲಿ ಉಭಯ ತಂಡಗಳ ಪ್ರದರ್ಶನ:
ಐಪಿಎಲ್ 2022ರಲ್ಲಿ ಹೊಸ ತಂಡವಾದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಭರ್ಜರಿ ಪ್ರದರ್ಶನ ತೋರುತ್ತಿದೆ. ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ 10ರಲ್ಲಿ ಗೆದ್ದು, ಕೇವಲ 3ರಲ್ಲಿ ಸೋಲುವ ಮೂಲಕ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲದೇ ಗುಜರಾತ್ ಈ ಬಾರಿ ಐಪಿಎಲ್ ನಲ್ಲಿ ಫ್ಲೇ ಆಫ್ ಹಂತಕ್ಕೆ ತಲುಪಿದ ಮೊದಲ ತಂಡವಾಗಿದೆ. ಇನ್ನು, ದುಪ್ಲೇಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 6ರಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಫ್ಲೇ ಆಫ್ ತಲುಪಲು ಆರ್ಸಿಬಿ ತಂಡಕ್ಕೆ ಇಂದಿನ ಪಂದ್ಯ ಮಹತ್ವದ್ದಾಗಿದೆ.
ಇದನ್ನೂ ಓದಿ: Sara Tendulkar: ಸಾರಾ ತೆಂಡೂಲ್ಕರ್ ಲುಕ್ಗೆ ಮನಸೋತ ಖ್ಯಾತ ಕ್ರಿಕೆಟಿಗನ ಪತ್ನಿ, ರಾಜಕುಮಾರಿ ಹಾಗಿದ್ದಾರಂತೆ ಸಾರಾ!
ಗೇಲ್ಲಲೇ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿ RCB:
ಇನ್ನು, ಬೆಂಗಳೂರು ತಂಡವು ಫ್ಲೇ ಆಫ್ ಗೆ ತಲುಪಬೇಕಾದ್ದಲ್ಲಿ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ತ ಸ್ಥಿತಿಯಲ್ಲಿದೆ. ಈಗಾಗಲೇ ಪಾಯಿಂಟ್ ಟೇಬಲ್ ನಲ್ಲಿ 5ನೇ ಸ್ಥಾನದಲ್ಲಿರುವ ಆರ್ಸಿಬಿ ಇಂದಿನ ಪಂದ್ಯ ಗೆದ್ದಲ್ಲಿ 4ನೇ ರ್ಸಥಾನಕ್ಕೇರುವ ಮೂಲಕ ಫ್ಲೇ ಆಫ್ ಗೆ ತಲುಪಲಿದೆ. ಆದರೆ ಇಂದಿನ ಪಂದ್ಯವನ್ನೂ ಸಹ ಹೆಚ್ಚಿನ ರನ್ ರೇಟ್ ಮೂಲಕ ಗೆಲ್ಲಬೇಕಿದೆ. ಅದಲ್ಲದೇ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲಬೇಕಿದೆ. ಹಾಗಿದ್ದಲ್ಲಿ ಮಾತ್ರ ಎಂಗಳೂರು ತಂಡ ಫ್ಲೇ ಆಫ್ ಹಂತಕ್ಕೇರಲಿದೆ.
RCB vs GT ಸಂಭಾವ್ಯ ತಂಡ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (c), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (WK), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಮ್ಯಾಥ್ಯೂ ವೇಡ್/ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ಸಿ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಲ್/ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ